ಕನ್ನಡಪ್ರಭ ವಾರ್ತೆ ಮೈಸೂರು
ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಜೂ. 3ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಸುತ್ತೂರು ಮಠಕ್ಕೆ ಭಾನುವಾರ ಭೇಟಿ ನೀಡಿದ್ದರು. ಬಳಿಕ ಮಾತನಾಡಿದ ಅವರು, ಈಗಾಗಲೇ ಎರಡು ಸುತ್ತು ಚುನಾವಣೆ ಪ್ರಚಾರ ಮುಗಿಸಿದ್ದೇನೆ, ಈಗಾಗಲೇ 4 ಬಾರಿ ಶಿಕ್ಷಕರು ನನ್ನನ್ನು ಕೈಹಿಡಿದಿದ್ದಾರೆ. 5ನೇ ಬಾರಿಯೂ ಕೂಡ ಹಿಡಿಯಲಿದ್ದಾರೆ ಎಂಬ ವಿಶ್ವಾಸವಿದೆ. ನಾಲ್ಕು ಜಿಲ್ಲೆಗಳಲ್ಲಿ ಶಿಕ್ಷಕರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಅವರು ಹೇಳಿದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಐ.ಟಿ.ಐ. ಪ್ರಸಾದ್, ಜಯರಾಮ್ ಕೀಲಾರ, ಕೆ.ವಿ. ಮಲ್ಲೇಶ್, ಕೆ.ಎಸ್. ಷಡಕ್ಷರಿ, ಟಿ.ಎಸ್. ಬಳ್ಳಾರಿ ಗೌಡ, ಮೂಗೂರು ಕುಮಾರಸ್ವಾಮಿ, ಪ್ರೊ. ಶಂಕರೇಗೌಡ, ಚಾಮರಾಜನಗರ ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ವೀರಭದ್ರಸ್ವಾಮಿ, ಪ್ರಭಾಕರ್, ಮಹದೇಶ್ವರ ಸ್ವಾಮಿ, ಶಿವಶಂಕರ್, ಸುದೀಪ್ ಮೊದಲಾದವರು ಇದ್ದರು.