- ದೆಹಲಿಮಟ್ಟಕ್ಕೆ ನನ್ನ ಹೆಸರು ತಲುಪಿಸುವಲ್ಲಿ ಸಿಎಂ ಪಾತ್ರವೂ ಮಹತ್ವದ್ದು: ಪಕ್ಷೇತರ ಅಭ್ಯರ್ಥಿ ಹೇಳಿಕೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ನಗರದ ತಮ್ಮ ಗೃಹ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಅನಿವಾರ್ಯತೆ ಇದ್ದು, ಇದೇ ಕಾರಣಕ್ಕೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿದರೆ ತಮಗೆ ಮತ ನೀಡಿದಂತೆ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ ಎಂದರು.
ಓರ್ವ ರಾಜಕಾರಣಿಯಾಗಿ ಸಿದ್ದರಾಮಯ್ಯ ಅಂತಹ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ವಿನಯಕುಮಾರ ಗೆದ್ದರೆ ಮೋದಿಯಿಂದ ಅನುದಾನ ತರಲು ಆಗುವುದಿಲ್ಲವೆಂದಿದ್ದಾರೆ. ಈ ಮೂಲಕ ನನಗೆ ಪರೋಕ್ಷವಾಗಿ ಸಿದ್ದರಾಮಯ್ಯ ಆಶೀರ್ವಾದ ಮಾಡಿದ್ದಾರೆ ಎಂದು ತಿಳಿಸಿದರು.ಕಾಗಿನೆಲೆ ಸ್ವಾಮೀಜಿ ಹಾಗೂ ಸಿಎಂ ಸಿದ್ದರಾಮಯ್ಯ ನನಗೆ ಕಣದಿಂದ ಹಿಂದೆ ಸರಿಯುವಂತೆ ಹೇಳಿದಾಗ ಎರಡು ದಿನ ಕಾಲಾವಕಾಶ ಕೇಳಿದ್ದೆ. ಕ್ಷೇತ್ರದ ಜನರ ಒತ್ತಾಯಕ್ಕೆ ಮಣಿದು ನಾನು ಸ್ಪರ್ಧೆ ಮಾಡಿದ್ದೇನೆ. ಕೆ.ಎಸ್.ಈಶ್ವರಪ್ಪ ಕುಮ್ಮಕ್ಕು, ಭೈರತಿ ಬಸವರಾಜ ಹಿಂದಿದ್ದಾರೆಂಬುದೆಲ್ಲಾ ಸತ್ಯಕ್ಕೆ ದೂರವಾದ ಸಂಗತಿ. ಭೈರತಿ ಬಸವರಾಜರನ್ನು ಆರೇಳು ವರ್ಷದ ಹಿಂದೆ ಭೇಟಿ ಮಾಡಿದ್ದಷ್ಟೇ ಎಂದು ಸ್ಪಷ್ಟಪಡಿಸಿದರು.
ಕೇವಲ ಸಿದ್ದೇಶ್ವರ, ಶಾಮನೂರು ಅವರ ಮನೆಯವರ ಸ್ಪರ್ಧೆಯಿಂದ ಮತದಾರರಿಗೆ ಇಬ್ಬರಲ್ಲಿ ಒಬ್ಬರಿಗೆ ಮತ ಹಾಕುವ ಅನಿವಾರ್ಯತೆ ಇತ್ತು. ಇದೀಗ ನನ್ನ ಸ್ಪರ್ಧೆಯಿಂದಾಗಿ ಹೊಸ ಮುಖ, ಹೊಸಬರಿಗೆ, ಬದಲಾವಣೆಗೂ ಮತದಾರರಿಗೆ ಅವಕಾಶ ಸಿಕ್ಕಂತಾಗಿದೆ. ಆದರೆ, ನನ್ನ ವ್ಯಕ್ತಿತ್ವ, ವೇಗವನ್ನು ಗುರುತಿಸಿ, ಸಾಕಷ್ಟು ಅಹಿಂದ ಮತ್ತು ಪಂಚಮಸಾಲಿ ನಾಯಕರು ನನಗೆ ಬೆಂಬಲ ನೀಡುತ್ತಿದ್ದಾರೆ. ಕನಿಷ್ಠ 4 ಲಕ್ಷಕ್ಕಿಂತಲೂ ಅಧಿಕ ಮತಗಳನ್ನು ನಾನು ಪಡೆಯುತ್ತೇನೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
- - - ಕೋಟ್‌ಭೈರತಿ ಬಸವರಾಜ ನನ್ನ ಮನೆಯನ್ನೂ ನೋಡಿಲ್ಲ. ನನ್ನನ್ನು ಭೇಟಿಯಾಗಿಲ್ಲ, ನಾನೂ ಭೇಟಿ ಮಾಡಿಲ್ಲ. ಯಾವುದೇ ಡೀಲ್ ನಡೆದಿಲ್ಲ. ಉದ್ದೇಶಪೂರ್ವಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂತಹ ಹೇಳಿಕೆ ನೀಡಿಸಿದ್ದಾರೆ. ಈಗಾಗಲೇ ದಾವಣಗೆರೆ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದೇನೆ. ದಿನದಿಂದ ದಿನಕ್ಕೆ ಬೆಂಬಲ ಮತ್ತು ವರ್ಚಸ್ಸು ಹೆಚ್ಚಾಗುತ್ತಿದೆ
- - - -4ಕೆಡಿವಿಜಿ15: