ಬೆಳ್ತಂಗಡಿ: ಶಾಲಾ ಶಿಕ್ಷಕರು ಪಾಠಮಾಡುವ ಜತೆಗೆ ಹೆಚ್ಚುವರಿಯಾಗಿ ಬಿಎಲ್ ಒ ಹುದ್ದೆ ಕರ್ತವ್ಯವನ್ನೂ ಮಾಡಬೇಕಾಗಿದೆ. ಇದು ಶಿಕ್ಷಕರ ಅಸಹನೆಗೆ ಕಾರಣವಾಗಿದೆ. ಮಕ್ಕಳಿಗೆ ಪಾಠ ಮಾಡುವುದು ನಾವು ಯಾವಾಗ ಎಂದು ಪ್ರಶ್ನಿಸಿಕೊಳ್ಳುವಂತಾಗಿದೆ.
ಪ್ರಮುಖ ಕೊಂಡಿ: ಬಿಎಲ್ ಒ ಎಂದರೆ ಮತಗಟ್ಟೆ ಮಟ್ಟದ ಅಧಿಕಾರಿ. ಭಾರತ ಚುನಾವಣಾ ಆಯೋಗ ಮತ್ತು ಮತದಾರರ ನಡುವಿನ ಪ್ರಮುಖ ಕೊಂಡಿಯಾಗಿದ್ದು, ಮತದಾರರ ಪಟ್ಟಿ ಪರಿಷ್ಕರಣೆ, ಹೊಸ ಮತದಾರರ ನೋಂದಣಿ ಮತ್ತು ಮತದಾರರ ಮಾಹಿತಿ ಪರಿಶೀಲನೆ ಕಾರ್ಯಗಳನ್ನು ಮಾಡುತ್ತಾರೆ. ಇವರು ಮತದಾರರಿಗೆ ಮಾರ್ಗದರ್ಶಿಯಾಗಿ ಕಾರ್ಯ ನಿರ್ವಹಿಸಬೇಕು.ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದ್ದು ಈಗ ಇವರಿಗೆ ಈಗಾಗಲೇ 2002 ಹಾಗೂ 2025ರ ಮತದಾರರ ಪಟ್ಟಿಯನ್ನು ನೀಡಿರುತ್ತಾರೆ. ಇದರಲ್ಲಿ ಎರಡೂ ಪಟ್ಟಿಯಲ್ಲಿ ಇರುವ ಮತದಾರರನ್ನು ಗುರುತಿಸಿ ಅವರನ್ನು ಆಪ್ ನಲ್ಲಿ ಮ್ಯಾ ಪಿಂಗ್ ಮಾಡಬೇಕಾಗುತ್ತದೆ. ವ್ಯಕ್ತಿಗಳ ಮಕ್ಕಳು, ಮೊಮ್ಮಕ್ಕಳು 2025ರ ಮತ ಪಟ್ಟಿಯಲ್ಲಿ ಇದ್ದರೆ ಅವರ ನಂತರದಲ್ಲಿ ಆ ಊರಿಗೆ ಹೊಸದಾಗಿ ಬಂದವರು ಹಾಗೂ ವಿವಾಹವಾಗಿ ಬಂದ ಹೆಣ್ಣು ಮಕ್ಕಳನ್ನು ಮ್ಯಾಪಿಂಗ್ ಮಾಡುವುದಕ್ಕಾಗಿ ಅವರ ಮೂಲ ಊರಿನಿಂದ ಅಂದರೆ 2002ರಲ್ಲಿ ಅವರು ಅಥವಾ ಅವರ ತಂದೆ, ತಾಯಿ ಯಾವ ಊರಿನಲ್ಲಿ ಮತದಾನ ಮಾಡಿರುತ್ತಾರೋ ಅಲ್ಲಿಂದ 2002ರ ಮತದಾರ ಪಟ್ಟಿಯಿಂದ ಕ್ರಮ ಸಂಖ್ಯೆ ಭಾಗ ಸಂಖ್ಯೆ ಹಾಗೂ ವಿಧಾನಸಭಾ ಕ್ಷೇತ್ರಗಳನ್ನು ಸಂಗ್ರಹಿಸಿಕೊಂಡು ಅವರನ್ನು ಆಪ್ ಮೂಲಕ ಮ್ಯಾಪಿಂಗ್ ಮಾಡಲಾಗುತ್ತದೆ.
ಕೆಲಸದೊತ್ತಡ:ಈ ಕಾರ್ಯಕ್ಕಾಗಿ ಶಿಕ್ಷಕರು ದಿನವಿಡೀ ಕುಳಿತರು ಮುಗಿಯಲಾಗದಷ್ಟು ಕೆಲಸದೊತ್ತಡವನ್ನು ಅನುಭವಿಸಬೇಕಾಗುತ್ತದೆ. ಜನರಿಂದ ಮಾಹಿತಿ ಬಾರದಿದ್ದಾಗ ಅನಿವಾರ್ಯವಾಗಿ ಮತದಾರ ಪಟ್ಟಿಯ ಲಿಂಕ್ ಮೂಲಕ ಆ ಊರಿನ ಮತದಾರ ಪಟ್ಟಿಯನ್ನು ಡೌನ್ ಲೋಡ್ ಮಾಡಿಕೊಂಡು ತಾವೇ ಖುದ್ದಾಗಿ ಅವರ ಮನೆಯವರ ಸಂಬಂಧಿಕರ ಹೆಸರನ್ನು ಹುಡುಕಿಕೊಂಡು ಹೊಂದಾಣಿಕೆ ಮಾಡಬೇಕಾಗುತ್ತದೆ.ಈಗ ಹೊಸದಾದ ಕಾರ್ಯ ವೊಂದು ಸೇರ್ಪಡೆಯಾಗಿದೆ. ಬ್ಲಾಕ್ ಅಂಡ್ ವೈಟ್ ಇದ್ದ ಹಳೆಯ ವೋಟರ್ ಐಡಿ ಹೊಂದಿರುವ ಮತದಾರರಿಗೆ ಕಲರ್ ಫೋಟೊ ಮಾಡುವಂತೆ ತಿಳಿಸಲಾಗಿದೆ. ಇದಕ್ಕಾಗಿ ಊರ ಜನರೆಲ್ಲರೂ ಬಿಎಲ್ ಒ ಶಿಕ್ಷಕರಾಗಿರುವ ಶಾಲೆಗೆ ಬರತೊಡಗಿದ್ದಾರೆ. ಸಂಜೆಯಾದರೆ ಶಿಕ್ಷಕರ ಮನೆಗಳಿಗೂ ಬರತೊಡಗಿದ್ದಾರೆ.
ಇತರ ಕೆಲಸಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವುದು ಅಥವಾ ತಿದ್ದುಪಡಿ ಮಾಡುವುದು, ಕೆಲವೊಮ್ಮೆ ವಿವಾಹವಾಗಿ ಹೋದವರ ಅಥವಾ ಮರಣ ಹೊಂದಿದವರ ಹೆಸರನ್ನು ತೆಗೆದುಹಾಕುವ ಅಥವಾ ಶಿಫ್ಟಿಂಗ್ ಮಾಡುವ ಕಾರ್ಯದ ಒತ್ತಡವು ಸೇರಿರುತ್ತದೆ. ಜತೆಗೆ ತಮ್ಮ ಮತದಾರ ಕಾರ್ಡಿನಲ್ಲಿ ಯಾವುದಾದರೂ ತಿದ್ದುಪಡಿ ಇದ್ದರೆ ಅದನ್ನು ಕೂಡ ಮಾಡಬೇಕಾಗುತ್ತದೆ. ಹೊಸ ಮತದಾರರನ್ನು ಸೇರಿಸುವುದು. 18 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಮತದಾರ ಕಾರ್ಡ ನ್ನು ನೋಂದಣಿ ಮಾಡುವ ಕೆಲಸವೂ ಕೂಡ ಶಿಕ್ಷಕರಿಂದ ನಡೆಯುತ್ತಿದೆ. ಮತದಾನದ ಸಂದರ್ಭದಲ್ಲಿ ಮತದಾನದ ಮಹತ್ವದ ಅರಿವನ್ನುಂಟು ಮಾಡುವುದು, ಗುರುತಿನ ಚೀಟಿ ವಿತರಣೆ ಕೆಲಸವು ಇದೆ.‘ಶಿಕ್ಷಕರಿಗೆ ಈಗಾಗಲೇ ಅನ್ಯ ಕೆಲಸಗಳ ಒತ್ತಡ ಹೆಚ್ಚಾಗಿರುವುದರಿಂದ, ಪಾಠ–ಪ್ರವಚನಗಳ ಕಡೆಗೆ ಹೆಚ್ಚು ಗಮನ ಕೊಡಲಾಗುತ್ತಿಲ್ಲ. ಕೆಲವೆಡೆ ಏಕ ಶಿಕ್ಷಕರಿರುವ ಶಾಲೆಯ ಶಿಕ್ಷಕರನ್ನು ಸಹ ಬಿಎಲ್ ಒಗಳಾಗಿ ನೇಮಿಸಲಾಗಿದೆ ಎಂಬ ಕೂಗು ಕೇಳಿಬರುತ್ತಿದೆ.
ಮುಂದಿನ ಹಂತದಲ್ಲಿ ಈ ಕರ್ತವ್ಯಕ್ಕೆ ಇತರ ಇಲಾಖೆಗಳ ಸಿಬ್ಬಂದಿಯನ್ನು ಬಳಸಿಕೊಂಡು ಶಿಕ್ಷಕರ ಹೊರೆ ಇಳಿಸುವ ಚಿಂತನೆ ನಡೆದಿದೆ. ಈಗಾಗಲೇ ಹಲವೆಡೆ ಶಿಕ್ಷಕರಿಗೆ ಬಿಎಲ್ ಒ ಕರ್ತವ್ಯದಿಂದ ವಿನಾಯಿತಿ ನೀಡಲಾಗಿದೆ.ದರ್ಶನ್ ಎಚ್.ವಿ., ಜಿಲ್ಲಾಧಿಕಾರಿ, ದಕ.ಫೊಟೊ -- ಬಿ.ಎಲ್.ಒ. ಕೆಲಸದಿಂದ ವಿನಾಯಿತಿ ನೀಡುವಂತೆ ಬೆಳ್ತಂಗಡಿ ತಾಲೂಕಿನ ಶಿಕ್ಷಕರು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.