ವಿದ್ಯಾರ್ಥಿಗಳ ಜೊತೆ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಸಂವಾದ

KannadaprabhaNewsNetwork |  
Published : Jul 05, 2026, 01:45 AM IST
4ಕೆಎಂಎನ್ ಡಿ12 | Kannada Prabha

ಸಾರಾಂಶ

ಶಾಲೆಗೆ ಟಿವಿ ಮತ್ತು ಟ್ಯಾಬ್ ನೀಡಲಾಗಿದೆ. ಇದು ಮಕ್ಕಳಲ್ಲಿ ಕಲಿಕಾ ಮಟ್ಟ ಹೆಚ್ಚಿಸಲು ಅನುಕೂಲವಾಗಿದೆ. ಪಠ್ಯ ಪುಸ್ತಕಗಳಿಗಿಂತಲೂ ದೃಶ್ಯ ಮತ್ತು ಧ್ವನಿಯ ಮೂಲಕ ಕಲಿಕಾ ವಿಧಾನ ಮಕ್ಕಳಲ್ಲಿ ಶೀಘ್ರ ಗ್ರಹಣ ಶಕ್ತಿ ಯನ್ನು ಹೆಚ್ಚಿಸುತ್ತದೆ.

ಹಲಗೂರು:

ಸಮೀಪದ ಗುಂಡಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಶಾಲೆ ನೂತನ ಕಟ್ಟಡ ಉದ್ಘಾಟನೆಗೆ ಆಗಮಿಸಿದ ಬಿಇಒ ಅವರು, ಮಕ್ಕಳೊಂದಿಗೆ ಸಂವಾದ ನಡೆಸಿ ನಮ್ಮ ಪ್ರವಾಸಿ ತಾಣಗಳು ಎಲ್ಲೆಲ್ಲಿವೆ. ಪರಿಸರ, ಶುದ್ಧ ಆಹಾರ ಸೇವನೆ, ಹೆಚ್ಚು ಸಾವಯವ ತರಕಾರಿಗಳನ್ನು ಉಪಯೋಗದಿಂದಾಗುವ ಆರೋಗ್ಯ ಲಾಭಗಳ ಬಗ್ಗೆ ತಿಳಿಸಿದರು.

ಈ ಶಾಲೆಗೆ ಟಿವಿ ಮತ್ತು ಟ್ಯಾಬ್ ನೀಡಲಾಗಿದೆ. ಇದು ಮಕ್ಕಳಲ್ಲಿ ಕಲಿಕಾ ಮಟ್ಟ ಹೆಚ್ಚಿಸಲು ಅನುಕೂಲವಾಗಿದೆ. ಪಠ್ಯ ಪುಸ್ತಕಗಳಿಗಿಂತಲೂ ದೃಶ್ಯ ಮತ್ತು ಧ್ವನಿಯ ಮೂಲಕ ಕಲಿಕಾ ವಿಧಾನ ಮಕ್ಕಳಲ್ಲಿ ಶೀಘ್ರ ಗ್ರಹಣ ಶಕ್ತಿ ಯನ್ನು ಹೆಚ್ಚಿಸುತ್ತದೆ ಎಂದರು.

ಈ ಶಾಲೆಯಲ್ಲಿ ಕಲಿಕಾ ನ್ಯೂನ್ಯತೆ ಇರುವ ಮಕ್ಕಳ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಅವರಿಗೆ ಪ್ರತ್ಯೇಕವಾಗಿ ನುರಿತ ಶಿಕ್ಷಕರ ಮೂಲಕ ತರಬೇತಿ ನೀಡಿ ಅವರನ್ನು ಇತರ ಮಕ್ಕಳ ಜೊತೆ ಕಲಿಕೆಯಲ್ಲಿಮುಂದೆ ತರಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಮಳವಳ್ಳಿ ತಾಲೂಕಿನಲ್ಲಿ ಸರ್ಕಾರಿ ಶಾಲೆಗಳನ್ನು ಡಿಜಿಟಲೀಕರಣ ಮಾಡಿ ಮಕ್ಕಳ ಕಲಿಕೆಗೆ ಅದ್ಭುತ ಅವಕಾಶ ಮಾಡಿಕೊಟ್ಟ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಧನ್ಯವಾದ ಹೇಳಿದರು.ಮೇಲುಕೋಟೆಗೆ ಇಂದು ನಾಗಲಕ್ಷ್ಮಿ ಚೌದರಿ ಭೇಟಿ

ಮೇಲುಕೋಟೆ: ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ಜುಲೈ 5ರಂದು ಮೇಲುಕೋಟೆಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಆಗಮಿಸಿ ಚೆಲುವನಾರಾಯಣ ಸ್ವಾಮಿ ದರ್ಶನ ಪಡೆಯಲಿದ್ದಾರೆ. ನಂತರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಇದೇ ವೇಳೆ ಸ್ಥಳೀಯ ಸಮಸ್ಯೆಗಳ ಬಗ್ಗೆಯೂ ಪರಿಶೀಲನೆ ಮಾಡಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಿದ್ದಾರೆ ಎಂದು ಆಯೋಗದ ಮೂಲಗಳು ತಿಳಿಸಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಾಗಶೆಟ್ಟಹಳ್ಳಿ ಬಳಿ ಮಲತ್ಯಾಜ್ಯ ಸಂಸ್ಕರಣ ಘಟಕ ಉದ್ಘಾಟನೆ
ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ