ಕನ್ನಡಪ್ರಭ ವಾರ್ತೆ ಬೀದರ್
ನಗರದ ಬಿ.ವಿ.ಬಿ ಕಾಲೇಜಿನ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ, ರೋಟರಿ ಕ್ಲಬ್, ಸಿಲ್ವರ್ ಸ್ಟಾರ್ ಇವರುಗಳ ಸಂಯುಕ್ತಾ ಶ್ರಯದಲ್ಲಿ ಒಳ್ಳೆಯದಕ್ಕಾಗಿ ಒಗ್ಗಟ್ಟು ಎಂಬ ಘೋಷ ವಾಕ್ಯದೊಂದಿಗೆ ರಕ್ತದಾನದ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ದೀಪಾ ರಾಗ ಮಾತನಾಡಿ, ರಕ್ತದಾನ ಮಹಾದಾನ, ಅನ್ನದಾನ, ನೇತ್ರದಾನ, ವಿದ್ಯಾದಾನ ಇವೆಲ್ಲವುಕ್ಕಿಂತ ಮಿಗಲಾಗಿ ಮತ್ತೊಬ್ಬರ ಪ್ರಾಣ ಉಳಿಸುವ ರಕ್ತದಾನ ಶ್ರೇಷ್ಠದಾನವಾಗಿದೆ. ರಕ್ತದಾನ ಮಾಡಿದ ರಕ್ತವನ್ನು ನಾಲ್ಕು ಘಟಕಗಳಾಗಿ ವಿಂಗಡಿಸಿ ಶೇಖರಣೆ ಮಾಡಬಹುದು ಇದರಲ್ಲಿ ಪ್ಲಾಸ್ಮಾ, ಬಿಳಿ ರಕ್ತ ಕಣಗಳು, ಕೆಂಪು ರಕ್ತ ಕಣಗಳು ಹಾಗೂ ಪ್ಲೇಟ್‌ಲೇಟ್ಸ್ ಈ ರೀತಿಯಾಗಿ ವಿಂಗಡಿಸಿ ನಾಲ್ಕು ಜೀವಗಳನ್ನು ಉಳಿಸಬಹುದು ಎಂದು ತಿಳಿಸಿದರು.ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಅಂಜನಾ ಆರ್. ವಾಲಿ, ಆದೀಶ್ ಆರ್.ವಾಲಿ, ಬಸವೇಶ್ವರ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ.ಮಲ್ಲಿಕಾರ್ಜುನ ಕನಕಟ್ಟೆ, ಹಾವಶೆಟ್ಟಿ ಪಾಟೀಲ್, ಬ್ರಿಮ್ಸ್‌ನ ರಕ್ತನಿಧಿಯ ಹಿರಿಯ ಅಧಿಕಾರಿ ಡಾ.ವೀರೇಂದ್ರ ಪಾಟೀಲ, ಎನ್.ಸಿ.ಸಿ. ಅಧಿಕಾರಿ ಡಾ.ಸಾಮ್ರಾಟ್ ಶಿವಪ್ಪಾ ಪಾಯದ್, ಎನ್.ಎಸ್.ಎಸ್. ಅಧಿಕಾರಿ ಡಾ. ಲಕ್ಷ್ಮೀ ವಿಶ್ವನಾಥ, ಬಸವರಾಜ ಬಿರಾದಾರ, ಸ್ಕೌಟ್ಸ್ ಮತ್ತು ಗೈಡ್ಸ್ನ ಅಧಿಕಾರಿ ಡಾ. ಶಿವಲೀಲಾ ಸ್ವಾಮಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಈ ಕಾರ್ಯಕ್ರಮದಲ್ಲಿ ಅಂಶೂಲ್ ಆರ್.ವಾಲಿ, ಸೂರ್ಯಕಾಂತ ನಾಗಮಾರಪಳ್ಳಿ, ಸಚೀನ ಶೆಟಕಾರ, ದೈವಶಾಲಾ ಶೇಶಾಂಕ ಬಿರಾದಾರ, ಚಂದ್ರಶೇಖರ ಸಿ. ಇವರೆಲ್ಲರೂ ರಕ್ತದಾನ ಮಾಡಿದರು ಅಷ್ಟೇ ಅಲ್ಲದೇ ಮಹಾವಿದ್ಯಾಲಯದ ಎನ್.ಸಿ.ಸಿ., ಎನ್.ಎಸ್.ಎಸ್.ನ ಸುಮಾರು ವಿದ್ಯಾರ್ಥಿಗಳು ರಕ್ತದಾನ ಮಾಡಿ ಸಮಾಜಕ್ಕೆ ಮಾದರಿಯಾದರು.