ಗೋಪಿನಾಥ್‌ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರ

KannadaprabhaNewsNetwork |  
Published : Jul 10, 2024, 12:30 AM IST
9ಎಚ್ಎಸ್ಎನ್‌9 : ಕಾಂಗ್ರೆಸ್ ಮುಖಂಡ ಕೆ.ಜಿ ಗೋಪಿನಾಥ್ ಅವರ ೫೦ನೇ ಹುಟ್ಟುಹಬ್ಬವನ್ನು ಬೃಹತ್ ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಬೇಲೂರಿನ ಕಾಂಗ್ರೆಸ್ ಕಚೇರಿಯಲ್ಲಿ ವಿಶೇಷವಾಗಿ ಆಚರಿಸಲಾಯಿತು. | Kannada Prabha

ಸಾರಾಂಶ

ಕಾಂಗ್ರೆಸ್ ಮುಖಂಡ ಕೆ.ಜಿ ಗೋಪಿನಾಥ್ ಅವರ ೫೦ನೇ ಹುಟ್ಟುಹಬ್ಬವನ್ನು ಬೃಹತ್ ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ವಿಶೇಷವಾಗಿ ಆಚರಿಸಲಾಯಿತು. ಕೆ.ಜಿ ಗೋಪಿನಾಥ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸುಮಾರು ೪೦ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.

ಕನ್ನಡಪ್ರಭ ವಾರ್ತೆ ಬೇಲೂರು ಲಯನ್ಸ್‌ ಸಂಸ್ಥೆ ಬೇಲೂರು, ಹಾಸನದ ಜೀವ ಸಂಜೀವಿನಿ ಬ್ಲಡ್‌ ಬ್ಯಾಂಕ್‌ ಹಾಗೂ ಎಂ ಆರ್‌ ವಿ ಗೆಳೆಯರ ಬಳಗ ಇವರ ಸಂಯುಕ್ತಾಶ್ರಯದಲ್ಲಿ ಕಾಂಗ್ರೆಸ್ ಮುಖಂಡ ಕೆ.ಜಿ ಗೋಪಿನಾಥ್ ಅವರ ೫೦ನೇ ಹುಟ್ಟುಹಬ್ಬವನ್ನು ಬೃಹತ್ ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.ಪಟ್ಟಣದ ಬ್ಲಾಕ್‌ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬೃಹತ್‌ ರಕ್ತದಾನ ಶಿಬಿರದಲ್ಲಿ ಸಮಾಜಸೇವಕ ಕೆ.ಜಿ ಗೋಪಿನಾಥ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸುಮಾರು ೪೦ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಡಾಕ್ಟರ್ ಚಂದ್ರಮೌಳಿ ಮಾತನಾಡಿ, ಗೋಪಿನಾಥ್ ಅವರು ೫೦ನೇ ಹುಟ್ಟುಹಬ್ಬವನ್ನು ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಆಚರಿಸುತ್ತಿದ್ದು, ಈ ಸಮಯದಲ್ಲಿ ರಕ್ತದಾನ ಮಾಡುವುದು ತುಂಬಾ ಅವಶ್ಯಕವಾಗಿದೆ. ಕಾರಣ ಈಗ ಅತಿ ಹೆಚ್ಚು ಡೆಂಘೀ ಪ್ರಕರಣಗಳು ಹೆಚ್ಚಾಗಿರುವ ಈ ಸಂದರ್ಭದಲ್ಲಿ ಪ್ಲೇಟ್ಲೇಟ್ಸ್‌ಗಳ ಅವಶ್ಯಕತೆ ಹೆಚ್ಚು ಬೇಕಾಗಿರುವುದರಿಂದ ರಕ್ತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಗೋಪಿನಾಥ್ ಅವರು ಲಯನ್ಸ್ ಸಂಸ್ಥೆ ಸದಸ್ಯರಾಗಿದ್ದು ಇಂತಹ ಸಮಯದಲ್ಲಿ ಇವರು ತಮ್ಮ ಹುಟ್ಟುಹಬ್ಬವನ್ನು ರಕ್ತದಾನದ ಮೂಲಕ ಹುಟ್ಟು ಹಬ್ಬವನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಸೈಯದ್ ತೌಫಿಕ್ ಮಾತನಾಡಿ, ಪ್ರತೀ ವರ್ಷವು ಒಂದಲ್ಲಾ ಒಂದು ಸಮಾಜಕ್ಕೆ ಪೂರಕವಾಗುವಂತಹ ಸೇವಾಕಾರ್ಯಗಳನ್ನು ತಮ್ಮ ಹುಟ್ಟುಹಬ್ಬದಂದು ಆಚರಿಸಿಕೊಳ್ಳುತ್ತಿದ್ದು ಇಂದೂ ಕೂಡ ಅವರ ಹುಟ್ಟಿದ ದಿನದಂದು ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಸಮಾಜಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದು, ದೇವರು ಇವರಿಗೆ ಇನ್ನಷ್ಟು ಸಮಾಜಸೇವೆ ಮಾಡುವ ಚೈತನ್ಯ ಕೊಡಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಜೆ ನಿಶಾಂತ್, ಜಿಲ್ಲಾ ಉಪಾಧ್ಯಕ್ಷ ಮಹೇಶ್, ಮಾಜಿ ಪುರಸಭೆ ಅಧ್ಯಕ್ಷರಾದ ಎಂ ಆರ್ ವೆಂಕಟೇಶ್, ಶಾಂತಕುಮಾರ್, ಚ.ನಾ ದಾನಿ ಗಿರೀಶ್, ಚಂದ್ರಶೇಖರ್ ಪಾಪು, ಅಶೋಕ್, ಜಮಾಲುದ್ದೀನ್, ಲತೀಪ್, ಕಾಂಗ್ರೆಸ್ ಮುಖಂಡ ಬಿಎಂ ಸಂತೋಷ್, ,ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ರಾಬಿಸೋಮಯ್ಯ, ಪೂವಯ್ಯು ಮುಕ್ತಿಯಾರ್ ಅಹಮದ್, ಪ್ರಶಾಂತ್, ಮಂಜುನಾಥ್, ರಂಗನಾಥ್,ಇತರರು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ