ರಕ್ತದಾನವು ಜೀವ ಉಳಿಸುವ ಮಹತ್ಕಾರ್ಯ: ಡಾ. ನಜೀರಸಾಬ ಮೇಣಿದಾಳ

KannadaprabhaNewsNetwork |  
Published : Oct 16, 2026, 02:30 AM IST
ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರ ಜನ್ಮದಿನದ ಅಂಗವಾಗಿ ಹನುಮಸಾಗರದಲ್ಲಿ ರಕ್ತದಾನ ಶಿಬಿರ ನಡೆಯಿತು. | Kannada Prabha

ಸಾರಾಂಶ

ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರ ಜನ್ಮದಿನದ ಅಂಗವಾಗಿ ಹನುಮಸಾಗರ ಪಟ್ಟಣದ ಕಟಗೇರ ಓಣಿಯ ಅಬ್ದುಲ್ ಕಲಾಂ ಯುವಕರ ಸಂಘ ಹಾಗೂ ಗಂಗಾವತಿಯ ಗೋಪಿ ಚಾರಿಟೇಬಲ್ ರಕ್ತ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ನಡೆಯಿತು.

ಹನುಮಸಾಗರ: ರಕ್ತದಾನವು ಜೀವ ಉಳಿಸುವ ಮಹತ್ಕಾರ್ಯವಾಗಿದೆ. ರಕ್ತದ ಕೊರತೆಯಿಂದ ರೋಗಿಗಳ ಜೀವಕ್ಕೆ ಅಪಾಯ ಎದುರಾಗದಂತೆ ಸ್ವಯಂಪ್ರೇರಿತ ರಕ್ತದಾನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಡಾ. ನಜೀರಸಾಬ ಮೇಣಿದಾಳ ಹೇಳಿದರು.

ಪಟ್ಟಣದ ಕಟಗೇರ ಓಣಿಯ ಅಬ್ದುಲ್ ಕಲಾಂ ಯುವಕರ ಸಂಘ ಹಾಗೂ ಗಂಗಾವತಿಯ ಗೋಪಿ ಚಾರಿಟೇಬಲ್ ರಕ್ತ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರ ಜನ್ಮದಿನದ ಅಂಗವಾಗಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ರಕ್ತದಾನದ ಕುರಿತು ಜನರಲ್ಲಿರುವ ಭಯ ಹಾಗೂ ತಪ್ಪು ಕಲ್ಪನೆಗಳನ್ನು ನಿವಾರಿಸಿ, ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಮುಂದೆ ಬರುವಂತೆ ಜಾಗೃತಿ ಮೂಡಿಸಬೇಕು ಎಂದರು.

ವಿಶ್ವನಾಥ ಕನ್ನೂರ ಮಾತನಾಡಿ, ರಕ್ತದಾನಕ್ಕೆ ಜಾತಿ, ಧರ್ಮದ ಭೇದವಿಲ್ಲ. ತುರ್ತು ಸಂದರ್ಭದಲ್ಲಿ ರಕ್ತದಾನವು ರೋಗಿಗಳ ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಂತಹ ಸೇವಾ ಕಾರ್ಯಗಳು ಸಮಾಜದಲ್ಲಿ ಸಮಾನತೆ, ಸಹೋದರತ್ವ ಹಾಗೂ ಪರಸ್ಪರ ಸಹಕಾರದ ಮನೋಭಾವ ಬೆಳೆಸುತ್ತವೆ ಎಂದರು.

ಮೈನುದ್ದೀನ್ ಖಾಜಿ ಮಾತನಾಡಿ, ಮಹನೀಯರ ಜಯಂತಿಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸರಳತೆ, ಪ್ರಾಮಾಣಿಕತೆ, ವೈಜ್ಞಾನಿಕ ಚಿಂತನೆ ಹಾಗೂ ದೇಶಸೇವೆಯ ಮೂಲಕ ಯುವಜನತೆಗೆ ಮಾದರಿಯಾದ ಡಾ. ಅಬ್ದುಲ್ ಕಲಾಂ ಅವರ ಜನ್ಮದಿನದಂದು ರಕ್ತದಾನದಂತಹ ಜನಪರ ಕಾರ್ಯಕ್ರಮ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದರು.

ಅಬ್ದುಲ್ ಕಲಾಂ ಯುವಕರ ಸಂಘದ ಅಧ್ಯಕ್ಷ ಯೂಸುಫ್ ಕಟಗಿ, ಅಬ್ದುಲ್ ರಜಾಕ ಟೇಲರ, ಖಲೀಲ್ ಅಹ್ಮದ, ಹುಸೇನಸಾಬ ಕಟಗಿ, ದಾದೇಸಾಬ ಕಟಗಿ, ಗೋಪಿ ಚಾರಿಟೇಬಲ್ ರಕ್ತ ಕೇಂದ್ರದ ವ್ಯವಸ್ಥಾಪಕ ಮೊಹಮ್ಮದ್ ಜಿಲಾನಿ ಹಾಗೂ ಸಿಬ್ಬಂದಿ, ಹುಸೇನಬಾಷಾ ಗೌಡ್ರು, ಸಂತೋಷ್, ಅಸ್ಲಾಂ, ಹುಸೇನಸಾಬ ಕಟಗಿ, ಹುಸೇನಬಾಷಾ, ಅಬ್ದುಲ ಕಟಗಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶರನ್ನವರಾತ್ರಿ ನಿಮಿತ್ತ ದೇವಿ ವಜ್ರಾಭರಣಗಳ ಮೆರವಣಿಗೆ
ಶ್ರೀದೇವಿ ಪುರಾಣದ ತತ್ವ ಅಳವಡಿಕೆ ಬದುಕಿಗೆ ದಾರಿ