ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ
ಶಿರಾಳಕೊಪ್ಪ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕ ಒಂದು ಮತ್ತ ಎರಡು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ ಶಿರಾಳಕೊಪ್ಪ, ಜಿಲ್ಲಾ ರಕ್ತನಿಧಿ ಕೇಂದ್ರ ಹಾಗೂ ಕೊಳಗಿ ಗ್ರಾಮದ ಎಲ್ಲಾ ಸಂಘ ಸಂಸ್ಥೆಗಳ ಆಶ್ರಯದಲ್ಲಿ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ನಡೆದ ರಕ್ತದಾನ ಶಿಬಿರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಶಿರಾಳಕೊಪ್ಪ ಭಾಗದಲ್ಲಿ ಅತಿಹೆಚ್ಚು ರಕ್ತದಾನ ಶಿಬಿರ ಏಪರ್ಡಿಸಲಾಗುತ್ತಿದ್ದು, ಈ ಶಿಬಿರಗಳ ಯಶಸ್ಸಿಗೆ ಎಲ್ಲಾ ಸಮುದಾಯದವರ ಪಾತ್ರ ಅತಿ ಪ್ರಮುಖವಾಗಿದೆ. ತಾಲೂಕಿನಲ್ಲಿ ನಡೆಸುವ ಎಲ್ಲಾ ರಕ್ತದಾನ ಶಿಬಿರಗಳನ್ನು ಜಿಲ್ಲಾ ಮೆಗ್ಗಾನ ಆಸ್ಪತ್ರೆ ಸಹಯೋಗದಿಂದ ಮಾಡುತ್ತಿರುವುದರಿಂದ ಸಮಾಜದ ಕಟ್ಟಕಡೆ ಜನರಿಗೂ ಕೂಡ ಇದರ ಉಪಯೋಗವಾಗುತ್ತಿದೆ ಎಂದರು.ಸ.ಪ್ರ.ದ ಕಾಲೇಜಿನ ಪ್ರಾಂಶುಪಾಲ ಪ್ರಭಾಕರ ಮಂಟೂರೆ ಮಾತನಾಡಿ, ನಮ್ಮ ಕಾಲೇಜಿನಿಂದ ಕಳೆದ ನಾಲ್ಕು ವಷರ್ಗಳಿಂದ ಅನೇಕ ರಕ್ತದಾನ ಶಿಬಿರ ಆಯೋಜನೆ ಮಾಡಲಾಗುತ್ತಿದ್ದು, ಆರೋಗ್ಯ ಇಲಾಖೆ ಮತ್ತು ಎಲ್ಲಾ ಇಲಾಖೆ ಮತ್ತು ಎಲ್ಲಾ ಸಂಘ ಸಂಸ್ಥೆಗಳ ಸಹಕಾರ ಅತಿ ಪ್ರಮುಖವಾಗಿದೆ. ಈ ಶಿಬಿರ ಯಶಸ್ವಿ ಆಗಲಿ ಎಂದು ಹಾರೈಸಿದರು.