ದ್ವೇಷ, ಅಸೂಯೆ ಭಾವನೆಗಳನ್ನು ಬಲಿದಾನ ನೀಡಿ: ಹಸನ ತಟಗಾರ

KannadaprabhaNewsNetwork |  
Published : Jun 18, 2024, 12:52 AM IST
ಗಜೇಂದ್ರಗಡ ಈದ್ಗಾ ಮೈದಾನದಲ್ಲಿ ಬಕ್ರೀದ ಹಬ್ಬದಂಗವಾಗಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. | Kannada Prabha

ಸಾರಾಂಶ

ಬಕ್ರೀದ್ ಹಬ್ಬದ ಅಂಗವಾಗಿ ಗಜೇಂದ್ರಗಡ ಪಟ್ಟಣದ ಜಾಮೀಯಾ ಮಸೀದಿಯ ಮೂಲಕ ಪ್ರಮುಖ ಬೀದಿಗಳಲ್ಲಿ ನೂರಾರು ಮುಸ್ಲಿಂ ಬಾಂಧವರು ಮೆರವಣಿಗೆ ನಡೆಸಿ, ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಗಜೇಂದ್ರಗಡ: ಪ್ರತಿಯೊಬ್ಬ ವ್ಯಕ್ತಿಯೂ ತನ್ನಲ್ಲಿರುವ ದ್ವೇಷ, ಅಸೂಯೆ ಭಾವನೆಗಳನ್ನು ಬಲಿದಾನ ನೀಡಬೇಕು ಎಂದು ಸ್ಥಳೀಯ ಅಂಜುಮನ್ ಇಸ್ಲಾಂ ಕಮಿಟಿ ಚೇರ್‌ಮನ್ ಹಸನ ತಟಗಾರ ಹೇಳಿದರು.

ಪಟ್ಟಣದ ಕುಷ್ಟಗಿ ರಸ್ತೆಯ ಈದ್ಗಾ ಮೈದಾನದಲ್ಲಿ ಸೋಮವಾರ ಬಕ್ರೀದ್ ಹಬ್ಬದ ನಿಮಿತ್ತ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾತನಾಡಿದರು. ಸುಮಾರು ೪ ಸಾವಿರ ವರ್ಷಗಳ ಹಿಂದೆ ಹುಟ್ಟಿದ ಪ್ರವಾದಿ ಇಬ್ರಾಹಿಂ ಅವರ ತ್ಯಾಗ, ಬಲಿದಾನಗಳ ನೆನಪಿನಲ್ಲಿ ಬಕ್ರೀದ್ ಹಬ್ಬ ಆಚರಿಸುತ್ತಾರೆ. ಈ ಹಬ್ಬದ ಮೂಲ ಉದ್ದೇಶ ಏಕದೇವತ್ವದ ಸಂದೇಶಕ್ಕೆ ಬದ್ಧತೆ ತೋರುವುದು. ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವುದು, ಸಹೋದರತೆ ಆದ್ಯತೆ, ಜತೆಗೆ ಯಾವುದೇ ತ್ಯಾಗಕ್ಕೂ ಸಿದ್ಧರಾಗಿರುವುದಾಗಿದೆ ಎಂದರು.

ಧರ್ಮಗುರು ಶಾಹೀದ ರಾಜಾ ಮಾತನಾಡಿ, ಸಮಾಜದ ಬಾಂಧವರು ತಮ್ಮ ಹೃದಯದಲ್ಲಿ ಅಲ್ಲಾಹ ಮತ್ತು ಆತನ ಪ್ರವಾದಿಯ ಪ್ರೀತಿಯೊಂದಿಗೆ ಆತನಲ್ಲಿ ಭರವಸೆ ಇಟ್ಟು ಸತ್ಕರ್ಮ ಮಾಡುತ್ತಾ ಸಾಗಬೇಕು. ಅಸಹಾಯಕರಿಗೆ ನೆರವು ನೀಡುವ ಮೂಲಕ ಪೈಗಂಬರರ ತತ್ವ-ಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಬಕ್ರೀದ್ ಹಬ್ಬದ ಅಂಗವಾಗಿ ಗಜೇಂದ್ರಗಡ ಪಟ್ಟಣದ ಜಾಮೀಯಾ ಮಸೀದಿಯ ಮೂಲಕ ಪ್ರಮುಖ ಬೀದಿಗಳಲ್ಲಿ ನೂರಾರು ಮುಸ್ಲಿಂ ಬಾಂಧವರು ಮೆರವಣಿಗೆ ನಡೆಸಿ, ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮೌಲಾನಗಳಾದ ಖಲೀಲಹ್ಮದ ಖಾಜಿ, ರಫೀಕ ಹಾಳಗಿ, ಯಾಸೀನ ಹೀರೇಹಾಳ ಹಾಗೂ ಎಂ.ಎಚ್. ಕೋಲಕಾರ, ಸುಬಾನಸಾಬ ಆರಗಿದ್ದಿ, ಎ.ಡಿ. ಕೋಲಕಾರ, ರಾಜು ಸಾಂಗ್ಲೀಕರ, ಫಯಾಜ್ ತೋಟದ, ದಾವಲಸಾಬ ತಾಳಿಕೋಟಿ, ನಾಸೀರ ಸುರಪುರ, ಇಮ್ರಾನ್ ಅತ್ತಾರ, ಬಾಷಾ ಮುದಗಲ್ಲ, ಮಾಸುಮಲಿ ಮದಗಾರ, ಶಾಮೀದ ಮಾಲ್ದಾರ, ಎ.ಬಿ. ತಹಶೀಲ್ದಾರ, ಎ.ಕೆ. ಒಂಟಿ, ಶಾಮೀದ ಡಂಗಿ, ರಸೂಲ್ ಮಾಲ್ದಾರ ಸೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!