ಎಸ್ಸೆಸ್ ಕೇರ್ ಟ್ರಸ್ಟ್‌ನಿಂದ ಅಂಗನವಾಡಿ ಮಕ್ಕಳ ರಕ್ತ ಪರೀಕ್ಷೆ

KannadaprabhaNewsNetwork |  
Published : Jul 19, 2024, 12:47 AM IST
ಕ್ಯಾಪ್ಷನಃ18ಕೆಡಿವಿಜಿ32ಃದಾವಣಗೆರೆ ತಾ. ಎಲೆಬೇತೂರಿನ ವಿವಿಧ ಅಂಗವನಾಡಿ ಕೇಂದ್ರದ ಮಕ್ಕಳಿಗೆ ಎಸ್.ಎಸ್.ಕೇರ್ ಟ್ರಸ್ಟ್ ನಿಂದ ರಕ್ತದ ಪರೀಕ್ಷೆ ನಡೆಸಲಾಯಿತು. | Kannada Prabha

ಸಾರಾಂಶ

ದಾವಣಗೆರೆ ತಾಲೂಕಿನ ಎಲೆಬೇತೂರಿನ ವಿವಿಧ ಅಂಗವನಾಡಿ ಕೇಂದ್ರದ ಮಕ್ಕಳಿಗೆ ಎಸ್.ಎಸ್.ಕೇರ್ ಟ್ರಸ್ಟ್‌ನಿಂದ ರಕ್ತ ಪರೀಕ್ಷೆ ನಡೆಸಲಾಯಿತು.

ದಾವಣಗೆರೆ: ತಾಲೂಕಿನ ಎಲೆಬೇತೂರು ಗ್ರಾಮದ 5 ಅಂಗನವಾಡಿ ಕೇಂದ್ರದಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ್ ಲೈಫ್ ಟ್ರಸ್ಟ್‌ನ ಎಸ್.ಎಸ್.ಕೇರ್ ಟ್ರಸ್ಟ್‌ನಿಂದ ಮಕ್ಕಳನ್ನು ರಕ್ತಪರೀಕ್ಷೆಗೆ ಒಳಪಡಿಸಿ ಕೆಲವು ಮಕ್ಕಳು ಅನೀಮಿಯಾ ರಕ್ತ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಟ್ರಸ್ಟ್ ವತಿಯಿಂದ ಮಕ್ಕಳಿಗೆ ಐರನ್ ಸಿರಪ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಡಾ.ಪವಿತ್ರ ಮಾತನಾಡಿ, ಅಂಗನವಾಡಿ ಕೇಂದ್ರಗಳಿಗೆ ಪೋಷಕರನ್ನು ಕರೆಸಿ 66 ಮಕ್ಕಳಲ್ಲಿ 15 ಮಕ್ಕಳು ಅನೀಮಿಯಾ ಕೊರತೆ ಇದ್ದು, ಅಂಥ ಮಕ್ಕಳಿಗೆ ಪ್ರೋಟಿನ್‌ ಯುಕ್ತ ಆಹಾರಗಳಾದ ರಾಗಿ ಮಾಲ್ಟ್, ದೋಸೆ, ಇಡ್ಲಿ, ಬೇಳೆಕಾಳು, ಬೆಲ್ಲ, ಹಸಿ ತರಕಾರಿ, ಹಣ್ಣು ಹಾಗೂ ಹಾಲು ಕೊಡುವಂತೆ ಹಾಗೂ ಚಹಾ, ಕರಿದ ಪದಾರ್ಥಗಳಾದ ಚಿಪ್ಸ್, ಬೇಕರಿ ಪದಾರ್ಥ ಕೊಡಬಾರದೆಂದು ಪೋಷಕರಿಗೆ ತಿಳಿಹೇಳಿದರು.

ಈ ವೇಳೆ ಎಸ್.ಎಸ್. ಹೈಟೆಕ್ ಆಸ್ಪತ್ರೆ ಪ್ರಾಧ್ಯಾಪಕರಾದ ಡಾ.ಶೀಲಾ, ಡಾ.ಸ್ಫೂರ್ತಿ, ಡಾ.ಸ್ನೇಹಾ, ಮೆಡಿಕಲ್ ಸೋಶಿಯಲ್ ವರ್ಕರ್ ನಾಗರಾಜ, ಗ್ರಾಮದ ಸ್ವಯಂ ಸೇವಕಿ ಎಂ.ಕೆ.ಮಮತಾ, ಆಲೂರುಹಟ್ಟಿ ವಲಯದ ಅಂಗನವಾಡಿ ಮೇಲ್ವಿಚಾರಕಿ ಜಿ.ಬಿ.ಗಂಗಮ್ಮ, ತಾಲೂಕು ಕಸಾಪ ನಿರ್ದೇಶಕ ಷಡಕ್ಷರಪ್ಪ ಎಂ ಬೇತೂರು, ಅಂಗನವಾಡಿ ಕಾರ್ಯಕರ್ತೆಯರಾದ ಸುಧಾ, ಹನುಮಂತಮ್ಮ, ಅನ್ನಪೂರ್ಣಮ್ಮ, ಕವಿತಮ್ಮ, ರೇಣುಕಮ್ಮ ಹಾಗೂ ಅಂಗನವಾಡಿ ಸಹಾಯಕಿಯರು, ಪೋಷಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ