ಜನಸ್ನೇಹಿ ಸಾರಿಗೆ ಸೇವೆಯಲ್ಲಿ ಬಿಎಂಟಿಸಿದು ಹೊಸ ಮೈಲಿಗಲ್ಲು

KannadaprabhaNewsNetwork |  
Published : May 23, 2026, 01:30 AM IST
ಫೋಟೋ: 22 ಹೆಚ್‌ಎಸ್‌ಕೆ 1 ಮತ್ತು 21: ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯ ತರಬಹಳ್ಳಿ-ಲಕ್ಷಿö್ಮÃಪುರ ಗೇಟ್‌ನ ಬಳಿ ಹೊಸಕೋಟೆ–ಹೆಚ್.ಕ್ರಾಸ್ ಮಾರ್ಗದ ನೂತನ ವೇಗದೂತ 10 ಬಿಎಂಟಿಸಿ ಬಸ್ ಸೇವೆಗಳಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಶರತ್ ಬಚ್ಚೇಗೌಡ, ಶಿಡ್ಲಘಟ್ಟ ಶಾಸಕ ರವಿಕುಮಾರ್ ಚಾಲನೆ ನೀಡಿದರು. | Kannada Prabha

ಸಾರಾಂಶ

ಹೊಸಕೋಟೆ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಾರ್ವಜನಿಕರಿಗೆ ಜನಸ್ನೇಹಿ, ಪರಿಸರ ಸ್ನೇಹಿ ಸಾರಿಗೆ ಸೇವೆ ಒದಗಿಸುವ ಮೂಲಕ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದು ಹೊಸಕೋಟೆ ಭಾಗದಲ್ಲೂ ಹೊಸ ಮಾರ್ಗಗಳಲ್ಲಿ ವೇಗದೂತ ಬಸ್ ಸಂಚಾರ ಚಾಲನೆ ನೀಡಿದ್ದೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು

ಹೊಸಕೋಟೆ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಾರ್ವಜನಿಕರಿಗೆ ಜನಸ್ನೇಹಿ, ಪರಿಸರ ಸ್ನೇಹಿ ಸಾರಿಗೆ ಸೇವೆ ಒದಗಿಸುವ ಮೂಲಕ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದು ಹೊಸಕೋಟೆ ಭಾಗದಲ್ಲೂ ಹೊಸ ಮಾರ್ಗಗಳಲ್ಲಿ ವೇಗದೂತ ಬಸ್ ಸಂಚಾರ ಚಾಲನೆ ನೀಡಿದ್ದೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ತಾಲೂಕಿನ ನಂದಗುಡಿ ಹೋಬಳಿಯ ತರಬಹಳ್ಳಿ-ಲಕ್ಷ್ಮೀಪುರ ಗೇಟ್ ಬಳಿ ೧೦ ಬಿಎಂಟಿಸಿ ವೇಗದೂತ ಬಸ್‌ಗಳ ಸಂಚಾರಕ್ಕೆ ನಿಶಾನೆ ತೋರಿ ಮಾತನಾಡಿದ ಅವರು, ಪ್ರಸ್ತುತ ಬಿಎಂಟಿಸಿ 50 ಘಟಕಗಳಿಂದ ಪ್ರತಿದಿನ 6275 ಅನುಸೂಚಿಗಳ ಮೂಲಕ 65945 ಸುತ್ತುವಳಿಗಳನ್ನು ನಡೆಸುತ್ತಿದ್ದು, ಸುಮಾರು 45 ಲಕ್ಷ ಪ್ರಯಾಣಿಕರು ಸಂಸ್ಥೆಯ ಸೇವೆ ಪಡೆಯುತ್ತಿದ್ದಾರೆ. ಇದರಲ್ಲಿ 1742 ಎಲೆಕ್ಟ್ರಿಕ್ ಬಸ್‌ಗಳೂ ಕಾರ್ಯಾಚರಣೆಯಲ್ಲಿವೆ. ಬೆಂಗಳೂರು ಸುತ್ತಮುತ್ತಲಿನ ಅತ್ತಿಬೆಲೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ, ಬಿಡದಿ, ಹಾರೋಹಳ್ಳಿ, ಕನಕಪುರ, ತುಮಕೂರು ಸೇರಿದಂತೆ ಹಲವು ಪಟ್ಟಣಗಳಿಗೆ ಈಗಾಗಲೇ 124 ವೇಗದೂತ ಸೇವೆಗಳು ಸಂಚರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಎಚ್.ಕ್ರಾಸ್ ಭಾಗದ ಸಾರ್ವಜನಿಕರ ಅನುಕೂಲಕ್ಕಾಗಿ ಹೊಸ ಮಾರ್ಗಗಳನ್ನು ಪರಿಚಯಿಸಲಾಗಿದೆ. ಮುಂದಿನ ವಾರದಲ್ಲಿ ಮಾಗಡಿ ಹಾಗೂ ಕುಣಿಗಲ್‌ಗೂ ಬಿಎಂಟಿಸಿ ಸೇವೆಗೆ ಚಾಲನೆ ನೀಡಲಾಗುವುದು. ಹೊಸ ಸೇವೆಯಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರಿಗೆ ವೇಗವಾದ ಮತ್ತು ನೇರ ಸಾರಿಗೆ ಸೌಲಭ್ಯ ದೊರೆಯಲಿದ್ದು, ಬೆಂಗಳೂರಿನ ಟ್ರಾಫಿಕ್ ದಟ್ಟಣೆ ತಪ್ಪಿಸಿ ಸುಲಭ ಸಂಚಾರಕ್ಕೆ ನೆರವಾಗಲಿದೆ ಎಂದು ಹೇಳಿದರು.

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ವೇಗದೂತ 317 ಎಚ್‌ಸಿ ಮಾರ್ಗದಲ್ಲಿ ಟಿನ್ ಫ್ಯಾಕ್ಟರಿಯಿಂದ ಎಚ್.ಕ್ರಾಸ್‌ವರೆಗೆ 7 ಬಸ್‌ಗಳು 60 ಸುತ್ತುವಳಿಗಳೊಂದಿಗೆ ಪ್ರತಿ 30 ನಿಮಿಷಕ್ಕೊಮ್ಮೆ ಸಂಚರಿಸಲಿವೆ. ಈ ಮಾರ್ಗದ ಪ್ರಯಾಣ ದರ ₹60 ಆಗಿರುತ್ತದೆ. ಇಎಕ್ಸ್ ಎಸ್‌ಟಿಆರ್‌ಆರ್-1 ಮಾರ್ಗದಲ್ಲಿ ಹೊಸಕೋಟೆಯಿಂದ ನೆಲಮಂಗಲದವರೆಗೆ 11 ಬಸ್‌ಗಳು 25 ಸುತ್ತುವಳಿಗಳೊಂದಿಗೆ ಕಾರ್ಯಾಚರಣೆಗೊಳ್ಳಲಿದ್ದು, ಈ ಮಾರ್ಗದ ಪ್ರಯಾಣ ದರ ₹110 ಆಗಿದ್ದು ಹೊಸಕೋಟೆಯಿಂದ ದೇವನಹಳ್ಳಿ, ಜಿಲ್ಲಾಧಿಕಾರಿ ಕಚೇರಿ, ದೊಡ್ಡಬಳ್ಳಾಪುರ, ಮಧುರೆ ದೇವಸ್ಥಾನದ ಮೂಲಕ ನೆಲಮಂಗಲ ತಲುಪಲಿದೆ. ಇದರಿಂದ ಹೊಸಕೋಟೆ ಹಾಗೂ ನೆಲಮಂಗಲದ ನಾಗರಿಕರಿಗೆ ಜಿಲ್ಲಾಧಿಕಾರಿಗಳ ಕಚೇರಿ ಕೆಲಸ ಕಾರ್ಯಗಳಿಗೆ ಸಂಚರಿಸಲು ಅನುಕೂಲ ಆಗಲಿದೆ. ತನ್ನ ಮನವಿಗೆ ಸ್ಪಂದಿಸಿದ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಧನ್ಯವಾದ ತಿಳಿಸಿದರು.

ಶಿಡ್ಲಘಟ್ಟ ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ಬಿಎಂಟಿಸಿ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುತ್ತಿದೆ. ಸಚಿವರು ಟಿನ್ ಫ್ಯಾಕ್ಟರಿಯಿಂದ ಎಚ್.ಕ್ರಾಸ್‌ವರೆಗೂ ಬಿಎಂಟಿಸಿ ಸೇವೆ ಆರಂಭಿಸಿರುವುದು ಉತ್ತಮ ಬೆಳವಣಿಗೆ. ಮುಂದಿನ ದಿನಗಳಲ್ಲಿ ಎಚ್.ಕ್ರಾಸ್‌ನಿಂದ ಜಂಗಮಕೋಟೆ ಕ್ರಾಸ್, ವಿಜಯಪುರ, ದೇವನಹಳ್ಳಿ ಮಾರ್ಗವಾಗಿ ಯಲಹಂಕಕ್ಕೆ ಮತ್ತು ಶಿಡ್ಲಘಟ್ಟ, ಮಳ್ಳೂರು, ಮೇಲೂರು, ವಿಜಯಪುರಕ್ಕೆ ಹಾಗೂ ಎಚ್.ಕ್ರಾಸ್ ನಿಂದ ಚೀಮಂಗಲ ಮಾರ್ಗವಾಗಿ ಶಿಡ್ಲಘಟ್ಟಕ್ಕೆ ಬಿಎಂಟಿಸಿ ಬಸ್ ಸೇವೆ ಒದಗಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.ಬಿಎಂಟಿಸಿ ಅಧ್ಯಕ್ಷ ವಿಎಸ್.ಆರಾಧ್ಯ ಮಾತನಾಡಿ, ಬಿಎಂಟಿಸಿ ವತಿಯಿಂದ ಹೊಸ ಹೊಸ ಮಾರ್ಗಗಳನ್ನು ಪರಿಚಯಿಸುವ ಮೂಲಕ ಮತ್ತಷ್ಟು ಜನಸ್ನೇಹಿ ಸಾರಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೆಲವು ದಿನಗಳ ಹಿಂದೆ ವಜ್ರ ವಿಸ್ತಾರ ಹೆಸರಿನಲ್ಲಿ ಬೆಂಗಳೂರಿನಿಂದ ತುಮಕೂರಿಗೆ 10 ಹವಾನಿಯಂತ್ರಿತ ಬಸ್‌ಗಳಿಗೆ ಚಾಲನೆ ನೀಡಿದ್ದೇವೆ. ಈಗಾಗಲೆ ಬಿಎಂಟಿಸಿ ವ್ಯಾಪ್ತಿಯಲ್ಲಿ 1800 ಎಲೆಕ್ಟ್ರಿಕ್‌ ಬಸ್‌ಗಳು ಚಲಿಸುತ್ತಿದ್ದು ಇನ್ನು ಎರಡ್ಮೂರು ವರ್ಷದಲ್ಲಿ ಮತ್ತಷ್ಟು ಎಲೆಕ್ಟ್ರಿಕ್‌ ಬಸ್‌ಗಳು ಸೇರ್ಪಡೆ ಆಗಲಿದೆ. ಮುಖ್ಯವಾಗಿ ಸಚಿವ ರಾಮಲಿಂಗಾರೆಡ್ಡಿ ಅವರ ಅವಿರತ ಕಾರ್ಯಕ್ಷಮತೆಯಿಂದ ಸಾರಿಗೆ ಸೇವೆ ಉತ್ತಮ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಎಂಟಿಸಿ ಉಪಾಧ್ಯಕ್ಷ ಎಂ.ನಿಕೇತ್‌ರಾಜ್, ವ್ಯವಸ್ಥಾಪಕ ನಿರ್ದೇಶಕ ಕೆ.ಬಿ.ಶಿವಕುಮಾರ್, ಮುಖ್ಯ ಸಂಚಾರ ವ್ಯವಸ್ಥಾಪಕ ಜೆ.ಟಿ.ಪ್ರಭಾಕರರೆಡ್ಡಿ, ಕೆಪಿಸಿಸಿ ಕಾರ್ಯದರ್ಶಿ ಬಿ.ಗೋಪಾಲ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಕೋಡಿಹಳ್ಳಿ ಸುರೇಶ್, ಬಿ.ವಿ.ರಾಜಶೇಖರಗೌಡ, ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಟಿ.ಎಸ್.ರಾಜಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಗೀರ್ ಅಹಮದ್, ಎಸ್‌ಎಫ್‌ಸಿಎಸ್ ಅಧ್ಯಕ್ಷ ಸಿ.ಎಂ.ನಾರಾಯಣಸ್ವಾಮಿ, ನಿರ್ದೇಶಕರಾದ ಎಚ್.ಎನ್.ಧರ್ಮೇಶ್, ಪಿಡಿಒ ಎ.ಮುನಿರಾಜು ಮತ್ತಿತರರು ಹಾಜರಿದ್ದರು.

ಫೋಟೋ: 22 ಹೆಚ್‌ಎಸ್‌ಕೆ 1 ಮತ್ತು 2

1: ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯ ತರಬಹಳ್ಳಿ-ಲಕ್ಷ್ಮೀಪುರ ಗೇಟ್‌ ಬಳಿ ಹೊಸಕೋಟೆ-ಎಚ್.ಕ್ರಾಸ್ ಮಾರ್ಗದ ನೂತನ ವೇಗದೂತ ಬಿಎಂಟಿಸಿ ಬಸ್ ಸಂಚಾರ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಶರತ್ ಬಚ್ಚೇಗೌಡ, ಶಿಡ್ಲಘಟ್ಟ ಶಾಸಕ ರವಿಕುಮಾರ್ ಚಾಲನೆ ನೀಡಿದರು.

2: ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯ ತರಬಹಳ್ಳಿ-ಲಕ್ಷ್ಮೀಪುರ ಗೇಟ್‌ ಬಳಿ ನಡೆದ ಬಿಎಂಟಿಸಿ ವೇಗದೂತ ಬಸ್‌ಗಳ ಸಂಚಾರ ಸೇವೆ ವೇದಿಕೆ ಕಾರ್ಯಕ್ರಮವನ್ನು ಸಚಿವ ರಾಮಲಿಂಗಾರೆಡ್ಡಿ, ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಗೀತೋತ್ಸವದಲ್ಲಿ ವಿವಿಧ ಕಲಾವಿದರಿಂದ ನಾದ ಝೇಂಕಾರ
ಉತ್ತಮ ಸಮಾಜ ನಿರ್ಮಾಣವೇ ಭೀಮ್‌ ಆರ್ಮಿ ಉದ್ದೇಶ