ಕನ್ನಡಪ್ರಭ ವಾರ್ತೆ ಬೆಂಗಳೂರು
ಕುಲಪತಿಯವರ ಸಚಿವಾಲಯದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಪದ್ಮಾ ವಿ. ಅವರ ಸಂಪಾದಿತ ಪುಸ್ತಕ ಇದಾಗಿದ್ದು, ಸೇವೆಯಿಂದ ನಿವೃತ್ತಿಯಾಗುತ್ತಿರುವ ಸಮಯದಲ್ಲಿ ಈ ಪುಸ್ತಕವನ್ನು ವಿಶ್ವವಿದ್ಯಾನಿಲಯಕ್ಕೆ ಕೊಡುಗೆಯಾಗಿ ಅರ್ಪಿಸಿದರು.
ಬೆಂಗಳೂರು ವಿವಿ 1858 ರಲ್ಲಿ ಒಂದು ಸಣ್ಣ ಶಾಲೆಯಾಗಿ ಆರಂಭವಾಗಿ ಇಂದು ವಿಶ್ವಮಟ್ಟದ ವಿಶ್ವವಿದ್ಯಾಲಯವಾಗಿ ಬೆಳೆದು ಹೆಮ್ಮೆಯಿಂದ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ. ಕುಲಪತಿಗಳ ಕಾರ್ಯದರ್ಶಿ ದೃಷ್ಟಿಕೋನದಿಂದ ಓದುಗರು ವಿಶ್ವವಿದ್ಯಾಲಯದ ಸವಾಲು, ಸಾಧನೆಗಳ ಬಗ್ಗೆ ಅರಿತುಕೊಳ್ಳಬಹುದಾಗಿದೆ. ವಿಶ್ವವಿದ್ಯಾನಿಲಯದ ಶ್ರೀಮಂತ ಇತಿಹಾಸವನ್ನು ದಾಖಲಿಸುವಲ್ಲಿ ಮತ್ತು ಭವಿಷ್ಯದ ಪೀಳಿಗೆಗೆ ಅದರ ಪರಂಪರೆಯನ್ನು ಸಂರಕ್ಷಿಸುವಲ್ಲಿ ಪದ್ಮ ಅವರು ನೀಡಿದ ಅಮೂಲ್ಯ ಪುಸ್ತಕವನ್ನು ಕುಲಪತಿ ಅವರು ಮೆಚ್ಚುಗೆಯೊಂದಿಗೆ ಸ್ವೀಕರಿಸಿದರು.ಈ ವೇಳೆ ಕುಲಸಚಿವ ಶೇಕ್ ಲತೀಫ್, ಕುಲಸಚಿವ (ಮೌಲ್ಯಮಾಪನ) ಪ್ರೊ.ಶ್ರೀನಿವಾಸ್, ಡಾ। ಸುನೀತಾ ಉಪಸ್ಥಿತರಿದ್ದರು.