ಆಡಳಿತ ಮಂಡಳಿಯ ಗೊಂದಲ: ವಿದ್ಯಾರ್ಥಿಗಳಿಂದ ಪ್ರತಿಭಟನೆ

KannadaprabhaNewsNetwork | Published : Nov 4, 2023 12:47 AM

ಸಾರಾಂಶ

2010ರಲ್ಲಿ ಕೇರಳದಿಂದ ಬಂದ ಮಧು ಮತ್ತು ಮಹಿಮಾ ಎಂಬ ದಂಪತಿ ಈ ಕಾಲೇಜನ್ನು ಆರಂಭಿಸಿದ್ದರು. ಇಲ್ಲಿ ನರ್ಸಿಂಗ್, ಏವಿಯೇಷನ್, ಬಿಎಚ್ಎಂ, ಸಹಿತ ವಿವಿಧ ಪದವಿ ಶಿಕ್ಷಣ ನೀಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಬ್ರಹ್ಮಾವರ ಇಲ್ಲಿನ ಅಚ್ಲಾಡಿ ಗ್ರಾಮದಲ್ಲಿರುವ ಇಸಿಆರ್ ಕಾಲೇಜಿನಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಯಾರು ಎಂಬ ಗೊಂದಲದಿಂದ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ವಿದ್ಯಾರ್ಥಿಗಳು ತರಗತಿಗೆ ತೆರಳದೆ ಆಡಳಿತ ಮಂಡಳಿಯ ವಿರುದ್ಧವೇ ಪ್ರತಿಭಟನೆ ನಡೆಸಿದರು. 2010ರಲ್ಲಿ ಕೇರಳದಿಂದ ಬಂದ ಮಧು ಮತ್ತು ಮಹಿಮಾ ಎಂಬ ದಂಪತಿ ಈ ಕಾಲೇಜನ್ನು ಆರಂಭಿಸಿದ್ದರು. ಇಲ್ಲಿ ನರ್ಸಿಂಗ್, ಏವಿಯೇಷನ್, ಬಿಎಚ್ಎಂ, ಸಹಿತ ವಿವಿಧ ಪದವಿ ಶಿಕ್ಷಣ ನೀಡಲಾಗುತ್ತಿದೆ. ಪತಿ ಮಧು ಅವರು ಆರಂಭದಲ್ಲಿ ಅಧ್ಯಕ್ಷರಾಗಿದ್ದರು. ಇದೀಗ ದಂಪತಿ ಮಧ್ಯೆ ಕೌಟುಂಬಿಕ ಕಲಹ ಆರಂಭವಾಗಿದ್ದು, ಪತ್ನಿ ಮಹಿಮಾ ತಾನೇ ಅಧ್ಯಕ್ಷೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಪ್ರಸ್ತುತ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಪ್ರಕರಣದಿಂದ ಸರಿಯಾದ ಪಾಠಗಳು ನಡೆಯುತ್ತಿಲ್ಲ, ಕಾಲೇಜಿನಲ್ಲಿ ಅಗತ್ಯ ಪ್ರಾಧ್ಯಾಪಕರೂ ಇಲ್ಲ, ನ್ಯಾಯ ಕೊಡಿ ಎಂದು ಪ್ರತಿಭಟನಾ ಸ್ಥಳಕ್ಕೆ ಬಂದ ಪೊಲೀಸರ ಮುಂದೆ ವಿದ್ಯಾರ್ಥಿಗಳ ಅಳಲು ತೊಡಿಕೊಂಡರು.

Share this article