ಶಿರೂರು ಕಡಲಲ್ಲಿ ಮಳುಗಿದ ದೋಣಿ: ಐವರು ಮೀನಗಾರರ ರಕ್ಷಣೆ

KannadaprabhaNewsNetwork |  
Published : Jul 21, 2026, 02:45 AM IST
20ದೋಣಿ | Kannada Prabha

ಸಾರಾಂಶ

ಬೈಂದೂರಿನ ಶಿರೂರು ಸಮೀಪ ಸಮುದ್ರದಲ್ಲಿ ಮೀನುಗಾರಿಕಾ ದೋಣಿಯೊಂದು ಭಾರಿ ಅಲೆಯ ಹೊಡೆತಕ್ಕೆ ಸಿಲುಕಿ ಮುಳುಗಿದ್ದು, ಅದರಲ್ಲಿದ್ದ 5 ಮಂದಿ ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.

ಬೈಂದೂರು: ಇಲ್ಲಿನ ಶಿರೂರು ಸಮೀಪ ಸಮುದ್ರದಲ್ಲಿ ಮೀನುಗಾರಿಕಾ ದೋಣಿಯೊಂದು ಭಾರಿ ಅಲೆಯ ಹೊಡೆತಕ್ಕೆ ಸಿಲುಕಿ ಮುಳುಗಿದ್ದು, ಅದರಲ್ಲಿದ್ದ 5 ಮಂದಿ ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.ಈ ನಾಡದೋಣಿಯಲ್ಲಿದ್ದ ಮೀನುಗಾರರು ಪಡುವರಿ ಗ್ರಾಮದ ನಾಗರಾಜ್ ಖಾರ್ವಿ, ಯೋಗೀಶ್ ಖಾರ್ವಿ, ರಾಜು ಖಾರ್ವಿ, ಮಂಜುನಾಥ್ ಖಾರ್ವಿ ಮತ್ತು ಮತ್ತೊಬ್ಬ ನಾಗರಾಜ್ ಖಾರ್ವಿ ಎಂದು ಗುರುತಿಸಲಾಗಿದೆ.

ಸಮುದ್ರದಲ್ಲಿ ಮೀನು ಹಿಡಿದು ಮಲ್ಪೆ ಬಂದರಿನಲ್ಲಿ ಇಳಿಸಿ, ಉ.ಕ. ಜಿಲ್ಲೆಯ ಭಟ್ಕಳಕ್ಕೆ ತೆರಳುತ್ತಿದ್ದರು. ಸಮುದ್ರದಲ್ಲಿ ಕೆಲವು ದಿನಗಳಿಂದ ತೀವ್ರ ಮಳೆ ಗಾಳಿಯಾಗುತ್ತಿದ್ದು, ಶಿರೂರು ಸಮುದ್ರ ತೀರದ ಕೊಕ್ಲೇರಕಲ್ಲು ಎಂಬಲ್ಲಿ ದೋಣಿಯು ದೊಡ್ಡ ಅಲೆಗೆ ಸಿಲುಕಿ ನಿಯಂತ್ರಣ ತಪ್ಪಿ ಮಗುಚಿ ಬಿತ್ತು. ದೋಣಿಯಲ್ಲಿದ್ದ ಐವರು ಮೀನುಗಾರರು ಸಮದ್ರಕ್ಕೆ ಬಿದ್ದರು. ಆದರೆ ಅವರೆಲ್ಲರೂ ಲೈಫ್ ಜಾಕೆಟ್ ಧರಿಸಿದ್ದರಿಂದ ಮುಳುಗದೆ, ಮಗುಚಿ ಬಿದ್ದ ದೋಣಿ ಮೇಲೆ ನಿಂತು ಸಹಾಯಕ್ಕೆ ಕೂಗ ತೊಡಗಿದರು.

ಸಮೀಪದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಶೇಖರ ಖಾರ್ವಿ ಮತ್ತು ಇತರ ಮೀನುಗಾರರು ಗಮನಿಸಿ ತಕ್ಷಣ ಸ್ಥಳಕ್ಕೆ ಧಾವಿಸಿ ಐದು ಮಂದಿಯನ್ನೂ ರಕ್ಷಿಸಿ ದಡಕ್ಕೆ ಕರೆ ತಂದಿದ್ದಾರೆ.

ದೋಣಿ ಸಂಪೂರ್ಣವಾಗಿ ಹಾಳಾಗಿದೆ. ದೋಣಿಯಲ್ಲಿದ್ದ ಎಂಜಿನ್, ಜಿಪಿಎಸ್ ಸಾಧನ, ಫಿಶ್ ಫೈಂಡರ್, ಐದು ಜೋಡಿ ಮೀನುಗಾರಿಕೆ ಬಲೆಗಳು ಹಾಗೂ 30 ಸಾವಿರ ರು. ನಗದು ಸಮುದ್ರಕ್ಕೆ ಬಿದ್ದು ಹೋಗಿವೆ. ಸುಮಾರು 7 ಲಕ್ಷ ರು.ಗೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕರಾವಳಿ ಸುರಕ್ಷತಾ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಶ್ವತ ನಿವಾಸಿ ಪತ್ರ ಆತಂಕಕಾರಿ: ಅಶೋಕ್‌
ಮೋದಿ ದುರ್ಬಲ, ದುಷ್ಟರಕ್ಷಕ ಪ್ರಧಾನಿ: ಸಿದ್ದು ಕಿಡಿ