ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಯಾವುದೇ ಸುರಕ್ಷತಾ ಪರಿಕರಗಳು ಹಾಗೂ ಅಗತ್ಯ ದಾಖಲೆಗಳಿಲ್ಲದೆ ತೆಪ್ಪಗಳಲ್ಲಿ ಬೇಕಾಬಿಟ್ಟಿ ಜನರನ್ನು ತುಂಬಿಕೊಂಡು ಕಾವೇರಿ ನದಿ ನೀರಿನ ಮಧ್ಯ ಭಾಗದಲ್ಲಿ ಮೋಜಿನಾಟ ನಡೆಸಿ ಕಾನೂನು ಉಲ್ಲಂಘಿಸಿದ್ದಾರೆ.
ಕಾವೇರಿ ನದಿ ನೀರಿನೊಳಗೆ ಅಕ್ರಮವಾಗಿ ಜೆಸಿಬಿ ಯಂತ್ರಗಳನ್ನು ಇಳಿಸಿದ ಕೆಲ ಪ್ರಭಾವಿಗಳು ವಾಣಿಜ್ಯ ಉದ್ದೇಶದಿಂದಾಗಿ ನದಿ ಮಧ್ಯ ಭಾಗದ ನೈಸರ್ಗಿಕ ತಿಟ್ಟುಗಳನ್ನು ಅಗೆದು ನಾಶ ಮಾಡಿದ್ದಾರೆ. ಜೊತೆಗೆ ನದಿಗೆ ಅಡ್ಡಲಾಗಿ ತಾತ್ಕಾಲಿಕ ಮಣ್ಣಿನ ತಡೆ ನಿರ್ಮಿಸಿ ನದಿ ನೀರಿನ ಹರಿಯುವ ದಿಕ್ಕನ್ನೇ ಬದಲಿಸುವ ಮೂಲಕ ನದಿಯ ಮೂಲ ಸ್ವರೂಪವನ್ನೇ ಹಾಳು ಮಾಡಿದ್ದಾರೆ.ದೇವಾಲಯದ ಮುಂಭಾಗದ ನದಿ ಒಳಭಾಗದಲ್ಲಿ ಆಳ ಸೃಷ್ಟಿಯಾಗುವ ಜೊತೆಗೆ ನೀರು ಒತ್ತಡದಿಂದ ಹರಿದು ದೋಣಿ ಸಂಚಾರಕ್ಕೆ ಅನುಕೂಲವಾಗುವಂತೆ ಮಾಡಿದ್ದಾರೆ. ಈ ಬಗ್ಗೆ ಕಾವೇರಿ ನೀರಾವರಿ ನಿಗಮ, ನಿಮಿಷಾಂಬ ದೇವಾಲಯ, ಸ್ಥಳೀಯ ಪುರಸಭೆ ಸೇರಿದಂತೆ ಯಾವುದೇ ಇಲಾಖೆಯ ಗಮನಕ್ಕೂ ತಾರದೆ ಅಕ್ರಮ ಕಾಮಗಾರಿ ನಡೆಸಿದ್ದಾರೆ.
ದೇವಾಲಯ ಮುಂಭಾಗದ ಕಾವೇರಿ ನದಿಯಲ್ಲಿ ಅಕ್ರಮವಾಗಿ ದೋಣಿ ವಿಹಾರ ನಡೆಸಲು ಜೆಸಿಬಿ ಯಂತ್ರ ಇಳಿಸಿ ಹಾಗೂ ದೋಣಿ ವಿಹಾರ ನಡೆಸುತ್ತಿದುದ್ದು ಸತ್ಯ. ಈ ವಿಚಾರವಾಗಿ ಸ್ಥಳಕ್ಕೆ ತೆರಳಿ ಸಂಬಂಧಪಟ್ಟವರನ್ನು ಪ್ರಶ್ನಿಸಲಾಗಿ ದೋಣಿ ವಿಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಅನುಮತಿ ಪತ್ರ ಹಾಗೂ ಪರವಾನಿಗೆ ಇಲ್ಲದಿರುವುದು ನನ್ನ ಗಮನಕ್ಕೆ ಬಂದಿದೆ. ತಕ್ಷಣ ಸಂಬಂಧಿಸಿದ ಕಾವೇರಿ ನೀರಾವರಿ ನಿಗಮ ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ಅಧಿಕೃತವಾಗಿ ಲಿಖಿತ ರೂಪದಲ್ಲಿ ದೂರು ನೀಡಿದ್ದೇನೆ. ಸದ್ಯ ಅಕ್ರಮ ಬೋಟಿಂಗ್ ಚಟುವಟಿಕೆ ನಿಂತಿದೆ. ಇದು ಪುನಃ ಮರುಕಳುಹಿಸಿದ್ದಲ್ಲಿ ತೆಪ್ಪಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
- ಎಂ.ರಾಜಣ್ಣ ಪುರಸಭೆ ಮುಖ್ಯಾಧಿಕಾರಿ