ಕನ್ನಡಪ್ರಭ ವಾರ್ತೆ ಮಡಿಕೇರಿ
ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ .22 (50ಮೀ)ನಲ್ಲಿ ಬಡುವಂಡ ಶ್ಲೋಕ್ ಸುಬ್ಬಯ್ಯ ಪ್ರಥಮ, ಚಿಯಕಪೂವಂಡ ಜೀವನ್ ದ್ವಿತೀಯ, ಪುತ್ತರೀರ ನಂಜಪ್ಪ ತೃತೀಯ ಸ್ಥಾನ ಪಡೆದುಕೊಂಡರು.
12 ಬೋರ್ ತೆಂಗಿನಕಾಯಿ ಶೂಟಿಂಗ್ (30ಮೀ) ಸ್ಪರ್ಧೆಯಲ್ಲಿ ಸಿಜು ಮಂಡ್ಯ ಪ್ರಥಮ, ಆಲೆಮಾಡ ಬೋಪಣ್ಣ ದ್ವಿತೀಯ, ಪುಗ್ಗೇರ ರಾಜೇಶ್ ತೃತೀಯ ಸ್ಥಾನ ಪಡೆದುಕೊಂಡರು. ಏರ್ ರೈಫಲ್ ಎಗ್ ಶೂಟಿಂಗ್ (15ಮೀ) ವಿಭಾಗದಲ್ಲಿ ಕೇಚಿರ ಶಮನ್ ಪ್ರಥಮ, ಕೆ.ಜೆ.ನವೀನ್, ಬಡವಂಡ ಧನು ದೇವಯ್ಯ ತೃತೀಯ ಸ್ಥಾನ ಪಡೆದುಕೊಂಡರು.ವಿಜೇತರಿಗೆ ಪ್ರಥಮ 20 ಸಾವಿರ ರು., ದ್ವಿತೀಯ 15 ಸಾವಿರ ರು. ಹಾಗೂ ತೃತೀಯ ಸ್ಥಾನ ಪಡೆದವರಿಗೆ 10 ಸಾವಿರ ರು. ನಗದು ಹಾಗೂ ಆಕರ್ಷಕ ಸಿಲ್ವರ್ ಟ್ರೋಫಿ ನೀಡಲಾಯಿತು.ರಸ ಪ್ರಶ್ನೆ ಸ್ಪರ್ಧೆ:ಮುದ್ದಂಡ ಹಾಕಿ ಉತ್ಸವದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ರಸ ಪ್ರಶ್ನೆ ಸ್ಪರ್ಧೆ ‘ಕೊಡವ ಚೊದ್ಯ’ ಸ್ಪರ್ಧೆಯ ಅಂತಿಮ ಸುತ್ತು ಭಾನವಾರ ನಡೆಯಿತು.ಅಂತಿಮ ಸುತ್ತಿಗೆ ಶಾಂತೆಯಂಡ, ಚಿಯಕಪೂವಂಡ, ಅಮ್ಮಣಿಚಂಡ, ಓಡಿಯಂಡ (ಸೂರ್ಲಬ್ಬಿ), ಕುಪ್ಪಂಡ (ಕೈಕೇರಿ), ಪೆಮ್ಮಡಿಯಂಡ ಸೇರಿದಂತೆ ಆರು ತಂಡಗಳು ಆಯ್ಕೆಯಾಗಿದ್ದು, ಅಂತಿಮ ಆರು ಸುತ್ತಿನ ಸ್ಪರ್ಧೆಯಲ್ಲಿ ಕುಪ್ಪಂಡ (ಕೈಕೇರಿ) ತಂಡ 150 ಅಂಕ ಪಡೆಯುವ ಮೂಲಕ ಮೊದಲನೇ ಸ್ಥಾನ ಪಡೆದುಕೊಂಡರೆ, ಪೆಮ್ಮಡಿಯಂಡ ತಂಡ 110 ಅಂಕಗಳೊಂದಿಗೆ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಅಮ್ಮಣಿಚಂಡ ತಂಡ 100 ಅಂಕ ಪಡೆಯುವ ಮೂಲಕ ತೃತೀಯ ಸ್ಥಾನ ಪಡೆದುಕೊಂಡಿತು.ರಸ ಪ್ರಶ್ನೆ ಸ್ಪರ್ಧೆಯನ್ನು ಕ್ವಿಸ್ ಮಾಸ್ಟರ್ ಬೊಳ್ಳೆರ ಪೃಥ್ವಿ ಪೂಣಚ್ಚ, ಪಟ್ಟಮಾಡ ಪ್ರೀತ್ ಚಿಣ್ಣಪ್ಪ ನಡೆಸಿಕೊಟ್ಟರು. ಸಂಚಾಲಕರಾಗಿ ಪುಡಿಯಂಡ ಸುನೀಲ್ ಪೂವಯ್ಯ ಹಾಗೂ ಸಮಿತಿ ಸದಸ್ಯರಾಗಿ ಅಮ್ಮಣಿಚಂಡ ಸುಭಾಷ್ ಕಾರ್ಯಪ್ಪ, ಅಮ್ಮಣಿಚಂಡ ನಿರ್ಜಿತ್ ಕಾರ್ಯಪ್ಪ, ಐಚೆಟ್ಟೀರ ರೋಶನ್ ತಿಮ್ಮಯ್ಯ, ಚೆನ್ನಪಂಡ ದರ್ಶನ್, ನೆರ್ಪಂಡ ನವ್ಯ ಮಂದಪ್ಪ, ಬಲ್ಟಿಕಾಳಂಡ ದಿಶಾ ಹೇಮಾವತಿ, ಮುದ್ದಂಡ ಗ್ರೀಷ್ಮ, ಮಾಚೆಟ್ಟೀರ ಬಿಶನ್ ಚಿಣ್ಣಪ್ಪ ಕಾರ್ಯನಿರ್ವಹಿಸಿದರು. ಸ್ಪರ್ಧೆಯ ಮೊದಲ ಸುತ್ತಿಗೆ 35 ತಂಡಗಳು ಸ್ಪರ್ಧಿಸಿದ್ದು, ಒಂದು ತಂಡದಲ್ಲಿ 3 ಮಂದಿ ಪಾಲ್ಗೊಂಡಿದ್ದರು. ಸ್ಪರ್ಧೆಯನ್ನು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ, ಮುದ್ದಂಡ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ಹಾಗೂ ವಿರಾಜಪೇಟೆ ಕೊಡವ ಸಮಾಜದ ಗೌರವ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಉದ್ಘಾಟಿಸಿದರು.