ಕನ್ನಡಪ್ರಭ ವಾರ್ತೆ ಕಡೂರು
ಕೆರೆಗೆ ಬಿದ್ದ ಬೈಕ್ ತರಲು ನೀರಿಗೆ ಇಳಿದ ಯುವಕ ಕೊಚ್ಚಿಕೊಂಡು ಹೋಗಿ ಸಖರಾಯ ಪಟ್ಟಣ ಸಮೀಪದ ಸ್ಮಶಾನದ ಕೆರೆಯಲ್ಲಿ ಶವವಾಗಿ ಶುಕ್ರವಾರ ಪತ್ತೆಯಾಗಿದ್ದಾನೆ.ಲಕ್ಯಾ ಹೋಬಳಿ ಸಾದರಹಳ್ಳಿಯ ಚಂದ್ರಮ್ಮ ಎಂಬುವರ ಪುತ್ರ ಯತೀಶ್ (22) ಮೃತ ಯುವಕ. ಬುಧವಾರ ಸಂಜೆ ಯತೀಶ ತನ್ನ ಸ್ನೇಹಿತ ಪ್ರದೀಪನೊಂದಿಗೆ ಪಿಳ್ಳೇನಹಳ್ಳಿಗೆ ಬೈಕಿನಲ್ಲಿ ತೆರಳುತ್ತಿದ್ದರು. ಮಸೀದಿ ಕೆರೆಯಲ್ಲಿ ಯತೀಶನ ಸ್ನೇಹಿತ ಪ್ರದೀಪ್ ಬೈಕಿನಲ್ಲಿ ಕೆರೆ ದಾಟಿದ್ದಾರೆ. ಆಗ ನೀರಿನ ರಭಸಕ್ಕೆ ಬೈಕು ಕೆರೆಗೆ ಬಿದ್ದಿದೆ. ಯತೀಶ್ ಬೈಕ್ ತರುತ್ತೇನೆಂದು ಕೆರೆಗೆ ಹಾರಿ ಹೋದವನು ಹೊರಗೆ ಬಾರದ ಕಾರಣ ಯತೀಶನ ತಾಯಿಗೆ ಪ್ರದೀಪ್ ಸುದ್ದಿ ಮುಟ್ಟಿಸಿದ್ದನು.
ತಾಯಿ ಚಂದ್ರಮ್ಮ ಸಖರಾಯಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರು ನೀಡಿದ ದೂರಿನ ಅನ್ವಯ ಬುಧವಾರ ಸಂಜೆಯಿಂದಲೇ ನಾವು ಕ್ರಮ ಕೈಗೊಂಡು ಯತೀಶನ ಪತ್ತೆಗೆ ಶೋಧ ಕಾರ್ಯ ಆರಂಭಿಸಿದೆವು. ಎರಡು ದಿನಗಳ ಕಾಲ ಶೋಧಿಸುವ ಮೂಲಕ ಶುಕ್ರವಾರ ಮಧ್ಯಾಹ್ನ 4 ಗಂಟೆಗೆ ಕೆರೆ ದಡದಿಂದ ಸುಮಾರು 200 ಮೀ. ದೂರದಲ್ಲಿ ಯತೀಶನ ಮೃತ ದೇಹ ಪತ್ತೆಯಾಗಿದೆ.ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರಾದ ಮೂಡಿಗೆರೆಯ ಫಿಶ್ ಮೋಹನ್, ಬಣಕಲ್ ನ ಆರಿಫ್, ಶ್ರೀನಿವಾಸ್ ಮತ್ತು ಅವರ ತಂಡ ಶವ ಹೊರ ತೆಗೆದಿದೆ ಎಂದರು.
ಈ ಕುರಿತು ತಾಲೂಕಿನ ಸಖರಾಯಪಟ್ಟಣದ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಪವನ್ ಮಾಹಿತಿ ನೀಡಿ ಶುಕ್ರವಾರ ಯುವಕ ಯತೀಶನ ಮೃತದೇಹ ಸ್ಮಶಾನದ ಕೆರೆಯಲ್ಲಿ ಪತ್ತೆಯಾಗಿರುವ ವಿಚಾರ ತಿಳಿಸಿದರು. ಕಾರ್ಯಾಚರಣೆಯಲ್ಲಿ ಪಿಎಸೈ ಪವನ್, ಎಎಸೈ ಕುಮಾರಪ್ಪ, ಸುರೇಶ್, ಶ್ರೀಧರ್, ಗಿರೀಶ್, ಮಂಜಪ್ಪ ಮತ್ತಿತರರು ಇದ್ದರು.22ಕೆಕೆಡಿಯು1.
ಬೈಕ್ ತರಲು ಕೆರೆ ನೀರಿಗೆ ಬಿದ್ದ ಯತೀಶ್ ಶವವಾಗಿ ಪತ್ತೆ.