ಕನ್ನಡಪ್ರಭ ವಾರ್ತೆ ತುರುವೇಕೆರೆ
ಚುನಾವಣಾ ಸಂಧರ್ಭದಲ್ಲಿ ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಪ್ರಭಾಕರ್, ಸ್ವಪ್ನ ನಟೇಶ್, ರವಿಕುಮಾರ್, ಚಿದಾನಂದ್, ಅಂಜನ್ ಕುಮಾರ್, ಆರ್.ಮಧು, ಎನ್. ಆರ್.ಸುರೇಶ್, ಯಜಮಾನ್ ಮಹೇಶ್, ಆಶಾ ರಾಜಶೇಖರ್ ಹಾಜರಿದ್ದರೆ, ಜಯ್ಯಮ್ಮ, ನದೀಂ, ಮತ್ತು ಮೇಘನಾ ಸುನಿಲ್ ಗೈರು ಹಾಜರಾಗಿದ್ದರು. ನೂತನ ಅಧ್ಯಕ್ಷೆ ಶೀಲಾ ಶಿವಪ್ಪನಾಯಕ ರವರನ್ನು ಮಾಜಿ ಶಾಸಕರಾದ ಮಸಾಲಾ ಜಯರಾಮ್, ಎಂ.ಡಿ.ಲಕ್ಷ್ಮೀನಾರಾಯಣ್, ತಾಲೂಕು ಬಿಜೆಪಿ ಅಧ್ಯಕ್ಷ ಮೃತ್ಯುಂಜಯ, ಪಟ್ಟಣ ಪಂಚಾಯಿತಿ ಸದಸ್ಯರು, ಹಲವಾರು ಮುಖಂಡರು ಅಭಿನಂದಿಸಿದರು. ನೂತನ ಅಧ್ಯಕ್ಷೆ ಶೀಲಾ ಶಿವಪ್ಪನಾಯಕ ಮಾತನಾಡಿ ತಾವು ಅಧ್ಯಕ್ಷರಾಗಲು ಕಾರಣಕರ್ತರಾದ ಮಾಜಿ ಶಾಸಕ ಮಸಾಲಾ ಜಯರಾಮ್, ಪಟ್ಟಣ ಪಂಚಾಯಿತಿಯ ಎಲ್ಲಾ ಸದಸ್ಯರು, ಬಿಜೆಪಿಯ ಎಲ್ಲಾ ಪದಾದಿಕಾರಿಗಳು, ಕಾರ್ಯಕರ್ತರು, ಪಟ್ಟಣದ ಜನತೆಗೆ ತಮ್ಮ ಕೃತಜ್ಞತೆಗಳನ್ನು ತಿಳಿಸಿದರು. ಯಾರೇ ಆಗಲಿ ಉನ್ನತ ಹುದ್ದೆ ಅಲಂಕರಿಸಿದ ಕೂಡಲೇ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸುವುದು ವಾಡಿಕೆ. ಆದರೆ ಶೀಲಾ ಶಿವಪ್ಪನಾಯಕ ರವರು ತಾವು ಅಧ್ಯಕ್ಷರಾದ ವೇಳೆ ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ಕಾರಣಕ್ಕೆ ಪಟಾಕಿ ಸಿಡಿಸಬಾರದೆಂದು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಹಾಗಾಗಿ ಅಭಿಮಾನಿಗಳು ಪಟಾಕಿ ಹೊಡೆಯದೇ ಕೇವಲ ಸಿಹಿ ಹಂಚಿ ಸಂಭ್ರಮಿಸಿದರು.