ಕನ್ನಡಪ್ರಭ ವಾರ್ತೆ ಕೊರಟಗೆರೆ
ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿದ ನಂತರ ಶವವನ್ನು ತುಂಡು ತುಂಡಾಗಿ ಕತ್ತರಿಸಿದ ಪ್ರಕರಣದ ತನಿಖೆ ಮುಂದುವರೆದಿದ್ದು ಶುಕ್ರವಾರವು ಸಹ ಮತ್ತೆ ಕೊರಟಗೆರೆಯ ಸುತ್ತಮುತ್ತಲಿನ 10 ಸ್ಥಳಗಳಲ್ಲಿ ಮಹಿಳೆಯ ಶವದ ತುಂಡಿನ ಪಾಕೇಟ್ ಜೊತೆಯಲ್ಲಿ ಕಬ್ಬಿಣದ ಮೇಟಲ್ ಪೀಸ್‌ಗಳು ಸಹ ಪೊಲೀಸರಿಗೆ ದೊರೆತಿವೆ.ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಚಿಂಪುಗಾನಹಳ್ಳಿ ಬಳಿ ಗುರುವಾರ ೮ಕಡೆ ಮಹಿಳೆಯ ಕೈಗಳು ಸೇರಿದಂತೆ ದೇಹದ ಭಾಗಗಳು ಸಿಕ್ಕಿದ್ದವು. ಶುಕ್ರವಾರ ಮತ್ತೆ ಸಿದ್ದರಬೆಟ್ಟ ಮತ್ತು ಮಲ್ಲೇಕಾವು ಸುತ್ತಮುತ್ತ 10 ಕಡೆಯ ವಿವಿಧ ಸ್ಥಳಗಳಲ್ಲಿ ಕಪ್ಪು ಕವರಿನ ಪಾಕೇಟ್‌ನಲ್ಲಿ ಮಹಿಳೆಯ ಕಾಲು, ದೇಹ ಸೇರಿದಂತೆ ತಲೆ ಸಿಕ್ಕಿದೆ.ಕೊರಟಗೆರೆಯ ಸಿದ್ದರಬೆಟ್ಟದ ಸಮೀಪ, ಮರೇನಾಯಕನಹಳ್ಳಿ, ಮಲ್ಲೇಕಾವು, ಚಿಕ್ಕಾವಳಿ ಕೆರೆ, ಲಿಂಗಾಪುರ, ಜೋನಿಗರಹಳ್ಳಿ ಸೇರಿದಂತೆ ಇಂದು 10 ಕಡೆಗಳಲ್ಲಿ ಮಹಿಳೆಯ ಶವದ ತುಂಡುಗಳು ಸಿಕ್ಕಿದೆ. ಮಹಿಳೆಯ ತಲೆಗೆ ಬಲವಾದ ಪೆಟ್ಟು ಸಹ ಬಿದ್ದಿದ್ದು ಗುರುತು ಸೀಗದಂತೆ ಆಗಿದೆ ಎನ್ನಲಾಗಿದೆ.ಬಾಕ್ಸ್;-೧೫ಜನರ ತಂಡದಿಂದ ತನಿಖೆ..ತುಮಕೂರು ಎಸ್ಪಿ ಅಶೋಕ್ ಮಾರ್ಗದರ್ಶನದಲ್ಲಿ ತುಮಕೂರು ಮತ್ತು ಶಿರಾ ಡಿವೈಎಸ್ಪಿ, ಕೊರಟಗೆರೆ, ಪಾವಗಡ, ಮಧುಗಿರಿ ಸಿಪಿಐ ಮತ್ತು ೬ಜನ ಪಿಎಸೈ ಸೇರಿದಂತೆ ೧೫ಕ್ಕೂ ಅಧಿಕ ಕ್ರೈಂ ಪೊಲೀಸರ ತಂಡದಿಂದ ಪ್ರಕರಣದ ತನಿಖೆ ನಡೆಯುತ್ತಿದೆ. ಹಂತಕನ ಸೆರೆಗಾಗಿ ಹಗಲುರಾತ್ರಿ ಎನ್ನದೆ ಪೊಲೀಸರು ವಿಶೇಷ ಕಾರ್ಯಚರಣೆ ನಡೆಸುತ್ತಿದ್ದಾರೆ. ವಾಮಾಚಾರದ ಶಂಕೆ
ಮಹಿಳೆಯ ಶವದ ದೇಹದ ತುಂಡಿನ ಜೊತೆ ಸಿಕ್ಕಿರುವ ಪಾಕೇಟ್‌ನಲ್ಲಿ ಕಬ್ಬಿಣದ ಮೇಟಲ್ ಪೀಸ್‌ಗಳು ಪತ್ತೆಯಾಗಿವೆ. ಕೊರಟಗೆರೆ ಕ್ಷೇತ್ರದ ನಾಲ್ಕು ದಿಕ್ಕಿನ ರಸ್ತೆ ಬದಿಗಳಲ್ಲಿ ಶವದ ತುಂಡುಗಳನ್ನು ಹಾಕಿರುವ ಹಿಂದೆ ವಾಮಚಾರದ ಶಂಕೆಯು ವ್ಯಕ್ತವಾಗಿದೆ. ಹಿನ್ನೆಲೆ: ಗೃಹ ಸಚಿವರ ಸ್ವ ಕ್ಷೇತ್ರದಲ್ಲಿ ಮನುಷ್ಯನ ವಿಕೃತಿಗೆ ಕನ್ನಡಿ ಹಿಡಿಯುವ ಘಟನೆ ತಾಲೂಕಿನಲ್ಲಿ ನಡೆದಿದ್ದು. ಘಟನಾ ಸ್ಥಳಕ್ಕೆ ಬಂದ ಪೊಲೀಸರೇ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಂಪುಗಾನಹಳ್ಳಿ ಸಮೀಪದ ಮುತ್ಯಾಲಮ್ಮ ದೇವಾಲಯ ಮತ್ತು ಸಿದ್ಧರಬೆಟ್ಟದ ಸುಮಾರು ೮ ಕಡೆಗಳಲ್ಲಿ ಅಪರಿಚಿತ ಮಹಿಳೆಯ ತುಂಡು ತುಂಡಾದ ಭಾಗಗಳು ದೊರೆತಿವೆ. ಅಪರಿಚಿತ ಮಹಿಳೆಯ ರುಂಡ-ಮುಂಡ ಸೇರಿದಂತೆ ಕೈಕಾಲು ಕಟ್ ಮಾಡಿ ಹತ್ತಾರು ಕಡೆಗಳಲ್ಲಿ ಎಸೆದಿರುವ ಕೃತ್ಯ ಮಾನವ ಕುಲವೇ ಬೆಚ್ಚಿ ಬೀಳುವಂತೆ ಮಾಡಿದೆ.ಅಪರಿಚಿತ ಮಹಿಳೆಯನ್ನು ಕೊಲೆ ಮಾಡಿದ ದುಷ್ಕರ್ಮಿ ಮೃತದೇಹದ ರುಂಡಮುಂಡ ಬೇರ್ಪಡಿದ್ದಾನೆ. ಆಕೆಯ ಪ್ರತಿಯೊಂದು ಭಾಗವನ್ನು ಕತ್ತರಿಸಿ ಪ್ಲಾಸ್ಟಿಕ್ ಕವರಿನಲ್ಲಿ ಪಾಕೇಟ್ ಮಾಡಿ ಅದನ್ನು ಕೊರಟಗೆರೆ ತಂದು ಹತ್ತಾರು ಕಡೆ ಎಸೆದಿರೋದು ಕಂಡುಬಂದಿದೆ. ದೇಹದ ಭಾಗಗಳು ಮಾತ್ರ ಪತ್ತೆಯಾಗಿದ್ದು ತಲೆ ಬುರುಡೆ ಮತ್ತು ತಲೆಯ ಭಾಗವೇ ಇನ್ನೂ ಪೊಲೀಸರಿಗೆ ಸಿಕ್ಕಿದಿರುವುದು ಪೊಲೀಸರಿಗೆ ತಲೆ ನೋವಾಗಿದೆ.
------------ಕೋಟ್ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಚಿಂಪುಗಾನಹಳ್ಳಿ ಹಾಗೂ ಲಿಂಗಾಪುರ ಸೇರಿದಂತೆ ಹಲವು ಮಹಿಳೆಯ ಕೈಗಳು, ದೇಹದ ಕೆಲವು ಭಾಗಗಳು ಸಿಕ್ಕಿದ್ದು, ಕೈಗಳ ಮೇಲೆ ಎರಡು ಟ್ಯಾಟೂಗಳು ಕಂಡು ಬಂದಿದ್ದು, ಹೆಚ್ಚಿನ ತನಿಖೆಗಾಗಿ ದೇಹದ ಭಾಗಗಳನ್ನು ಎಫ್‌ಎಸ್‌ಎಲ್ ಗೆ ರವಾನೆ ಮಾಡಲಾಗುವುದು. ಈಗಾಗಲೇ ವಿಶೇಷ ತನಿಖಾ ತಂಡ ರಚಿಸಲಾಗಿದ್ದು, ಆದಷ್ಟು ಬೇಗ ಆರೋಪಿಗಳ ಹೆಡೆಮುರಿ ಕಟ್ಟಲಾಗುವುದು. -ಅಶೋಕ ವೆಂಕಟ್. ಎಸ್ಪಿ. ತುಮಕೂರುಕೋಟ್ ಕೊರಟಗೆರೆಯ ಜನತೆ ಎಂದಿಗೂ ಕಂಡಿರದ ಘಟನೆ ನಾವು ನೋಡುತ್ತಿದ್ದೇವೆ. ಮಹಿಳೆಯನ್ನು ಇಷ್ಟು ಬರ್ಬರವಾಗಿ ಕೊಲೆ ಮಾಡಿ ಇಂತಹ ಕೃತ್ಯದಿಂದ ಮನುಜ ಕುಲವು ಬೆಚ್ಚಿಬಿದ್ದಿದೆ. ಸಮಾಜದಲ್ಲಿ ಭಯದ ವಾತವರಣ ನಿರ್ಮಾಣಕ್ಕೆ ಕಾರಣವಾದ ಆರೋಪಿಗೆ ನಮ್ಮ ಪೊಲೀಸರು ತಕ್ಕ ಶಿಕ್ಷೆ ನೀಡಬೇಕಿದೆ. ದೇವರಾಜು. ಸ್ಥಳೀಯ ವಾಸಿ. ಚಿಂಪುಗಾನಹಳ್ಳಿ