ದುಗ್ಗಮ್ಮ ಜಾತ್ರೆ ನಿಮಿತ್ತ ದೇಹದಾರ್ಢ್ಯ ಸ್ಪರ್ಧೆ ಇಂದು

KannadaprabhaNewsNetwork |  
Published : Feb 14, 2026, 01:30 AM IST
13ಕೆಡಿವಿಜಿ14-ದಾವಣಗೆರೆಯಲ್ಲಿ ಶುಕ್ರವಾರ ಮಯೂರ್ ಫಿಟ್‌ನೆಸ್ ಜಿಮ್ ಮಾಲೀಕ ಎಸ್.ಬಿ.ನಾಗರಾಜ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ನಗರ ದೇವತೆ ಶ್ರೀ ದುರ್ಗಾಂಬಿಕಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಮಯೂರ್ ಫಿಟ್‌ನೆಸ್ ಜಿಮ್‌ನಿಂದ ಫೆ.14ರಂದು ಪ್ರಥಮ ಬಾರಿಗೆ ಜಿಲ್ಲಾಮಟ್ಟದ ದೇಹದಾರ್ಢ್ಯ ಸ್ಪರ್ಧೆ (ಎತ್ತರ ವಿಭಾಗ)ಯನ್ನು ನಗರದ ಬೂದಾಳ್ ರಸ್ತೆಯ ಡೈನೋಸಾರ್ ಬಿಲ್ಡಿಂಗ್‌ ಮುಂಭಾಗದ ಮಯೂರ್ ಕ್ಲಾಸಿಕ್ 2026ನಲ್ಲಿ ಆಯೋಜಿಸಲಾಗಿದೆ ಎಂದು ಮಯೂರ್ ಫಿಟ್‌ನೆಟ್‌ ಜಿಮ್ ಮಾಲೀಕ ಎಸ್.ಬಿ.ನಾಗರಾಜ ಹೇಳಿದ್ದಾರೆ.

- ಮಯೂರ್ ಫಿಟ್‌ನೆಟ್‌ ಜಿಮ್ ಮಾಲೀಕ ಎಸ್.ಬಿ.ನಾಗರಾಜ ಮಾಹಿತಿ

- - -

ದಾವಣಗೆರೆ: ನಗರ ದೇವತೆ ಶ್ರೀ ದುರ್ಗಾಂಬಿಕಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಮಯೂರ್ ಫಿಟ್‌ನೆಸ್ ಜಿಮ್‌ನಿಂದ ಫೆ.14ರಂದು ಪ್ರಥಮ ಬಾರಿಗೆ ಜಿಲ್ಲಾಮಟ್ಟದ ದೇಹದಾರ್ಢ್ಯ ಸ್ಪರ್ಧೆ (ಎತ್ತರ ವಿಭಾಗ)ಯನ್ನು ನಗರದ ಬೂದಾಳ್ ರಸ್ತೆಯ ಡೈನೋಸಾರ್ ಬಿಲ್ಡಿಂಗ್‌ ಮುಂಭಾಗದ ಮಯೂರ್ ಕ್ಲಾಸಿಕ್ 2026ನಲ್ಲಿ ಆಯೋಜಿಸಲಾಗಿದೆ ಎಂದು ಮಯೂರ್ ಫಿಟ್‌ನೆಟ್‌ ಜಿಮ್ ಮಾಲೀಕ ಎಸ್.ಬಿ.ನಾಗರಾಜ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಜನರಲ್ಲಿ ದೇಹದಾರ್ಢ್ಯ, ಫಿಟ್‌ನೆಸ್‌ ಮತ್ತು ಶಿಸ್ತುಬದ್ಧತೆ ಉತ್ತೇಜಿಸಲು ದುಗ್ಗಮ್ಮ ಜಾತ್ರೆ ಅಂಗವಾಗಿ ಇದೇ ಮೊದಲ ಸಲ ಸ್ಪರ್ಧೆ ಆಯೋಜಿಸಲಾಗಿದೆ. ಪ್ರತಿ ಜಾತ್ರೆ ವೇಳಿ ಸ್ಪರ್ಧೆ ನಡೆಸಲಾಗುವುದು. ಈಗಾಗಲೇ ಯಾವುದೇ ಟೈಟಲ್‌ ಗೆದ್ದವರಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇಲ್ಲ ಎಂದರು.

ಸ್ಪರ್ಧೆ ಪ್ರಥಮ ಸ್ಥಾನಕ್ಕೆ ಮಿಸ್ಟರ್ ಮಯೂರ್ 2026 ಟೈಟಲ್‌ ಅವಾರ್ಡ್ ಹಾಗೂ ₹10 ಸಾವಿರ ನಗದು ಬಹುಮಾನ, ದ್ವಿತೀಯ ಸ್ಥಾನಕ್ಕೆ ಮೋಸ್ಟ್ ಮಸ್ಕ್ಯೂಲರ್‌-2026 ಹಾಗೂ ₹5 ಸಾವಿರ ನಗದು ಬಹುಮಾನ, ತೃತೀಯ ಸ್ಥಾನಕ್ಕೆ ಬೆಸ್ಟ್ ಪೋಸರ್-2026 ಹಾಗೂ ₹3 ಸಾವಿರ ನಗದು ಬಹುಮಾನ ನೀಡಲಾಗುವುದು. ಮಯೂರ್ ಫಿಟ್ನೆಸ್ ಜಿಮ್ ಮಾಲೀಕ ಎಸ್.ಬಿ.ನಾಗರಾಜ ಅಧ್ಯಕ್ಷತೆಯಲ್ಲಿ ಪಾಲಿಕೆ ಮಾಜಿ ಸದಸ್ಯ ಎಸ್.ಬಸಪ್ಪ ಸ್ಪರ್ಧೆ ಉದ್ಘಾಟಿಸಲಿದ್ದು, ಪಾಲಿಕೆ ಮಾಜಿ ಸದಸ್ಯ, ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು ಜೆ.ಎನ್. ಶ್ರೀನಿವಾಸ, ಅಜಯ್ ಫಿಟ್‌ನೆಸ್‌ ಜಿಮ್ ಮಾಲೀಕ ಅಜಯ್ ಇತರರು ಭಾಗವಹಿಸುವರು ಎಂದು ಹೇಳಿದರು.

ಕಾಂಗ್ರೆಸ್‌ ಯುವ ಮುಖಂಡರಾದ ಯುವ ಉದ್ಯಮಿ ಸಮರ್ಥ ಎಂ. ಶಾಮನೂರು, ಪ್ರವೀಣ ಹುಲ್ಮನಿ, ಎಲ್.ಎಂ.ಎಚ್. ಸಾಗರ್, ಕರವೇ ಜಿಲ್ಲಾಧ್ಯಕ್ಷ ನಾಗರಾಜ ಜಮ್ನಳ್ಳಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿಚ್ಛಿಸುವ ಕ್ರೀಡಾಪಟುಗಳು ಹೆಚ್ಚಿನ ಮಾಹಿತಿಗೆ ಎಸ್.ಬಿ. ನಾಗರಾಜ (ಮೊ- 94833-44445), ಆಕಾಶ್ (80882- 44216) ಅವರನ್ನು ಸಂಪರ್ಕಿಸಲು ಕೋರಿದರು.

ಕ್ರೀಡಾಪಟುಗಳಾದ ಗುರುಮೂರ್ತಿ, ಆಕಾಶ್, ಕೋಚ್‌ ಹನುಮಂತು, ಅಭಿ, ಎನ್.ಎಸ್.ಮನೋಜ್ ಇತರರು ಇದ್ದರು. - - -

-13ಕೆಡಿವಿಜಿ14:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾಸ್ಪತ್ರೆಯಲ್ಲಿ ಮಿಡ್ ವೈಫರಿ ಲೆಡ್ ಕೇರ್ ಯುನಿಟ್‌ಗೆ ಚಾಲನೆ
ನಗರೋತ್ಥಾನ ಕಾಮಗಾರಿ ಪೂರ್ಣಗೊಳಿಸಲು ನಿರ್ದಿಷ್ಟ ಕಾಲಮಿತಿ