ಕನ್ನಡಪ್ರಭ ವಾರ್ತೆ ರಿಪ್ಪನ್‌ಪೇಟೆ
ಪಟ್ಟಣದ ಸ್ಥಳೀಯ ಗ್ರಾಪಂ ಸಭಾಂಗಣದಲ್ಲಿ ಬುಧವಾರ ನಡೆದ ವರ್ತಕರ ಮತ್ತು ಸಾರ್ವಜನಿಕರ ಸಮಾಲೋಚನಾ ಸಭೆಯಲ್ಲಿ ವರ್ತಕರ ಹಾಗೂ ಸಾರ್ವಜನಿಕರ ಅಹವಾಲು ಆಲಿಸಿ ನಂತರ, ವಾಹನ ಸವಾರರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಹಾಗೂ ತಮ್ಮಲ್ಲಿ ಸಂಚಾರಿ ನಿಯಮಗಳ ಕುರಿತು ಜಾಗೃತಿಗೊಳಿಸಲು ಒಂದು ತಿಂಗಳ ಕಾಲ ನಮ್ಮ ಸಿಬ್ಬಂದಿ ನೇಮಿಸಲಾಗುವುದು ನಂತರ ತಾವು ಲೋಕೋಪಯೋಗಿ ಇಲಾಖೆಯವರು ಬಿಳಿ ಬಣ್ಣದ (ಮಾರ್ಕ್)ಗುರುತು ಹಾಕಿದ ಮೇಲೆ ವೃತ್ತದ ಸುತ್ತಮುತ್ತ ಬಸ್ ಪ್ರಯಾಣಿಕರು ಹತ್ತಿ ಇಳಿಯಲು ಮಾತ್ರ ಅವಕಾಶವಿರುತ್ತದೆ. ಉಳಿದಂತೆ ಓಡಾಡುವ ವಾಹನಗಳ ದಟ್ಟಣೆಯ ಕಾರಣ ನಾಲ್ಕು ಚಕ್ರದ ವಾಹನಗಳನ್ನು ಪ್ರತ್ಯೇಕವಾಗಿ 100 ಮೀಟರ್ ಅಂತರದಲ್ಲಿ ನಿಲ್ಲಿಸುವುದು ಹಾಗೂ ದ್ವಿಚಕ್ರವಾಹನಗಳನ್ನು ಡಿವೈಡರ್‌ನ ಎರಡು ಬದಿಯಲ್ಲಿ ನಿಲುಗಡೆ ಮಾಡಲು ಅವಕಾಶ ನೀಡಲಾಗುವುದು. ವಾಹನ ಸವಾರರು ಅಡ್ಡಾದಿಡ್ಡಿಯಾಗಿ ನಿಲ್ಲಿಸಿದಲ್ಲಿ ನಿರ್ದಾಕ್ಷಿಣ್ಯವಾಗಿ ಸಾರಿಗೆ ನಿಯಮದಡಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವರ್ತಕರ ಪರವಾಗಿ ಎಂ.ಸುರೇಶ್‍ಸಿಂಗ್, ಸುಂದರೇಶ್, ಕೆ.ಬಿ.ನಾಗಭೂಷಣ, ಎಚ್.ಎಸ್.ಸತೀಶ್, ಡಿ.ಸುರೇಶ ಪ್ರಭು, ರಿ.ಸೋಮಶೇಖರ ಮಾತನಾಡಿ, ಸಾಗರ ರಸ್ತೆಯ ವಿಸ್ತರಣೆ ಕಾರ್ಯದಲ್ಲಿ ಸಾಕಷ್ಟು ಲೋಪ ಕಂಡುಬಂದಿದೆ, ನಿಯಮ ಪಾಲಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವ ಬಗ್ಗೆ ಗಮನ ಸೆಳೆದರು.ಸಾರ್ವಜನಿಕರಾದ ಸುದೀಂದ್ರ ಪೂಜಾರಿ, ಎಂ.ಬಿ.ಮಂಜುನಾಥ, ಆರ್.ಎ.ಚಾಬುಸಾಬ್, ಆರ್.ಎನ್.ಮಂಜುನಾಥ, ಡಿ.ಈ.ಮಧುಸೂದನ್, ಉಬೇದುಲ್ಲಾ ಷರೀಫ್ ಮಾತನಾಡಿ, ವಾಹನ ನಿಲುಗಡೆಯಿಂದ ಸಾರ್ವಜನಿಕರಿಗೆ ಅಗುವ ತೊಂದರೆ ಮತ್ತು ಇಲಾಖೆಯ ನಿಯಮದಂತೆ ಅನುಸರಿಸಬೇಕಾದ ಕ್ರಮದ ಕುರಿತು ಸಾಕಷ್ಟು ಚರ್ಚೆಗಳು ನಡೆದು ಕೊನೆಗೆ ತಮ್ಮ ನಿಯಮದಡಿ ಕೈಗೊಳ್ಳುವ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿ, ಹೋಂ ಗಾರ್ಡ್ ಮತ್ತು ಪೊಲೀಸ್ ಸಿಬ್ಬಂದಿ ನಿಯೋಜಿಸುವಂತೆ ಸಲಹೆ ನೀಡಿದರು.ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ಸುನೀಲ್, ಪಿಎಸ್‍ಐ ರಾಜುರೆಡ್ಡಿ, ಪ್ರೋಬೆಷನರಿ ಪಿ.ಎಸ್.ಐ.ಶ್ರೀಕಾಂತ್ ಹಾಗೂ ಪಂಚಾಯಿತಿ ಸಿಬ್ಬಂದಿವರ್ಗ ಹಾಜರಿದ್ದರು.