ದೇಶೀ ಆಕಳ ಹಾಲು, ತುಪ್ಪದಿಂದ ಮೂಳೆಗಳ ಆರೋಗ್ಯ

KannadaprabhaNewsNetwork |  
Published : Jun 25, 2025, 11:47 PM IST
ಕ್ಯಾಪ್ಷನ25ಕೆಡಿವಿಜಿ32 ದಾವಣಗೆರೆಯಲ್ಲಿ ನಡೆದ ಆರೋಗ್ಯ ಕಾರ್ಯಾಗಾರದಲ್ಲಿ ಯೋಗ ತಜ್ಞ ಡಾ.ರಾಘವೇಂದ್ರ ಗುರೂಜಿ ಮಂಡಿನೋವಿಗೆ ಯೋಗದಿಂದ ಪರಿಹಾರ ಕುರಿತು ಮಾಹಿತಿ ನೀಡಿದರು.........ಕ್ಯಾಪ್ಷನ25ಕೆಡಿವಿಜಿ33 ದಾವಣಗೆರೆಯಲ್ಲಿ ನಡೆದ ಆರೋಗ್ಯ ಕಾರ್ಯಾಗಾರದಲ್ಲಿ ಯೋಗ ತಜ್ಞ ಡಾ.ರಾಘವೇಂದ್ರ ಗುರೂಜಿರನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಪ್ರಸ್ತುತ ದಿನಗಳಲ್ಲಿ ಮಂಡಿನೋವಿನ ಸಮಸ್ಯೆ ಸಣ್ಣ ವಯಸ್ಸಿನಲ್ಲಿಯೇ ಕಂಡುಬರುತ್ತಿದೆ. ದೇಹದಲ್ಲಿ ಪ್ರಮುಖವಾಗಿ ಕ್ಯಾಲ್ಸಿಯಂ, ವಿಟಮಿನ್ ''ಡಿ'' ಕೊರತೆ, ಅವೈಜ್ಞಾನಿಕ ಆಹಾರ ಪದ್ಧತಿ, ಅಧಿಕ ದೇಹದ ತೂಕ ಈ ಸಮಸ್ಯೆಗೆ ಕಾರಣಗಳು ಎಂದು ಯೋಗತಜ್ಞ ಡಾ.ರಾಘವೇಂದ್ರ ಗುರೂಜಿ ಹೇಳಿದ್ದಾರೆ.

- ವಿಶ್ವ ಯೋಗ ದಿನ ಕಾರ್ಯಾಗಾಋದಲ್ಲಿ ಯೋಗತಜ್ಞ ಡಾ.ರಾಘವೇಂದ್ರ ಗುರೂಜಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರಸ್ತುತ ದಿನಗಳಲ್ಲಿ ಮಂಡಿನೋವಿನ ಸಮಸ್ಯೆ ಸಣ್ಣ ವಯಸ್ಸಿನಲ್ಲಿಯೇ ಕಂಡುಬರುತ್ತಿದೆ. ದೇಹದಲ್ಲಿ ಪ್ರಮುಖವಾಗಿ ಕ್ಯಾಲ್ಸಿಯಂ, ವಿಟಮಿನ್ ''''ಡಿ'''' ಕೊರತೆ, ಅವೈಜ್ಞಾನಿಕ ಆಹಾರ ಪದ್ಧತಿ, ಅಧಿಕ ದೇಹದ ತೂಕ ಈ ಸಮಸ್ಯೆಗೆ ಕಾರಣಗಳು ಎಂದು ಯೋಗತಜ್ಞ ಡಾ.ರಾಘವೇಂದ್ರ ಗುರೂಜಿ ಹೇಳಿದರು.

ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರ ಸಭಾಂಗಣದಲ್ಲಿ ವಿಶ್ವ ಯೋಗ ದಿನಾಚರಣೆ ಹಿನ್ನೆಲೆ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ ''''ಬಿಟ್ಟು ಬಿಡದೇ ಕಾಡುವ ಮಂಡಿನೋವಿಗೆ ಯೋಗದಿಂದ ಪರಿಹಾರವಿದೆ'''' ವಿಷಯ ಕುರಿತು ಅವರು ಮಾಹಿತಿ ನೀಡಿದರು.

ಹಿಂದಿನ ಕಾಲದಲ್ಲಿ ಅಜ್ಜ-ಅಜ್ಜಿಯಂದಿರಿಗೆ ಮಾತ್ರ ಮಂಡಿನೋವು, ಕೀಲುನೋವು, ಗಂಟುನೋವುಗಳ ಬಗ್ಗೆ ಹೇಳುತ್ತಿದ್ದುದ್ದನ್ನು ಕೇಳುತ್ತಿದ್ದೆವು. ಈಗ ಕಾಲ ಬದಲಾಗಿದೆ. 30 ವರ್ಷ ದಾಟದ ಮಧ್ಯ ವಯಸ್ಸಿನ ಪುರುಷರು ಹಾಗೂ ಮಹಿಳೆಯರಲ್ಲೂ ಮಂಡಿನೋವಿನ ಸಮಸ್ಯೆ ಕಾಡುತ್ತಿದೆ. ಜಡ ಜೀವನಶೈಲಿ, ಮೂಳೆಗಳ ಸಾಂದ್ರತೆ ಕಡಿಮೆ ಆಗುವುದು ಮುಂತಾದ ಸಮಸ್ಯೆಗಳು ಮಂಡಿನೋವಿಗೆ ಕಾರಣಗಳಾಗಿವೆ ಎಂದರು.

ಪರಿಹಾರಗಳೇನು?:

ಕ್ಯಾಲ್ಸಿಯಂ ವಿಟಮಿನ್ ''''ಬಿ'''' ಮತ್ತು ''''ಡಿ'''' ಹಾಗೂ ''''ಓಮೆಗಾ-3'''' ಕೊಬ್ಬಿನ ಆಮ್ಲಗಳು ಹೆಚ್ಚಿರುವ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡುವುದು ಈ ರೋಗ ನಿಯಂತ್ರಣಕ್ಕೆ ಸೂಕ್ತ. ಮೂಳೆಗಳ ಆರೋಗ್ಯಕ್ಕೆ ಪ್ರತಿದಿನ ಶುದ್ಧ ದೇಶೀಯ ಆಕಳ ಹಾಲು ದಿನಕ್ಕೆ 2 ಬಾರಿ ತಪ್ಪದೇ ಕುಡಿಯಬೇಕು. ಶುದ್ಧ ತುಪ್ಪ ಆಹಾರದಲ್ಲಿ ಯಥೇಚ್ಛವಾಗಿ ಬೆರೆಸಬೇಕು ಅಥವಾ ಹಾಗೆಯೇ ತಿನ್ನಬೇಕು. ಆಹಾರದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಹೆಚ್ಚಾಗಿ ಬಳಸಬೇಕು. ಕ್ಯಾರೆಟ್, ಮೂಲಂಗಿ, ಸಾಲಡ್ ಮಾಡಿ ಸೇವಿಸಬಹುದು. ರಾತ್ರಿ ಮಲಗುವ ಸಮಯದಲ್ಲಿ ಬಿಸಿಹಾಲಿಗೆ ಶುದ್ಧ ಅರಸಿನಪುಡಿ ಬೆರೆಸಿ ಕುಡಿದರೆ ಮಂಡಿನೋವು ಉಪಶಮನ ಸಾಧ್ಯ ಎಂದು ಸಲಹೆ ನೀಡಿದರು.

ಮಕ್ಕಳ ಆಸ್ಪತ್ರೆ ನಿರ್ದೇಶಕ ಡಾ. ಜಿ.ಗುರುಪ್ರಸಾದ್, ಹಿರಿಯ ಮಕ್ಕಳ ತಜ್ಞ ಡಾ.ಸುರೇಶ ಬಾಬು, ಆಸ್ಪತ್ರೆ ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಮೂಗನಗೌಡ ಪಾಟೀಲ್, ಬಾಪೂಜಿ ಆಸ್ಪತ್ರೆ ನಿರ್ದೇಶಕರಾದ ಡಾ.ಕುಮಾರ್, ಡಾ.ಪ್ರಶಾಂತ ಕುಮಾರಿ, ಡಾ.ಕೌಜಲಗಿ, ಡಾ.ಮೃತ್ಯುಂಜಯ, ಡಾ.ಮಧು ಪೂಜಾರ್, ಡಾ.ರೇವಪ್ಪ, ಡಾ.ನಾಗಮಣಿ ಅಗರ್‌ವಾಲ್, ಪೋಷಕರು, ನರ್ಸಿಂಗ್ ವಿದ್ಯಾರ್ಥಿಗಳು, ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.

- - -

(ಕೋಟ್‌) ಮಂಡಿನೋವಿಗೆ ಸೂಕ್ತ ಯೋಗ ಚಿಕಿತ್ಸೆಗೆ ಅಯ್ಯಂಗಾರ್ ಯೋಗ ಚಿಕಿತ್ಸಾ ಪದ್ಧತಿಯಲ್ಲಿ ನುರಿತ ಯೋಗ ತಜ್ಞರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಇದರಿಂದ ಮಂಡಿನೋವಿನ ಯಾವುದೇ ಸಮಸ್ಯೆಯಿದ್ದರೂ ಪರಿಪೂರ್ಣ ಗುಣಮುಖರಾಗಲು ಸಾಧ್ಯ. ಪ್ರತಿನಿತ್ಯ ಯೋಗ ಅಭ್ಯಾಸ ಮಾಡುವುದು ಅತ್ಯವಶ್ಯಕ.

- ಡಾ.ರಾಘವೇಂದ್ರ ಗುರೂಜಿ, ಯೋಗತಜ್ಞ

- - -

-25ಕೆಡಿವಿಜಿ32: ಡಾ.ರಾಘವೇಂದ್ರ ಗುರೂಜಿ.

-25ಕೆಡಿವಿಜಿ33: ದಾವಣಗೆರೆಯಲ್ಲಿ ನಡೆದ ಆರೋಗ್ಯ ಕಾರ್ಯಾಗಾರದಲ್ಲಿ ಯೋಗತಜ್ಞ ಡಾ.ರಾಘವೇಂದ್ರ ಗುರೂಜಿ ಅವರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ