ಜೂ.6ರಂದು ಛತ್ರಪತಿ ಶಿವಾಜಿ ಕುರಿತ ಪುಸ್ತಕ ಬಿಡುಗಡೆ

KannadaprabhaNewsNetwork |  
Published : May 24, 2025, 01:21 AM ISTUpdated : May 24, 2025, 01:22 AM IST
20ಕೆಡಿವಿಜಿ6-ದಾವಣಗೆರೆಯಲ್ಲಿ ಮಂಗಳವಾರ ಮರಾಠಿ ಇತಿಹಾಸಕಾರ, ಲೇಖಕ ದತ್ತಾಜಿ ನಲವಾಡೆ, ಕನ್ನಡ ಅನುವಾದಕ ಪ್ರೊ.ಶಿವಾಜಿರಾವ್ ಚವ್ಹಾಣ್‌ ವಿಶ್ವದ ಮಹಾ ನಾಯಕ ಛತ್ರಪತಿ ಶಿವಾಜಿ ಮಹಾರಾಜ ಎಂಬ ಕೃತಿಯ ಕನ್ನಡ ಅನುವಾದಿತ ಪುಸ್ತಕದ ಪೋಸ್ಟರ್ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ಇತಿಹಾಸಕಾರ ಮಾಳ್ವ ಜವಾನ್ ಸಂಸ್ಥಾ ಅಧ್ಯಕ್ಷ ದತ್ತಾಜಿ ನಲವಾಡೆ ಮರಾಠಿಯಲ್ಲಿ ಬರೆದಿರುವ ವಿಶ್ವದ ಮಹಾನಾಯಕ ಛತ್ರಪತಿ ಶಿವಾಜಿ ಮಹಾರಾಜ ಎಂಬ ಕೃತಿಯ ಕನ್ನಡ ಅನುವಾದಿತ ಪುಸ್ತಕ ಜೂ.6ರಂದು ಬೆಂಗಳೂರಿನ ಪ್ರೆಸ್ ಕ್ಲಬ್ ಹಾಲ್‌ನಲ್ಲಿ ಬಿಡುಗಡೆಯಾಗಲಿದೆ.

- ಬೆಂಗಳೂರಿನ ಪ್ರೆಸ್ ಕ್ಲಬ್ ಹಾಲ್‌ನಲ್ಲಿ ಕಾರ್ಯಕ್ರಮ: ದತ್ತಾಜಿ ನಲವಾಡೆ ಮಾಹಿತಿ

- - -

- ತಂಜಾವೂರು ಸಂಸ್ಥಾನದ ಯುವರಾಜ ಶಿವಾಜಿ ರಾಜೆ ಭೋಂಸ್ಲೆ ಅವರಿಂದ ಲೋಕಾರ್ಪಣೆ

- ಮಹಾರಾಷ್ಟ್ರದ ದತ್ತಾಜಿ ನಲವಾಡೆ ಅವರು ರಚಿಸಿರುವ ಮರಾಠಿ ಕೃತಿ

- ಕನ್ನಡಕ್ಕೆ ಅನುವಾದಿಸಿರುವ ಪ್ರೊ.ಶಿವಾಜಿ ರಾವ್‌ ಚವ್ಹಾಣ್: ದತ್ತಾಜಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಇತಿಹಾಸಕಾರ ಮಾಳ್ವ ಜವಾನ್ ಸಂಸ್ಥಾ ಅಧ್ಯಕ್ಷ ದತ್ತಾಜಿ ನಲವಾಡೆ ಮರಾಠಿಯಲ್ಲಿ ಬರೆದಿರುವ ವಿಶ್ವದ ಮಹಾನಾಯಕ ಛತ್ರಪತಿ ಶಿವಾಜಿ ಮಹಾರಾಜ ಎಂಬ ಕೃತಿಯ ಕನ್ನಡ ಅನುವಾದಿತ ಪುಸ್ತಕ ಜೂ.6ರಂದು ಬೆಂಗಳೂರಿನ ಪ್ರೆಸ್ ಕ್ಲಬ್ ಹಾಲ್‌ನಲ್ಲಿ ಬಿಡುಗಡೆಯಾಗಲಿದೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೇಖಕ ದತ್ತಾಜಿ ನಲವಾಡೆ, ಬೆಳಗ್ಗೆ 10.30 ಗಂಟೆಗೆ ಪ್ರೊ.ಶಿವಾಜಿ ರಾವ್ ಚವ್ಹಾಣ್‌ ಕನ್ನಡಕ್ಕೆ ಅನುವಾದಿಸಿರುವ ತಮ್ಮ ಕೃತಿಯನ್ನು ತಂಜಾವೂರು ಸಂಸ್ಥಾನದ ಯುವರಾಜ ಶಿವಾಜಿ ರಾಜೆ ಭೋಂಸ್ಲೆ ಲೋಕಾರ್ಪಣೆ ಮಾಡಲಿದ್ದಾರೆ ಎಂದರು.

ಸ್ಕೌಟ್ಸ್ ಮತ್ತು ಗೈಡ್ಸ್‌ನ ಕರ್ನಾಟಕ ಅಧ್ಯಕ್ಷ, ಮಾಜಿ ಸಚಿವ ಪಿ.ಜಿ.ಆರ್‌. ಸಿಂಧ್ಯಾ, ವಿಜಯ ನಗರ ಅರಸರ ವಂಶಸ್ಥ ರಾಜಾ ಕೃಷ್ಣದೇವರಾಯ, ಕರ್ನಾಟಕ ವೆಲ್‌ಫೇರ್‌ ಅಸೋಸಿಯೇಷನ್ ಅಧ್ಯಕ್ಷ ಎಸ್.ಮನೋಜಕುಮಾರ ರಾಣೋರೆ, ಶಹಜಿ ರಾಜೇ ಭೋಂಸ್ಲೆ ಸ್ಮಾರಕ ಸಮಿತಿಯ ಅಣ್ಣಾಜಿರಾವ್ ನಲವಾಡೆ, ತಾನಾಜಿ ರಾವ್ ನಲವಾಡೆ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಛತ್ರಪತಿ ಶಿವಾಜಿ ಮಹಾರಾಜರ ಜಗತ್ಪ್ರಸಿದ್ಧ ಆಡಳಿತ, ಶೌರ್ಯ ಮತ್ತು ಮಾನವ ಕಲ್ಯಾಣ ಕಾರ್ಯಗಳ ಬಗ್ಗೆ ನಿಜವಾದ ಇತಿಹಾಸವನ್ನು ಕನ್ನಡಗರಿಗೆ ತಲುಪಿಸುವ ಸಲುವಾಗಿ ಶಿವಾಜಿ ಮಹಾರಾಜರ 352ನೇ ಪಟ್ಟಾಭಿಷೇಕದ ದಿನವಾದ ಜೂ.6ರಂದೇ ಪುಸ್ತಕ ಬಿಡುಗಡೆ ಮಾಡುತ್ತಿದ್ದೇವೆ. ಶಿವಾಜಿ ಮಹಾರಾಜರ ಕುರಿತಂತೆ ಕನ್ನಡದಲ್ಲಿ ಇದು ಮೊದಲ ಸಮಗ್ರ ಇತಿಹಾಸ ಕೃತಿಯಾಗಿದೆ ಎಂದರು.

ಶಿವಾಜಿ ಮಹಾರಾಜರ ಬಾಲ್ಯ, ಆಡಳಿತ, ಶೌರ್ಯ, ಸಾಹಸ, ದೂರದೃಷ್ಟಿ, ಅಪರೂಪದ ವಾಸ್ತು ಶಿಲ್ಪ, ಸಾಹಿತ್ಯ, ಐತಿಹಾಸಿಕ ಸ್ಥಳಗಳು, ಛತ್ರಪತಿ ಶಿವಾಜಿ ಮಹಾರಾಜರ ವೀರ ಸಹಚರರ ಬಗ್ಗೆ ಸೇರಿದಂತೆ ಸಮಗ್ರ ಕೃತಿಯನ್ನು 250 ಪುಟಗಳ ಈ ಶಿವಚರಿತ್ರೆ ಕೃತಿಯಲ್ಲಿ ಕಟ್ಟಿಕೊಡಲಾಗಿದೆ. ಶಿವಾಜಿ ಮಹಾರಾಜರ ಬಾಲ್ಯ, ಬೆಂಗಳೂರಿನಲ್ಲಿ ಕಳೆದ ದಿನಗಳು, ಮರಾಠಿ, ಕನ್ನಡ ಸೇರಿದಂತೆ 8 ಭಾಷೆಗಳನ್ನು ಬಲ್ಲ ಬಹುಭಾಷಾ ಜ್ಞಾನ ಹೊಂದಿದ್ದ ಶಿವಾಜಿ ಮಹಾರಾಜರ ಕುರಿತ ಕೃತಿ ಇದಾಗಿದೆ ಎಂದು ದತ್ತಾಜಿ ನಲವಾಡೆ ತಿಳಿಸಿದರು.

ಕೃತಿಯ ಅನುವಾದಕ, ಹಿರಿಯ ಲೇಖಕ ಪ್ರೊ.ಶಿವಾಜಿ ರಾವ್ ಚವ್ಹಾಣ್‌, ದತ್ತಾಜಿ ಲಕ್ಷ್ಮಣ್, ಅಣ್ಣೋಜಿರಾವ್‌ ನಲವಾಡೆ, ಪ್ರಕಾಶ, ವಿಜಯ ಜಾಧವ್ ಇತರರು ಇದ್ದರು.

- - -

-20ಕೆಡಿವಿಜಿ6.ಜೆಪಿಜಿ:

ದಾವಣಗೆರೆಯಲ್ಲಿ ಮಂಗಳವಾರ ಮರಾಠಿ ಇತಿಹಾಸಕಾರ, ಲೇಖಕ ದತ್ತಾಜಿ ನಲವಾಡೆ, ಕನ್ನಡ ಅನುವಾದಕ ಪ್ರೊ.ಶಿವಾಜಿ ರಾವ್ ಚವ್ಹಾಣ್‌ ವಿಶ್ವದ ಮಹಾನಾಯಕ ಛತ್ರಪತಿ ಶಿವಾಜಿ ಮಹಾರಾಜ ಎಂಬ ಕೃತಿಯ ಕನ್ನಡ ಅನುವಾದಿತ ಪುಸ್ತಕದ ಪೋಸ್ಟರ್ ಬಿಡುಗಡೆ ಮಾಡಿದರು.

PREV

Latest Stories

ಅಂಗನವಾಡಿ ಮಕ್ಕಳ ಅನುಕೂಲಕ್ಕಾಗಿ 'ಅಪಾರ್‌ ಐಡಿ': ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿ
ರಾಜ್ಯದ 14 ಜಿಲ್ಲೆಗಳಲ್ಲಿ 2 ದಿನ ಭಾರೀ ಮಳೆ
ಲಾಕ್ಡೌನ್ನಿಂದ ಹುಟ್ಟಿ, ಕಪೆಕ್ನಿಂದ ಬೆಳೆದು ನಿಂತ ಉದ್ಯಮ