ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಕನ್ನಡ ಭವನದಲ್ಲಿ ಬಾನು ಮುಷ್ತಾಕ್ ಅವರಿಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ನಡೆದ ಸಂಭ್ರಮಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಮ್ಮ ನೇರ ನಡೆ, ನುಡಿಯೊಂದಿಗೆ ಸಾಹಿತ್ಯ ಚಳವಳಿಯಲ್ಲಿ ಬಂದಿರುವ ಬಾನು ಮುಷ್ತಾಕ್ ಅವರಿಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆಯ ಸಂಗತಿ. ಇಂತಹ ಪ್ರತಿಷ್ಠಿತ ಪ್ರಶಸ್ತಿಯು ಭಾರತೀಯರಿಗೆ ಲಭಿಸಿರುವುದು ದೊಡ್ಡ ಗೌರವ. ಇದರಿಂದ ರಾಜ್ಯಕ್ಕೆ ಹಾಗೂ ಕನ್ನಡ ಸಾಹಿತ್ಯಕ್ಕೆ ಹೊಸ ಚೈತನ್ಯ ನೀಡಿದೆ ಎಂದರು.ಮೊದಲ ಭಾರತೀಯ ಅನುವಾದಕಿ ಎಂಬ ಹಿರಿಮೆಗೆ ಕನ್ನಡದವರೇ ಆದ ದೀಪಾ ಭಾಸ್ತಿ ಒಳಗಾಗಿದ್ದಾರೆ. ಭೂಕರ್ ಪ್ರಶಸ್ತಿ ಪಡೆಯುವ ವೇಳೆ ವರನಟ ಡಾ.ರಾಜ್ ಕುಮಾರ್ ಅವರ ಚಲಿಸುವ ಮೋಡಗಳು ಸಿನಿಮಾದ ಜೇನಿನ ಹೊಳೆಯೊ ಹಾಲಿನ ಮಳೆಯೊ ಹಾಡಿನ ಸಾಲುಗಳನ್ನು ಹಾಡಿರುವುದನ್ನು ಕನ್ನಡಿಗರಿಗೆ ಸಂತಸ ತಂದಿದೆ ಎಂದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಲ್.ಚೇತನ್ ಕುಮಾರ್ ಮಾತನಾಡಿ, ಬಾನು ಮುಷ್ತಾಕ್ ಅವರು ಬದ್ಧತೆಯಿಂದ ರಚಿಸಿರುವ ಕಥಾ ಸಂಕಲನವು ಹೊಸ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿನ್ಯಾಸಗಳನ್ನು ಪರಿಚಯಿಸಿದೆ. ಒಬ್ಬ ಮುಸ್ಲಿಂ ಮಹಿಳೆಯಾಗಿ ನಾಡಿನಲ್ಲಿ ಉನ್ನತ ಗೌರವ ಪಡೆದಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಮಾದೇಗೌಡ, ಸಿದ್ದರಾಜು, ಜಯರಾಜು, ಮಹಾಲಿಂಗು, ಶಿವಕುಮಾರ್, ಸೋಮಶೇಖರ್, ಮಹದೇವಸ್ವಾಮಿ, ಬಸವರಾಜು, ರಾಮಚಂದ್ರ, ಶಂಕರ್ ಪಾಲ್ಗೋಂಡಿದ್ದರು.