ಕನ್ನಡಪ್ರಭ ವಾರ್ತೆ ಮೈಸೂರು
ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಅವರ ನೇತೃತ್ವದಲ್ಲಿ ಭಾನುವಾರ ಹುಣಸೂರು ಟೌನ್ ನಲ್ಲಿ ಬೂತ್ ನಂ. 125 ರ ಅಧ್ಯಕ್ಷರಾಗಿ ಮಹದೇವ್ ರಾವ್, ಕಾರ್ಯದರ್ಶಿಯಾಗಿ ರಾಘು ಅವರನ್ನು ಮತ್ತು 13 ಜನ ಸದಸ್ಯರನ್ನು ಆಯ್ಕೆ ಮಾಡಲಾಯಿತು.ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಮಾತನಾಡಿ, ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದ ಬಿಜೆಪಿಗೆ ಅತೀ ಹೆಚ್ಚು ಮತ ನೀಡುವುದರ ಮೂಲಕ ಲೋಕಸಭಾ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಒಡೆಯರ್ ಅವರನ್ನು ಗೆಲ್ಲಿಸಿದ್ದಾರೆ, ಈ ಮೂಲಕ ಕ್ಷೇತ್ರದ ಜನ ಬಿಜೆಪಿ ಬೆಂಬಲಿಸಿದ್ದಾರೆ, ಜೊತೆಗೆ ನಮ್ಮ ಪಕ್ಷದ ಪದಾಧಿಕಾರಿಗಳು ಕೂಡ ನಿರೀಕ್ಷೆಗೂ ಮೀರಿ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ ಎಂದರು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿಯೂ ಸಹ ಈ 125ನೇ ವಾರ್ಡ್ ಬಿಜೆಪಿ ತೆಕ್ಕೆಗೆ ಆಯ್ಕೆಯಾಗಬೇಕು ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೊಟ್ಟಂತಹ ಕೊಡುಗೆಗಳು ರಾಜ್ಯದ ಮೂಲೆಮೂಲೆ ತಲುಪಿದೆ, ಹುಣಸೂರು ಕ್ಷೇತ್ರಕ್ಕೂ ಸಹ ಅವರ ಕೊಡುಗೆ ತಲುಪಿದೆ, ಈ ಕ್ಷೇತ್ರದ ಹೆಣ್ಣು ಮಕ್ಕಳು ಭಾಗ್ಯಲಕ್ಷ್ಮಿ ಬಾಂಡ್ ನ ಸದುಪಯೋಗ ಪಡೆದಿದ್ದಾರೆ, ಅಂದು ನೀಡಿದ್ದ ಈ ಯೋಜನೆ ಹೆಣ್ಣು ಮಕ್ಕಳಿಗೆ 18 ವರ್ಷ ತುಂಬಿದ ಬಳಿಕ ಅಸ್ತಿತ್ವಕ್ಕೆ ಬಂದಿದ್ದು, ಸ್ಥಳೀಯ ಬೂತ್ ಗಳಲ್ಲಿ ಫಲಾನುಭವಿ ಗಳಿದ್ದರೆ ಆಯಾ ಬೂತ್ ನ ಅಧ್ಯಕ್ಷರು ಹಾಗೂ ಸದಸ್ಯರುಅದನ್ನು ಗುರುತಿಸಿ ಸರ್ಕಾರದ ವತಿಯಿಂದ ಯೋಜನೆ ಕೊಡಿಸಲು ಸಹಕಾರ ಮಾಡಬೇಕೆಂದು ಅವರು ತಿಳಿಸಿದರು.ಕೃಷಿ ಮಾಡುವ ರೈತರಿಗೆ ವಿವಿಧ ರೀತಿಯ ದವಸಧಾನ್ಯಗಳಿಗೆ ಬೆಂಬಲ ಬೆಲೆ ಘೋಷಿಸಿ ರೈತರ ಕೈ ಹಿಡಿಯುವ ಕೆಲಸ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಿಂದ ಕಿಸಾನ್ ಸಮ್ಮಾನ್ ಯೋಜನೆಯಡಿ ನೇರ ರೈತರ ಖಾತೆಗೆ ವಾರ್ಷಿಕ ರು. 6 ಸಾವಿರ ರು. ಗಳನ್ನು ಅರ್ಹ ರೈತ ಫಲಾನುಭವಿಗಳಿಗೆ ಮೂರು ಕಂತುಗಳಲ್ಲಿ ನೀಡಲಾಗುತ್ತಿದೆ, ಇದರಿಂದ ರೈತರಿಗೆ ಕೆಲವೊಂದು ಸಂದರ್ಭದಲ್ಲಿ ಬೆಳೆಗಳು, ಫಸಲುಗಳುಕೈಗೆಟಕದಿದ್ದಲ್ಲಿ ಈಒಂದು ಯೋಜನೆಯಿಂದ ಅನುಕೂಲವಾಗಲಿದೆ ಹಾಗೂ ಗ್ರಾಮೀಣ ಭಾಗಕ್ಕೆ ಬೇಕಿರುವ ನೀರಿನ ಸೌಲಭ್ಯವನ್ನು ಮನಗಂಡ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದ ಅನುದಾನದಿಂದ ಜಲಜೀವನ್ ಮಿಷನ್ ವಿಶೇಷ ಯೋಜನೆಯಡಿ ಮನೆಮನೆಗೆ ನೀರಿನ ಸೌಲಭ್ಯ ದೊರೆಯಬೇಕು, ಗ್ರಾಮೀಣ ಭಾಗದ ಜನತೆ ಕುಡಿಯಲು ನೀರಿಲ್ಲದೆ ಪರದಾಡಬಾರದೆಂದುನಿಶ್ಚಯಿಸಿ ಉತ್ತಮಯೋಜನೆಯನ್ನು ಜಾರಿಗೆ ತಂದರು,ಈರೀತಿ ಇನ್ನೂ ಹತ್ತು ಹಲವಾರುಯೋಜನೆಗಳನ್ನು ನಮ್ಮ ಪ್ರಧಾನಮಂತ್ರಿಗಳು ರಾಷ್ಟ್ರವ್ಯಾಪ್ತಿ ನೀಡಿದ್ದಾರೆ ಎಂದರು.
ಹುಣಸೂರು ನಗರ ಮಂಡಲ ಅಧ್ಯಕ್ಷ ನಾರಾಯಣ್, ಗ್ರಾಮಾಂತರ ಅಧ್ಯಕ್ಷ ಕಾಂತರಾಜ್ ಬಾಯ್, ಜಿಲ್ಲಾಪ್ರಧಾನ ಕಾರ್ಯದರ್ಶಿ ಕಿರಣ್ ಜಯರಾಮೇಗೌಡ, ಕಾರ್ಯಾಲಯ ಕಾರ್ಯದರ್ಶಿ ಪಾಪಣ್ಣ,ಸುರೇಶ್, ವೆಂಕಟೇಶ್, ದಿವಾಕರ್, ಗಜೇಂದ್ರ, ಕಿರಣ್, ಮುತ್ತುರಾಜ್, ಅನಿಲ್, ದೀಕ್ಷಿತ, ಹೇಮಾಬಾಯಿ, ಲೋಕೇಶ್, ಬಿಜೆಪಿ ಮುಖಂಡರು ಇದ್ದರು.