- ಜಿಲ್ಲಾ ಬೋರ್ ವೆಲ್ ಲಾರಿ ಮಾಲೀಕರು, ಏಜೆಂಟರ ಸಭೆ
ಕನ್ನಡಪ್ರಭ ವಾರ್ತೆ, ಕಡೂರು.ಡಿಸೇಲ್ ಹಾಗೂ ಸಾಮಗ್ರಿಗಳ ಬೆಲೆ ಹೆಚ್ಚಳ ಕಾರ್ಮಿಕರ ಕೊರತೆ ಯಾಗಿರುವುದರಿಂದ ಬೋರ್ ವೆಲ್ ಡ್ರಿಲ್ಲಿಂಗ್ ದರವನ್ನು ಹೆಚ್ಚಿಸಲಾಗಿದೆ ಎಂದು ಬೋರ್ ವೆಲ್ ಏಜೆಂಟರ ಸಂಘದ ಸದಸ್ಯ ವಡೇರಹಳ್ಳಿ ಆಶೋಕ್ ತಿಳಿಸಿದರು.
ಅವರು ಪಟ್ಟಣದ ಸುರಚಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಚಿಕ್ಕಮಗಳೂರು ಜಿಲ್ಲಾ ಬೋರ್ ವೆಲ್ ಲಾರಿ ಮಾಲೀಕರು ಹಾಗೂ ಏಜೆಂಟರುಗಳ ಸಭೆಯ ನಂತರ ಪತ್ರಕರ್ತರಿಗೆ ಈ ಕುರಿತು ಮಾಹಿತಿ ನೀಡಿದರು.ಜಿಲ್ಲೆಯಲ್ಲಿರುವ ಎಲ್ಲಾ ಬೋರ್ ವೆಲ್ ಮಾಲೀಕರು ಹಾಗೂ ಏಜೆಂಟರುಗಳ ಸಭೆ ನಡೆಸಲಾಗಿದ್ದು. ಸಭೆಯಲ್ಲಿ ಭಾಗವಹಿಸಿದ್ದ ಅನೇಕ ರೈತರೊಂದಿಗೆ ಚರ್ಚೆ ನಡೆಸಿ ಅವರ ಸಲಹೆ ಮತ್ತು ಅಭಿಪ್ರಾಯವನ್ನು ಪಡೆಯುವ ಮೂಲಕ ಈ ನಿರ್ಧಾರ ಮಾಡಲಾಗಿದೆ ಎಂದರು.
ಬಹುತೇಕ ಬೋರ್ ವೆಲ್ ಕೊರೆವ ಬಳಕೆಯ ಸಾಮಗ್ರಿಗಳ ದರ ಈಗಾಗಲೇ ಹೆಚ್ಚಳವಾಗಿದೆ. ಅಲ್ಲದೆ ಕಾರ್ಮಿಕರ ಕೊರತೆ ಯಿಂದ ಲಾರಿ ಮಾಲೀಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇದರ ಪರಿಣಾಮ ಕೊಳವೆ ಬಾವಿ ಕೊರೆವ ದರವನ್ನು ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ. ಹಾಗಾಗಿ ರೈತಾಪಿ ವರ್ಗದವರ ಸಹಕಾರವನ್ನು ಸಂಘ ಕೋರುತ್ತದೆ ಎಂದರು. ಹೊರ ರಾಜ್ಯಗಳ ಲಾರಿಗಳು ಜಿಲ್ಲೆಗೆ ಬಂದಿದ್ದು ಡ್ರಿಲ್ಲಿಂಗ್ ದರ ಹೆಚ್ಚಿಸದಿದ್ದರೆ ವಾಪಾಸ್ ಹೋಗುವುದಾಗಿ ಹೇಳುತ್ತಿದ್ದು ನಾವುಗಳು ಸಭೆ ಕರೆದು ದರ ಹೆಚ್ಚಳದ ತೀರ್ಮಾನ ಕೈಗೊಂಡಿದ್ದೇವೆ.ಮುಂಬರುವ ಬೇಸಿಗೆಯಲ್ಲಿ ನೂರಾರು ಜನರು ಬೋರ್ ವೆಲ್ ಕೊರೆಸಲು ಸಿದ್ಧತೆ ನಡೆಸಿದ್ದು ಬೇಸಿಗೆ ಬೆಳೆಯನ್ನು ಉಳಿಸಿ ಕೊಳ್ಳಲು ರೈತರು ಪರಿತಪಿಸುತ್ತಿರುವ ಹಿನ್ನೆಲೆಯಲ್ಲಿ ದರ ಹೆಚ್ಚಿಸುವುದೇ ಸೂಕ್ತವಾಗಿದೆ. ಇದಕ್ಕೆ ಬೋರ್ ವೆಲ್ ಕೊರೆಸುವವರ ಸಹಕಾರ ಬಹು ಮುಖ್ಯವಾಗಿದೆ ಎಂದರು. ಸಭೆಯಲ್ಲಿ ಸಂಘದ ಮುಖಂಡರಾದ 9ನೇ ಮೈಲಿಕಲ್ಲಿನ ರಾಜಣ್ಣ, ಪಾರ್ವತಿ ಬೋರ್‍ವೆಲ್‍ನ ನವೀನ್, ಬೀರೂರು ನವೀನ್,ಮಧು, ರಂಗೇನಹಳ್ಳಿಯ ದೇವರಾಜ್,ಹರೀಶ್, ಅಜ್ಜಂಪುರದ ಮಲ್ಲಿಕಾರ್ಜುನ್, ಚಿಕ್ಕಮಗಳೂರಿನ ಉಮೇಶ್, ಶಶಿ, ತರೀಕೆರೆಯ ಪ್ರಭಣ್ಣ, ಮಲ್ಲೇಶಪ್ಪ, ಉಪೇಂದ್ರ, ಕಿರಣ್ ಸೇರಿದಂತೆ ಮತ್ತಿತರರು ಇದ್ದರು.
12ಕೆಕೆಡಿಯು1.ಚಿಕ್ಕಮಗಳೂರು ಜಿಲ್ಲಾ ಬೋರ್ ವೆಲ್ ಏಜೆಂಟರು ಮತ್ತು ಮಾಲೀಕರ ಸಭೆ ಪಟ್ಟಣದ ಸುರಚಿ ಸಭಾಂಗಣದಲ್ಲಿ ನಡೆಯಿತು. ಆಶೋಕ್,ರಾಜಣ್ಣ,ದೇವರಾಜ್, ಮಲ್ಲಿಕಾರ್ಜುನ್ ಮತ್ತಿತರರು ಇದ್ದರು.