ಜೀವನದಲ್ಲಿ ಜಿಗುಪ್ಸೆ: ಕೃಷಿಕ ಆತ್ಮಹತ್ಯೆಗೆ ಶರಣು

KannadaprabhaNewsNetwork |  
Published : Jan 21, 2026, 03:15 AM IST
ಜೀವನದಲ್ಲಿ ಜಿಗುಪ್ಸೆ ಕೃಷಿಕ ಆತ್ಮಹತ್ಯೆಗೆ ಶರಣು | Kannada Prabha

ಸಾರಾಂಶ

ವೃದ್ದರೊಬ್ಬರು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ನಡ್ಲುಕೊಪ್ಪ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ವೃದ್ದರೊಬ್ಬರು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ನಡ್ಲುಕೊಪ್ಪ ಗ್ರಾಮದಲ್ಲಿ ಸೋಮವಾರ ನಡೆದಿದೆ.ಕೃಷಿಕ ಟಿ.ಕೆ.ಸುಬ್ಬಯ್ಯ(78) ಮೃತ. ಕೆಲವು ತಿಂಗಳಿಂದ ಕಾಲು ನೋವು ಸೇರಿದಂತೆ ಅನಾರೋಗ್ಯದಿಂದ ಬಳಲುತ್ತಿದ್ದ ಸುಬ್ಬಯ್ಯ ಅವರು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದು ಬಂದಿದೆ. ಬೆಳಿಗ್ಗೆ ಸುಮಾರು ಆರು ಗಂಟೆಯ ವೇಳೆಗೆ ತಮ್ಮ ಮನೆಯ ಸಮೀಪವೇ ಈ ಘಟನೆ ನಡೆದಿದೆ ಎನ್ನಲಾಗಿದೆ.ಘಟನೆಯ ಮಾಹಿತಿ ಪಡೆದ ಸೋಮವಾರಪೇಟೆ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

-----------------------------------------

ಯರವ ಜನಾಂಗದವರಿಗೆ ಆಧಾರ್ ಕಾರ್ಡ್ ವಿತರಣೆಕನ್ನಡಪ್ರಭ ವಾರ್ತೆ ಮಡಿಕೇರಿಕೊಡಗಿನ ಗಡಿಭಾಗ ಸಂರಕ್ಷಿತ ಅರಣ್ಯ ಮಾಕುಟ್ಟ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಯರವ ಜನಾಂಗಕ್ಕೆ ಸೇರಿದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನರಿಗೆ ಆಧಾರ್ ಕಾರ್ಡನ್ನು ಪೊನ್ನಣ್ಣ ನವರು ವಿತರಿಸಿದರು.ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಯಾವುದೂ ಇವರಿಗೆ ಇರದ ಪರಿಣಾಮ ಸರ್ಕಾರ ನೀಡುವ ಯಾವುದೇ ಸೌಲಭ್ಯ ಇವರಿಗೆ ಲಭಿಸುತ್ತಿರಲಿಲ್ಲ.ಈ ವಿಚಾರ ಶಾಸಕ ಪೊನ್ನಣ್ಣ ನವರ ಗಮನಕ್ಕೆ ಬಂದಾಗ ಗಂಭೀರವಾಗಿ ಪರಿಗಣಿಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಲಹೆ ಮತ್ತು ಸೂಚನೆ ನೀಡಿ ಮೊದಲ ಹಂತದಲ್ಲಿ ಆಧಾರ್ ಕಾರ್ಡ್ ಮಾಡಿಸುವಲ್ಲಿ ಸಫಲರಾಗಿದ್ದು ಮುಂದಿನ ತಿಂಗಳ ಒಳಗಾಗಿ ಪಡಿತರ ಚೀಟಿ ವಿತರಿಸಿ ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳನ್ನಾಗಿ ಅವರನ್ನು ನೋಂದಾಯಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.ಇದೇ ಸಂದರ್ಭದಲ್ಲಿ ಇಲ್ಲಿ ಹದಿನೇಳು ಕುಟುಂಬಗಳು ವಾಸವಾಗಿದ್ದು, ಕೂಡಲೇ ಪ್ರತಿ ಮನೆಗೆ ಶೌಚಾಲಯ ನಿರ್ಮಿಸಿ ಅನುಪಾಲನಾ ವರದಿ ಒಪ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ಕಾಲೋನಿ ನಿವಾಸಿಗಳಿಗೆ ಯಾವುದೇ ಸಮಸ್ಯೆ ಬರದ ಹಾಗೆ ವಿಶೇಷ ಜಾಗೃತಿ ವಹಿಸುವಂತೆ ಕಂದಾಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಶಾಸಕರು ಕಾಲೋನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಮುಖರಾದ ಪಟ್ಟಡ ರಂಜಿ ಪೂಣಚ್ಚ, ಪಂಚಾಯತ್ ಸಂಘಟನೆಯ ತೆನ್ನಿರ ಮೈನಾ, ಹನೀಫ್ ಚೋಕಂಡ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾದ ಆರ್.ಕೆ.ಸಲಾಂ. ವರ್ಗೀಸ್, ಪಟ್ಟಡ ರಕ್ಷಿತ್, ಗ್ರಾಮ ಪಂಚಾಯತ್ ಸದಸ್ಯ ಅಮ್ಮಣ ಕುಟ್ಟಂಡ ಕಟ್ಟಿ, ಕೋಳುಮಂಡ ರಫೀಕ್, ಶಬೀರ್, ಜೋಕಿಮ್, ಬೋಪಣ್ಣ, ಮಂಜುನಾಥ್ , ಚುಬ್ಬಾ, ಸಫ್ವಾನ್, ಫಕ್ರು, ಕಂದಾಯ ಅಧಿಕಾರಿಗಳು, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೋಲ್ಡನ್‌ ಅವರ್‌ನಲ್ಲಿ ವಂಚಕರ ಪಾಲಾಗುತ್ತಿದ್ದ 2.16 ಕೋಟಿ ರು ವಾಪಸ್
ಇಂದಿನಿಂದ ಲಂಡನ್‌ ಮಾದರಿ ಡಬಲ್‌ ಡೆಕ್ಕರ್‌ ಬಸ್‌ ಸಂಚಾರ