ಅಧ್ಯಾತ್ಮ ಬಲದಿಂದ ಜನ್ಮ ಸಾರ್ಥಕ

KannadaprabhaNewsNetwork |  
Published : Dec 30, 2024, 01:00 AM IST
ಫೋಟೋ : 28 ಜಿಎಲ್ಡಿ2- ತಾಲೂಕಿನ ಕೋಟೆಕಲ್ ಗ್ರಾಮದಲ್ಲಿ ಈಶ್ವರಿ ವಿಶ್ವವಿದ್ಯಾಲಯದ ಪ್ರಭು ಪಸಂದ ಭವನದ ಉದ್ಘಾಟನೆ ಜರುಗಿತು. | Kannada Prabha

ಸಾರಾಂಶ

ಮಾನವನ ಬದುಕಿನಲ್ಲಿ ಶಾಂತಿ, ನೆಮ್ಮದಿ ಲಭಿಸಬೇಕಾದರೇ ನಿರಂತರ ಧ್ಯಾನ, ಆತ್ಮ, ಪರಮಾತ್ಮನ ಕುರಿತಾದ ಚಿಂತನೆಗಳು ಬೇಕು. ಅಂತಹ ಚಿಂತನೆಗಳಿಗೆ ಆಧ್ಯಾತ್ಮ ಸಹಕಾರಿಯಾಗಿದೆ. ಅಧ್ಯಾತ್ಮ ಬಲದಿಂದ ಮಾತ್ರ ಜನ್ಮ ಸಾರ್ಥಕವಾಗಬಲ್ಲದು ಎಂದು ಡಯಟ್‌ ಜಿಲ್ಲಾ ಉಪನಿರ್ದೇಶಕ ( ಅಭಿವೃದ್ಧಿ) ಬಿ.ಕೆ.ನಂದನೂರ ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಮಾನವನ ಬದುಕಿನಲ್ಲಿ ಶಾಂತಿ, ನೆಮ್ಮದಿ ಲಭಿಸಬೇಕಾದರೇ ನಿರಂತರ ಧ್ಯಾನ, ಆತ್ಮ, ಪರಮಾತ್ಮನ ಕುರಿತಾದ ಚಿಂತನೆಗಳು ಬೇಕು. ಅಂತಹ ಚಿಂತನೆಗಳಿಗೆ ಆಧ್ಯಾತ್ಮ ಸಹಕಾರಿಯಾಗಿದೆ. ಅಧ್ಯಾತ್ಮ ಬಲದಿಂದ ಮಾತ್ರ ಜನ್ಮ ಸಾರ್ಥಕವಾಗಬಲ್ಲದು ಎಂದು ಡಯಟ್‌ ಜಿಲ್ಲಾ ಉಪನಿರ್ದೇಶಕ ( ಅಭಿವೃದ್ಧಿ) ಬಿ.ಕೆ.ನಂದನೂರ ಹೇಳಿದರು.

ತಾಲೂಕಿನ ಕೋಟೆಕಲ್ ಗ್ರಾಮದಲ್ಲಿ ಈಶ್ವರಿ ವಿಶ್ವ ವಿದ್ಯಾಲಯದ ಪ್ರಭು ಪಸಂದ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ತಂತ್ರಜ್ಞಾನ ಯುಗದಲ್ಲಿ ಮಾನವನ ಆಲೋಚನೆಗಳು, ಚಿಂತನೆಗಳು ಭೌತಿಕ ವಸ್ತು ಮತ್ತು ವಿಷಯದ ಕಡೆಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಇದರಿಂದ ಮಾನವ ಅಶಾಂತಿ, ನೋವು, ಕಷ್ಟ, ನಷ್ಟ, ನೆಮ್ಮದಿರಹಿತ ಬದುಕಿನತ್ತ ಸಾಗುತ್ತಿದ್ದಾನೆ. ಅವನಲ್ಲಿ ಮನಸ್ಸಿಗೆ ನೆಮ್ಮದಿ ಇಲ್ಲದಂತಾಗಿದೆ. ಇಂತಹ ಈಶ್ವರಿ ವಿಶ್ವ ವಿದ್ಯಾಲಯದ ಕೇಂದ್ರಗಳು ಮನುಷ್ಯನಿಗೆ ಏಕಗ್ರತೆ ನೀಡಿ, ಬದುಕಿನ ಸುಗಮ ಮಾರ್ಗದ ಕಡೆಗೆ ಒಯ್ಯಲು ಸಹಕರಿಸುತ್ತವೆ ಎಂದರು. ಮುರಘಾಮಠದ ಕಾಶೀನಾಥ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಜಮಖಂಡಿ ಹಾಗೂ ಗೋಕಾಕ ಸೇವಾ ಕೇಂದ್ರದ ರಾಜಯೋಗಿನಿ ಬ್ರಹ್ಮಕುಮಾರಿ ಮೀರಾ ಅಕ್ಕನವರು ಅಧ್ಯಕ್ಷತೆ ವಹಿಸಿದ್ದರು. ಬೈಲಹೊಂಗಲ ಸೇವಾಕೇಂದ್ರದ ರಾಜಯೋಗಿನಿ ಬ್ರಹ್ಮಕುಮಾರಿ ಪ್ರಭಾ ಅಕ್ಕನವರು ಭವನ ಉದ್ಗಾಟಿಸಿದರು.ಬಾಗಲಕೋಟೆಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಡಿ.ವೈ.ಬಸಾಪೂರ ಮಾತನಾಡಿದರು. ಕೋಟೆಕಲ್ ಗ್ರಾಪಂ ಅಧ್ಯಕ್ಷೆ ಪಾರ್ವತಿ ಮೇಟಿ, ರಾಜಸ್ಥಾನ ಅಬು ಪರ್ವತದ ರಾಜಯೋಗಿ ಬಿ.ಕೆ.ನಾಗೇಶ, ರಾಜಯೋಗಿ ಬಿ.ಕೆ.ಅಚ್ಚುತ, ರಾಜಯೋಗಿ ಭಗವಾನ್ ಭಾಯೀಜಿ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಶ್ರೀಮಂತ ಜಿ.ಎಸ್.ದೇಸಾಯಿ, ಕೋಟೆಕಲ್ ಗ್ರಾಪಂ ಪಿಡಿಒ ಆರತಿ ಕ್ಷತ್ರಿ, ಹೃದಯರೋಗ ತಜ್ಞ ಡಾ.ಚಂದ್ರಕಾಂತ ಜವಳಿ, ಶ್ರೀನಿವಾಸ ಇನಾನಿ, ಡಾ.ಬಸವರಾಜ ಬಂಟನೂರ, ಪಿ.ಎನ್.ಪವಾರ, ಡಾ.ಕೃಷ್ಣವರ್ಧನ, ಪಿ.ಎನ್.ಬಡಿಗೇರ, ಮನೋಹರ ಪತ್ತಾರ, ಶ್ರೀಕಾಂತ ಧಾರವಾಡ, ಮಹೇಶ ಬಿಜಾಪೂರ ರವೀಂದ್ರ ಅಂಗಡಿ, ಪಿ.ಸಿ.ಬೆಟಗೇರಿ ಪ್ರಗತಿಪರ ರೈತರಾದ ಕಲ್ಲಪ್ಪ ಕೆಲೂರ, ರಂಗಪ್ಪ ಸೀತಿಮನಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

PREV

Recommended Stories

ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಬ್ಯಾಲೆಟ್‌ ಬಳಕೆಗೆ ಸುಗ್ರೀವಾಜ್ಞೆ ಅಗತ್ಯವಿಲ್ಲ : ಸಂಪುಟದಲ್ಲಿ ಚರ್ಚೆ