ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಸಮಾರಂಭಕ್ಕೆ ರಾಜ್ಯದ ಎಸ್ಸಿ ಎಸ್ಟಿಗಳ ಅಭಿವೃದ್ಧಿಗೆ ಬಳಸಬೇಕಾಗಿದ್ದ, ಎಸ್ಸಿಎಸ್ಪಿ ಮತ್ತು ಟಿಎಸ್ಪಿಯ ಸುಮಾರು ೧೬ ಕೋಟಿ ರುಪಾಯಿ ಬಳಸುತ್ತಿದ್ದಾರೆ. ಸಂವಿಧಾನ ದಿನಾಚರಣೆ ಕೇವಲ ಎಸ್ಸಿ ಎಸ್ಟಿ ಗಳಿಗೆ ಸಂಬಂಧಪಟ್ಟ ಕಾರ್ಯಕ್ರಮವೇ? ಇದಕ್ಕಾಗಿ ದಲಿತ ಕಾಲೋನಿಗಳಿಗೆ ಮಾತ್ರ ಬಸ್ಸುಗಳನ್ನು ಕಳುಹಿಸಲಾಗುತ್ತಿದೆ ಎಂದರು.
ಇಬ್ಬರು ಮಂತ್ರಿಗಳು ತಮ್ಮ ಸ್ವಪ್ರತಿಷ್ಠೆ ಹಾಗೂ ಸ್ವಾರ್ಥ ಮತ್ತು ಒಬ್ಬ ವ್ಯಕ್ತಿಗೊಸ್ಕರ, ಸಂವಿಧಾನದ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಮೇಲಿರುವ ಗೌರವವಲ್ಲ, ಬದಲಿಗೆ ದಲಿತ ಸಂಘಟನೆಗಳು ಹಮ್ಮಿಕೊಂಡಿದ್ದ ಬೃಹತ್ ಸಮಾವೇಶವನ್ನು ವಿಫಲಗೊಳಿಸಲು ನಡೆಸಿರುವ ಸಂಚು ಎಂದರು.ಒಂದು ವೇಳೆ ಕಾಂಗ್ರೆಸ್ ಸರ್ಕಾರಕ್ಕೆ ನಿಜವಾಗಿಯೂ ಸಂವಿಧಾನದ ಬಗ್ಗೆ ಗೌರವ ಇದ್ದರೆ ರಾಜ್ಯದ ೩೧ ಜಿಲ್ಲೆಗಳಲ್ಲೂ ಸಂವಿಧಾನ ದಿನಾಚರಣೆ ಆಚರಿಸಬೇಕಿತ್ತು. ರಾಜ್ಯ ಕಾಂಗ್ರೆಸ್ ಮತ್ತು ಕೇಂದ್ರ ಬಿಜೆಪಿ ಸರ್ಕಾರಗಳಿಗೆ ನೈತಿಕತೆ ಇದ್ದರೆ ರಾಜ್ಯ ಮತ್ತು ಕೇಂದ್ರಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಲಿ ಎಂದು ಆಗ್ರಹಿಸಿದರು.
ಬಹುಜನ ಸಮಾಜ ಪಾರ್ಟಿಯನ್ನು ದಾದಾಸಾಹೇಬ್ ಕಾನ್ಷಿರಾಮ್ ಸ್ಥಾಪಿಸುವವರೆಗೆ ಕಾಂಗ್ರೆಸ್ ಬಿಜೆಪಿ ಹಾಗೂ ದೇಶದಲ್ಲಿರುವ ಯಾವುದೇ ಪಕ್ಷಗಳ ಕಚೇರಿಯಲ್ಲಿ ಅಂಬೇಡ್ಕರ್ ಫೋಟೋ ಹಾಗೂ ಅಂಬೇಡ್ಕರ್ ಜಯಂತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ಉದಾಹರಣೆ ಇಲ್ಲ ಎಂದರು,
ಬಿಜೆಪಿಯ ಮಾತೃ ಸಂಸ್ಥೆಗಳಾದ ಆರ್‌ಎಸ್ಎಸ್, ಹಿಂದೂ ಮಹಾಸಭಾ ಬಾಬಾಸಾಹೇಬರ ಸಂವಿಧಾನವನ್ನು ವಿರೋಧಿಸುತ್ತಾ, ಇದರಲ್ಲಿ ಭಾರತೀಯತೆ ಇಲ್ಲ, ಹಾಗಾಗಿ ಈ ಸಂವಿಧಾನವನ್ನು ಒಪ್ಪುವುದಿಲ್ಲ ಎಂದಿದ್ದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ನಾಗಯ್ಯ, ರಾಜ್ಯ ಕಾರ್ಯದರ್ಶಿ ಕೊಳ್ಳೇಗಾಲ ಮಣಿ ಹಾಗೂ ಬ್ಯಾಡಮೂಡ್ಲು ಬಸವಣ್ಣ,ಲೋಕಸಭಾ ಉಸ್ತುವಾರಿ ವಕೀಲ ಪುಟ್ಟಸ್ವಾಮಿ, ಜಿಲ್ಲಾಧ್ಯಕ್ಷ ಬ.ಮ.ಕೃಷ್ಣಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಚವಾಡಿ ಪ್ರಕಾಶ್ ಇದ್ದರು.