ಜನರ ಭಾವನೆಗಳಿಗೆ ತಲೆಬಾಗುತ್ತೇನೆ: ಎನ್.ಶ್ರೀನಿವಾಸ್

KannadaprabhaNewsNetwork |  
Published : Jun 12, 2024, 12:34 AM IST
ಪೋಟೋ 1 : ದಾಬಸ್‌ಪೇಟೆ ಪಟ್ಟಣದ ಶಿವಗಂಗೆ ವೃತ್ತದಲ್ಲಿ ಕಾಂಗ್ರೇಸ್ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಶಾಸಕ ಎನ್.ಶ್ರೀನಿವಾಸ್ ಭಾಗವಹಿಸಿರುವುದು | Kannada Prabha

ಸಾರಾಂಶ

ಕ್ಷೇತ್ರದಲ್ಲಿ ಲೀಡ್ ಬರದಿದ್ದರೆ ರಾಜೀನಾಮೆ ಕೊಡುತ್ತೇನೆ ಎಂಬ ಹೇಳಿಕೆ ನೀಡಿ ಮತದಾರರಿಗೆ ಚಾಲೆಂಜ್ ಮಾಡುವಷ್ಟು ದೊಡ್ಡವನು ನಾನಲ್ಲ, ನನಗೆ ನನ್ನ ಕ್ಷೇತ್ರದ ಮತದಾರರ ಮೇಲೆ ಗೌರವವಿದೆ.

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಮತದಾರರಿಗೆ ರಾಜ್ಯ, ಕೇಂದ್ರ, ಸ್ಥಳೀಯ ಚುನಾವಣೆಗಳ ಮೇಲೆ ಪ್ರತ್ಯೇಕ ಭಾವನೆಗಳಿರುತ್ತವೆ, ವಿಧಾನಸಭೆಯಲ್ಲಿ ನನಗೆ ಆಶೀರ್ವಾದ ಮಾಡಿದ್ದಾರೆ, ಲೋಕಸಭೆಯಲ್ಲಿ ಡಾ.ಸುಧಾಕರ್‌ಗೆ ಆಶೀರ್ವಾದ ಮಾಡಿದ್ದಾರೆ. ಮತದಾರರ ಭಾವನೆಗಳಿಗೆ ಗೌರವ ನೀಡುತ್ತೇನೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ಶಿವಗಂಗೆ ವೃತ್ತದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಧಾನಸಭೆ, ಲೋಕಸಭೆ, ಸ್ಥಳೀಯ ಚುನಾವಣೆಗಳಲ್ಲಿ ಮತದಾರರ ದೃಷ್ಟಿಕೋನ ಬೇರೆ ಬೇರೆ ಇರುತ್ತದೆ, ಲೋಕಸಭಾ ಚುನಾವಣೆಯಲ್ಲಿನ ಜನರ ಭಾವನೆಗೆ ತಲೆಬಾಗುತ್ತೇನೆ, ಗೆಲುವು ಪಡೆದ ಡಾ.ಕೆ ಸುಧಾಕರ್‌ಗೆ ಶುಭಕೋರುತ್ತೇನೆ ಎಂದರು.

ಮುಂದಿನ ನಾಲ್ಕು ವರ್ಷಗಳು ಕ್ಷೇತ್ರದ ಜನರಿಗಾಗಿ ಪ್ರಾಮಾಣಿಕ ಸೇವೆ ಮಾಡುತ್ತೇನೆ. ಡಾ.ಕೆ ಸುಧಾಕರ್‌ರವರು ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಯೋಜನೆಗಳು, ಅನುದಾನ ತಂದರೆ ಜೊತೆಯಾಗಿ ಅಭಿವೃದ್ಧಿ ಮಾಡುತ್ತೇವೆ. ಚುನಾವಣೆಯಲ್ಲಿ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಬಹಳಷ್ಟು ಶ್ರಮಿಸಿದ್ದು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಶುಭಾಷಯ: ನೂತನ ಸಂಸದ ಡಾ.ಸುಧಾಕರ್, ನೂತನ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಿಂದ ಸಚಿವರಾದ ಎಚ್.ಡಿ ಕುಮಾರಸ್ವಾಮಿ ಸೇರಿ ೫ ಸಚಿವರಿಗೆ ಕಾಂಗ್ರೆಸ್ ಶಾಸಕನಾಗಿ ಶುಭಕೋರುತ್ತೇನೆ. ಅವರಿಂದ ನನ್ನ ಕ್ಷೇತ್ರಕ್ಕೆ ಬಹಳಷ್ಟು ಯೋಜನೆಗಳು ಬರಲಿ, ಜತೆಯಾಗಿ ಅಭಿವೃದ್ಧಿ ಮಾಡುತ್ತೇವೆ. ನಮ್ಮ ಕಾಂಗ್ರೆಸ್‌ ಪದವೀಧರ ಕ್ಷೇತ್ರದ ಅಭ್ಯರ್ಥಿ ರಾಮೋಜಿಗೌಡ ದೊಡ್ಡ ಅಂತರದಲ್ಲಿ ಜಯಗಳಿಸಿದ್ದು, ಅವರಿಗೂ ಕೂಡ ಶುಭಾಷಯ ಕೋರುತ್ತೇನೆ. ರಾಮೋಜಿ ಗೌಡರಿಗೆ ಮತದಾನ ಮಾಡಿದ ಪದವೀಧರರು ಹಾಗೂ ಶ್ರಮಿಸಿದ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಮತದಾರರಿಗೆ ಚಾಲೆಂಜ್ ಮಾಡುವವನು ನಾನಲ್ಲ:

ಕ್ಷೇತ್ರದಲ್ಲಿ ಲೀಡ್ ಬರದಿದ್ದರೆ ರಾಜೀನಾಮೆ ಕೊಡುತ್ತೇನೆ ಎಂಬ ಹೇಳಿಕೆ ನೀಡಿ ಮತದಾರರಿಗೆ ಚಾಲೆಂಜ್ ಮಾಡುವಷ್ಟು ದೊಡ್ಡವನು ನಾನಲ್ಲ, ನನಗೆ ನನ್ನ ಕ್ಷೇತ್ರದ ಮತದಾರರ ಮೇಲೆ ಗೌರವವಿದೆ, ಮಾಜಿ ಶಾಸಕರು ಅವರು ಯಾವ ಸ್ಥಿತಿಯಲ್ಲಿ, ಯಾವ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ನಾನು ಹೇಳಿರುವ ಹೇಳಿಕೆಯ ವಿಡಿಯೋ ಸಾಕ್ಷಿ ನೀಡಲಿ, ಅನಂತರ ಮಾತನಾಡೋಣ, ಕ್ಷೇತ್ರದಲ್ಲಿ ಜನರಿಗಾಗಿ ಸೇವೆ ಮಾಡಿದ್ದೇನೆ. ನನಗೆ ಜನ ಆಶೀರ್ವದಿಸಿದ್ದಾರೆ. ನಾಲ್ಕು ವರ್ಷ ಅವರಿಗಾಗಿ ದುಡಿಯುತ್ತೇನೆ ಎಂದರು.

ಕಾಂಗ್ರೆಸ್ ಮುಖಂಡರಾದ ಅಗಳಕುಪ್ಪೆ ಗೋವಿಂದರಾಜು, ಅಂಚೆಮನೆ ಪ್ರಕಾಶ್, ಶಿವಕುಮಾರ್, ಕೆ.ಕೆ.ಕೃಷ್ಣಮೂರ್ತಿ, ಲಕ್ಕೂರು ಸಿದ್ದರಾಜು, ಯೋಗಾನಂದೀಶ್, ದಿನೇಶ್ ನಾಯಕ್, ಮನುಪ್ರಸಾದ್, ಸುರೇಶ್, ನಾರಾಯಣ್, ಸಿದ್ದರಾಜು, ಕುಮಾರಸ್ವಾಮಿ, ಚಂದ್ರಶೇಖರ್, ಚಿಕ್ಕಣ್ಣ, ಅಜ್ಜಣ್ಣ, ಹನುಮಂತರಾಯಪ್ಪ ಮತ್ತಿತ್ತರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ