ಶಿವಮೊಗ್ಗ: ಹಳೇ ಮಂಡ್ಲಿ ಬಳಿಯ ತುಂಗಾ ಚಾನೆಲ್‌ನಲ್ಲಿ ಈಜಲು ಹೋಗಿದ್ದ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಶಿವಮೊಗ್ಗದ ಹಳೆ ಮಂಡ್ಲಿ ನಿವಾಸಿ ಮೋಹಿತ್ (15) ಬಾಲಕ ಬುಧವಾರ ಕ್ರಿಸ್ ಮಸ್ ಪ್ರಯುಕ್ತ ಶಾಲೆಗೆ ರಜೆ ಇದ್ದ ಕಾರಣ ಸ್ನೇಹಿತರೊಂದಿಗೆ ಕಲ್ಲೂರು ಬಳಿಯ ಚಾನೆಲ್‌ಗೆ ಈಜಲು ಹೋಗಿದ್ದಾನೆ. ಈ ವೇಳೆ ಮೋಹಿತ್ ನೀರುಪಾಲಾಗಿದ್ದಾನೆ. ಈತನ ಜೊತೆ ಹೋಗಿದ್ದ ಸ್ನೇಹಿತರು ಭಯದಿಂದ ಯಾರಿಗೂ ಹೇಳದೆ ಮನೆಗೆ ತೆರಳಿದ್ದಾರೆ. ಸಂಜೆ ಹೊತ್ತು ಎಷ್ಟು ಹೊತ್ತಾದರೂ ಬಾರದ ಮಗನಿಗೆ ಪೋಷಕರ ಹುಡುಕಾಡಿದ್ದಾರೆ. ಆಗ ಮಗನ ಸ್ನೇಹಿತರನ್ನು ವಿಚಾರಿಸಿದಾಗ, ಚಾನೆಲ್‌ಗೆ ಇಳಿದಿರುವ ಸಂಗತಿಯನ್ನು ಬಾಯಿಬಿಟ್ಟಿದ್ದಾರೆ. ಕೂಡಲೇ ಅಗ್ನಿಶಾಮಕದಳದವರಿಗೆ ಕರೆ ಮಾಡಿದಾಗ ಅಗ್ನಿಶಾಮಕದಳದವರು ಸ್ಥಳಕ್ಕೆ ಬಂದು ಕಾರ್ಯಚರಣೆ ನಡೆಸಿದರೂ ಮೋಹಿತ್ ಪತ್ತೆಯಾಗಿರಲಿಲ್ಲ. ಗುರುವಾರ ಬೆಳಗ್ಗೆ ಆತನ ಮೃತ ದೇಹ ಪತ್ತೆಯಾಗಿದೆ. ಈ ಸಂಬಂಧ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೋಟೋ: 26ಎಸ್‌ಎಂಜಿಕೆಪಿ08: ಮೋಹಿತ್