- ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯಿಂದ ಬೃಹತ್ ಪಾದಯಾತ್ರೆ
ಕನ್ನಡಪ್ರಭ ವಾರ್ತೆ ಹುಣಸಗಿ
ದಲಿತ ಬಾಲಕಿ ಅತ್ಯಾಚಾರ ಹಾಗೂ ದಲಿತರಿಗೆ ಬಹಿಷ್ಕಾರ ಹಾಕಿರುವ ಪ್ರಕರಣ ಖಂಡಿಸಿ, ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ನರಸಪ್ಪ ದಂಡೋರ ಅವರ ನೇತೃತ್ವದಲ್ಲಿ ನೂರಾರು ಸಮುದಾಯದ ಮುಖಂಡರು ಕೊಡೇಕಲ್ ಪಟ್ಟಣದಿಂದ ಗ್ರಾಮಕ್ಕೆ ಪಾದಯಾತ್ರೆ ನಡೆಸಿದರು. ನಂತರ, ನೂರಾರು ಮುಖಂಡರು ಅನ್ಯಾಯಕ್ಕೆ ಒಳಗಾದ ದಲಿತರ ಮನೆಗೆ ಭೇಟಿ ನೀಡಿದರು.ರಾಜ್ಯಾಧ್ಯಕ್ಷ ನರಸಪ್ಪ ದಂಡೋರ ಮಾತನಾಡಿ, ಈ ಘಟನೆ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಅತ್ಯಾಚಾರ ಪ್ರಶ್ನಿಸಿದ ದಲಿತ ಸಮಾಜವನ್ನು ಬಹಿಷ್ಕಾರ ಮಾಡುವ ಕೆಟ್ಟ ಮನಸ್ಸುಗಳಿಗೆ ಧಿಕ್ಕಾರವಿದ್ದು, ಇಂತಹವರನ್ನು ಉಗ್ರ ಶಿಕ್ಷೆಗೆ ಸರ್ಕಾರ ಒಳಪಡಿಸಬೇಕು ಎಂದು ಆಗ್ರಹಿಸಿದರು.
--- ಬಾಕ್ಸ್---
ಜಿಲ್ಲಾಧ್ಯಕ್ಷ ಕಾಶಪ್ಪ ಹೆಗ್ಗಣಗೇರಾ, ಮಾನಪ್ಪ ಕಟ್ಟಿಮನಿ, ಅಮಲಪ್ಪ ಹಳ್ಳಿ, ಪವಾಡಪ್ಪ ಮ್ಯಾಗೇರಿ, ಶಿವಪ್ಪ ಸದಬ, ದೇವರಾಜ ಹೊರಟ್ಟಿ, ಮಾನಪ್ಪ, ಸಿದ್ದು ಮೇಲಿನಮನಿ, ಬಸವರಾಜ ದೊಡ್ಡಮನಿ, ನಂದಪ್ಪ ಪೀರಾಪೂರ, ಬಸವರಾಜ ಕಾಮನಟಗಿ, ಕಾಶಿನಾಥ ಹಾದಿಮನಿ, ಭೀಮು ಚೌನಿ, ಸಂಗಮೇಶ ಮಾಸ್ತರ, ಚೆನ್ನಪ್ಪ ತೀರ್ಥ, ಮಹಾಂತೇಶ ದೊಡ್ಡಮನಿ, ಪ್ರಭು ಕಚಕನೂರ, ಸೋಮಶೇಖರ್ ಆನೇಕಿ, ಸೋಮಶೇಖರ ಕಕ್ಕೇರಾ, ಮಲ್ಲು ವಜ್ಜಲ್, ಮಲ್ಲು ದೇವಾಪೂರ, ಹುಸನಪ್ಪ ಸೇರಿದಂತೆ ಇತರರಿದ್ದರು. ಸಿಪಿಐ ಸಚಿನ್ ಚಲುವಾದಿ, ನಾರಾಯಣಪುರ ಪಿಎಸ್ಐ ರಾಜಶೇಖರ್ ಸೂಕ್ತ ಬಂದೋಬಸ್ತ್ ನೀಡಿದರು.
17ವೈಡಿಆರ್4: ದಲಿತ ಬಾಲಕಿ ಅತ್ಯಾಚಾರ ಹಾಗೂ ದಲಿತರಿಗೆ ಬಹಿಷ್ಕಾರ ಹಾಕಿರುವ ಪ್ರಕರಣವನ್ನು ಖಂಡಿಸಿ, ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ನರಸಪ್ಪ ದಂಡೋರ ಅವರ ನೇತೃತ್ವದಲ್ಲಿ ನೂರಾರು ಸಮುದಾಯದ ಮುಖಂಡರು ಕೊಡೇಕಲ್ ಪಟ್ಟಣದಿಂದ ಗ್ರಾಮಕ್ಕೆ ಪಾದಯಾತ್ರೆ ನಡೆಸಿದರು.