ಪ್ರಿಯಕರನ ಕರ್ಮಕಾಂಡ: ಠಾಣೆಯಲ್ಲೇ ತಾಳಿ ಕಿತ್ತೆಸೆದ ಯುವತಿ

KannadaprabhaNewsNetwork |  
Published : Jan 10, 2026, 02:15 AM IST
೯ಕೆಎಲ್‌ಆರ್-೮ಬೆಂಗಳೂರು ಉತ್ತರ ವಿವಿ ನೂತನ ಕುಲಪತಿಯಾಗಿ ಪ್ರೊ.ಬಿ.ಕೆ.ರವಿ ಪ್ರಭಾರ ಕುಲಪತಿ ಡಾ.ಕುಮುದಾರಿಂದ ಅಧಿಕಾರ ಸ್ವೀಕರಿಸಿದರು. | Kannada Prabha

ಸಾರಾಂಶ

ನಗರದ ಕಂದವಾರ ಬಡಾವಣೆಯ ಶ್ರೀಮಂತ ಕುಟುಂಬದ 18 ವರ್ಷದ ಯುವತಿ ಜೊತೆ ಎರಡು ದಿನಗಳ ಹಿಂದೆ ಪರಾರಿಯಾಗಿದ್ದ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪ್ರಿಯಕರನ ಕರ್ಮಕಾಂಡ ಕಂಡು, ಪ್ರೀತಿಸಿ ಮದುವೆಯಾದ ಯುವತಿಯು ಎರಡನೇ ದಿನಕ್ಕೆ ಪೊಲೀಸ್​​ ಠಾಣೆಯಲ್ಲೇ ತಾಳಿ ಕಿತ್ತೆಸೆದ ಘಟನೆ ನಗರದ ಮಹಿಳಾ ಪೋಲಿಸ್ ಠಾಣೆಯಲ್ಲಿ ನಡೆದಿದೆ.

ಘಟನೆಯ ವಿವರ:

ನಗರದ ಗಂಗನಮಿದ್ದೆ ಬಡಾವಣೆಯ ನಿವಾಸಿ, ಪೇಂಟ್​​ ಕೆಲಸಗಾರ ಸಂದೀಪ್ (25) ಎಂಬಾತ ನಗರದ ಕಂದವಾರ ಬಡಾವಣೆಯ ಶ್ರೀಮಂತ ಕುಟುಂಬದ 18 ವರ್ಷದ ಯುವತಿ ಜೊತೆ ಎರಡು ದಿನಗಳ ಹಿಂದೆ ಪರಾರಿಯಾಗಿದ್ದ. ಜಿಲ್ಲೆಯ ಚಿಂತಾಮಣಿಯ ದೇವಸ್ಥಾನವೊಂದರಲ್ಲಿ ಆಕೆಗೆ ತಾಳಿಯನ್ನೂ ಕಟ್ಟಿದ್ದ. ಬಳಿಕ ಈ ಜೋಡಿ ಕಾರಿನಲ್ಲಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾಗ ಜಿಲ್ಲೆಯ ಶಿಡ್ಲಘಟ್ಟ ನಗರದ ಮಯೂರ ಸರ್ಕಲ್‌ನಲ್ಲಿ ಯುತಿಯ ಪೋಷಕರು ಮತ್ತು ಹಿತೈಷಿಗಳು ಮೂರು ಕಾರುಗಳಲ್ಲಿ ಇವರ ಕಾರನ್ನು ಅಡ್ಡಗಟ್ಟಿ, ಚಿಕ್ಕಬಳ್ಲಾಪುರ ನಗರದ ಮಹಿಳಾ ಪೋಲಿಸ್ ಠಾಣೆಗೆ ಮಗಳು ಮತ್ತು ಆಕೆಯ ಪ್ರಿಯಕರನನ್ನು ನೇರವಾಗಿ ಕರೆದುಕೊಂಡು ಬಂದಿದ್ದರು. ತಾವು ಮದುವೆ ಮಾಡಿಕೊಂಡಿದ್ದು ತಮ್ಮ ಪಾಡಿಗೆ ತಮ್ಮನ್ನು ಬಿಡುವಂತೆ ಈ ವೇಳೆ ಜೋಡಿ ಪೊಲೀಸರನ್ನು ಕೇಳಿಕೊಂಡಿತ್ತು. ಪೋಷಕರ ದೂರಿನ ಮೇರೆಗೆ ಪೋಲಿಸರು ತನಿಖೆ ನಡೆಸಿದಾಗ ಸಂದೀಪ್​​ನ ಒಂದೊಂದೇ ಪ್ರೇಮ ಪ್ರಕರಣಗಳು ಬಯಲಾದವು.

ಸಂದೀಪ್ 20024ರಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ನಾಯನಹಳ್ಳಿ ಗ್ರಾಮದ ಅಪ್ರಾಪ್ರ ಬಾಲಕಿಯನ್ನು ಪ್ರೀತಿಸಿದ್ದ ಸಂದೀಪ್ ಆಕೆಯನ್ನು ಮದುವೆ ಮಾಡಿಕೊಂಡಿದ್ದ. ಪ್ರಶಾಂತ್ ನಗರದಲ್ಲಿ ಮತ್ತೊರ್ವ ಮಹಿಳೆಯಗೆ ವಂಚನೆ ಮಾಡಿದ್ದು, ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪೋಕ್ಸೋ ಪ್ರಕರಣ ಕೂಡ ದಾಖಲಾಗಿದ್ದು, ಗೊತ್ತಾಗಿದೆ.

ಇವುಗಳ ಜೊತೆಗೆ ಸಾಕ್ಷಿ ಎಂಬಂತೆ ಸಂದೀಪ್​​ನಿಂದ ಹಿಂದೆ ಮೋಸ ಹೋಗಿರುವ ಅಪ್ರಾಪ್ತೆಯೇ ಪೋಲಿಸ್ ಠಾಣೆಗೆ ಬಂದು ಆತನ ಇತಿಹಾಸ ಬಿಚ್ಚಿಟ್ಟಿದ್ದಾಳೆ. ಹೀಗಾಗಿ ಪ್ರಿಯಕರ ಕಟ್ಟಿದ್ದ ತಾಳಿಯನ್ನು ಕಿತ್ತು ಬಿಸಾಕಿ ಆತನಿಗೆ ಗುಡ್​​ ಬೈ ಹೇಳಿ ಯುವತಿ ಪೋಷಕರ ಜೊತೆ ಮನೆಗೆ ಹೋಗಿದ್ದಾಳೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ