ಬ್ಯಾಡಗಿ: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸೆ.5 ಮತ್ತು 6ರಂದು ವಿಜ್ಯೂವೆಲರ್ಸ ಆಶ್ರಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ ದೈಹಿಕ ಶಿಕ್ಷಕರ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ 17 ಮತ್ತು 19 ವರ್ಷದೊಳಗಿನ ತಾಲೂಕು ಮಟ್ಟದ ಶಾಲಾ ಕಾಲೇಜುಗಳ ಬಾಲಕ ಬಾಲಕಿಯರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಆಯೋಜಿಸಿರುವುದಾಗಿ ಉಮೇಶ ವೆರ್ಣೇಕರ ಹೇಳಿದರು.
34ಕ್ಕೂ ಹೆಚ್ಚು ತಂಡಗಳು: ತಾಲೂಕು ದೈಹಿಕ ಶಿಕ್ಷಕ ಪರಿವೀಕ್ಷಕ ಬಸವರಾಜ ಬಸಪ್ಪನವರ ಮಾತನಾಡಿ, ಸದರಿ ಪಂದ್ಯಾವಳಿಗೆ ಶಿಕ್ಷಣ ಇಲಾಖೆ ಕೈಜೋಡಿಸಿದ್ದು ತಾಲೂಕಿನ ವಿವಿಧ ಶಾಲಾ ಕಾಲೇಜುಗಳ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದು, ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಸಮವಸ್ತ್ರ ವಿಜೇತ ತಂಡಗಳಿಗೆ ಪ್ರವಾಸ ಭತ್ಯೆ ಹಾಗೂ ನಗದು ಬಹುಮಾನ ವಿಜ್ಯೂವೆಲರ್ಸ್ ನೀಡಲಿದ್ದು, 2 ದಿನಗಳ ಕಾಲ ಕಬಡ್ಡಿ ಹಬ್ಬ ನಡೆಯಲಿದೆ ಎಂದರು.
ಪ್ರೋ ಮಾದರಿ ಕಬಡ್ಡಿ: ದೈಹಿಕ ಶಿಕ್ಷಕರ ಸಂಘದ ಶಾಲಾ ಕಾಲೇಜುಗಳ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿರುವುದರಿಂದ ಸದರಿ ಕಬಡ್ಡಿ ಕ್ರೀಡೆಯನ್ನು ಪ್ರೋಮಾದರಿಯಲ್ಲಿ ಬಹಳಷ್ಟು ಅಚ್ಚುಕಟ್ಟಾಗಿ ನಡೆಸಲಿದ್ದೇವೆ. ಮಕ್ಕಳ ಸಾಮರ್ಥ್ಯ ಹಾಗೂ ಕೌಶಲ್ಯ ಸವಿಯಲು ಈಗಾಗಲೇ ತಾಲ್ಲೂಕಾ ಕ್ರೀಡಾಂಗಣದಲ್ಲಿ ಸುಸಜ್ಜಿತವಾದ ಎರಡು ಅಂಕಣ ಹಾಗೂ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಸುಭಾಸ ಎಲಿ, ಬಿ.ಬಿ.ದೊಡ್ಮನಿ, ಬಿ.ಬಸವರಾಜಪ್ಪ, ವಿ.ಡಿ. ಅಕ್ಕೂರ, ಮನ್ಸೂರ ಹಕೀಮ, ಗುರುರಾಜ ಚಂದ್ರಿಕೇರ ಸೇರಿದಂತೆ ತಾಲೂಕಿನ ವಿವಿಧ ಶಾಲಾ ಕಾಲೇಜುಗಳ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.