ಮಂಡ್ಯ: ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಪಿ.ಪ್ರಕಾಶ್ ಆಯ್ಕೆಯಾದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಹಿಂದಿನ ಅಧ್ಯಕ್ಷ ಕೆ.ಸಿ.ಮಂಜುನಾಥ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಎಲ್ಲರ ಒಮ್ಮತದ ಮೇರೆಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.ನಂತರ ರಾಷ್ಟ್ರೀಯ ಮಂಡಳಿ ಸದಸ್ಯರನ್ನಾಗಿ ಜೆ.ಎಂ.ಬಾಲಕೃಷ್ಣ, ನಾಮ ನಿರ್ದೇಶನ ಸದಸ್ಯರಾಗಿ ಚಿನಕುರಳಿ ಲೋಕೇಶ್, ಚಿಕ್ಕಮಂಡ್ಯ ಉಮೇಶ್, ಮಧು, ಬಾಲಕೃಷ್ಣ, ಶಿವಪ್ರಕಾಶ್, ಎಚ್ .ಕೆ.ಅಶ್ವಥ್, ವೆಂಕಟರಾಮು ಅವರನ್ನು ಆಯ್ಕೆ ಮಾಡಲಾಯಿತು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಬಿ.ಪಿ.ಪ್ರಕಾಶ್ ಹಾಗೂ ನಾಮನಿರ್ದೇಶಕರನ್ನು ರಾಜ್ಯ ಸಂಘದ ಕಾರ್ಯದರ್ಶಿಗಳಾದ ಮತ್ತೀಕೆರೆ ಜಯರಾಂ, ಸೋಮಶೇಖರ್ ಕೆರಗೋಡು, ಮಾಜಿ ಅಧ್ಯಕ್ಷ ಕೆ.ಸಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ನವೀನ್‌ಕುಮಾರ್, ಉಪಾಧ್ಯಕ್ಷರಾದ ರವಿ ಸಾವಂದಿಪುರ, ಗಣಂಗೂರು ನಂಜೇಗೌಡ, ಖಜಾಂಚಿ ನಂಜುಂಡಸ್ವಾಮಿ, ಕಾರ್ಯದರ್ಶಿಗಳಾದ ಮಂಜುಳಾ ಕಿರುಗಾವಲು, ಬಿ.ಎಸ್.ಜಯರಾಂ, ಮಾಜಿ ಅಧ್ಯಕ್ಷರಾದ ಪಿ.ಜೆ.ಚೈತನ್ಯ ಕುಮಾರ್, ಕೃಷ್ಣ ಸ್ವರ್ಣಸಂದ್ರ ಸೇರಿದಂತೆ ಸಂಘದ ಪದಾಧಿಕಾರಿಗಳು, ಪತ್ರಕರ್ತರು ಅಭಿನಂದಿಸಿದರು.