ವಿರಾಜಪೇಟೆಮಾಜಿ ಶಾಸಕ ಮಾಜಿ ವಿಧಾನಸ ಭಾಧ್ಯಕ್ಷ ರಾದ ಕೆಜಿ ಭೋಪಯ್ಯ ನವರು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕಾಡಾನೆ ದಾಳಿಗೊಳಗಾದ ಮದೆನಾಡು ನಿವಾಸಿ ಪಟ್ಟ ಡಭರತ್ ಕುಮಾರ್ ಅವರ ಆರೋಗ್ಯವಿಚಾರಿಸಿದರು. | Kannada Prabha
Image Credit: KP
ವಿರಾಜಪೇಟೆ ಮಾಜಿ ಶಾಸಕ, ಮಾಜಿ ವಿಧಾನಸಭಾಧ್ಯಕ್ಷ ಕೆ. ಜಿ. ಭೋಪಯ್ಯ ಅವರು ಸೋಮವಾರ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಭಾನುವಾರ ಕಾಡಾನೆ ದಾಳಿಗೊಳಗಾದ ಮದೆನಾಡು ನಿವಾಸಿ ಪಟ್ಟಡ ಭರತ್ ಕುಮಾರ್ ಅವರ ಆರೋಗ್ಯ ವಿಚಾರಿಸಿದರು.
ನಾಪೋಕ್ಲು: ವಿರಾಜಪೇಟೆ ಮಾಜಿ ಶಾಸಕ, ಮಾಜಿ ವಿಧಾನಸಭಾಧ್ಯಕ್ಷ ಕೆ. ಜಿ. ಭೋಪಯ್ಯ ಅವರು ಸೋಮವಾರ
ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಭಾನುವಾರ ಕಾಡಾನೆ ದಾಳಿಗೊಳಗಾದ ಮದೆನಾಡು ನಿವಾಸಿ ಪಟ್ಟಡ ಭರತ್ ಕುಮಾರ್ ಅವರ ಆರೋಗ್ಯ ವಿಚಾರಿಸಿದರು.
ಮದೆನಾಡು ಗ್ರಾಮದಲ್ಲಿ ಆನೆ ಹಾವಳಿ ಬಗ್ಗೆ ಕಾರ್‍ಯಕರ್ತರಿಂದ ಮಾಹಿತಿ ಪಡೆದು ಆಸ್ಪತ್ರೆಗೆ ಆಗಮಿಸಿದ ಅವರು ಗಾಯಾಳುವಿಗೆ
ಸಾಂತ್ವನ ಹೇಳಿ, ನಮ್ಮ ಅಧಿಕಾರಾವಧಿಯಲ್ಲಿ ಆನೆ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಲು ಯೋಜನೆ ರೂಪಿಸಲಾಗಿತ್ತು. ಆದರೆ ಅದಿನ್ನೂ ಅನುಷ್ಠಾನಕ್ಕೆ ಬರದಿರುವ ಬಗ್ಗೆ ವಿಷಾದಿಸಿದರು. ಈ ಸಂದರ್ಭ ಮದೆನಾಡು ಬಿಜೆಪಿ ಕಾರ್ಯಕರ್ತರು ಹಾಗೂ ಮದೆ ವಿ.ಎಸ್. ಎಸ್. ನಿರ್ದೇಶಕ ಬೈನರ ವನ ಇಂದ್ರ ಕುಮಾರ್, ಕಾಯರ್ ಮಾರ್ ಸುರೇಶ ಕುಮಾರ್ ಉಪಸ್ಥಿತರಿದ್ದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.