ಮಾಗಡಿ: ಬಡವರಿಗೆ ಅನುಕೂಲವಾಗುತ್ತಿದ್ದ ಬಿಪಿಎಲ್ ಕಾರ್ಡ್ ಮೇಲೆ ಕೇಂದ್ರ ಸರ್ಕಾರ ಹಲವು ನಿಯಮಗಳನ್ನು ಜಾರಿಗೆ ತಂದು ರಾಮನಗರ ಜಿಲ್ಲೆಯಲ್ಲಿ 15 ಸಾವಿರ ಬಿಪಿಎಲ್ ಕಾರ್ಡ್ ರದ್ದು ಮಾಡಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ
ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು ಹೇಳಿದರು.ಪಟ್ಟಣದ ತಾಪಂ ಆವರಣದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕಲ್ಕೆರೆ ಶಿವಣ್ಣ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ವಾರ್ಷಿಕ ₹ 1.20 ಲಕ್ಷ ಆದಾಯ ಬರುವ ಕುಟುಂಬಗಳಿಗೆ, ಮೂರುವರೆ ಎಕರೆ ಜಮೀನು ಹೊಂದಿರುವವರಿಗೆ, ಜಿಎಸ್‌ಟಿ ಕಟ್ಟುತ್ತಿರುವವರಿಗೆ, ಸ್ವಂತ ಕಾರು ಹೊಂದಿರುವವರಿಗೆ( ವೈಟ್ ಬೋರ್ಡ್) ಈ ಮಾನದಂಡಗಳ ಅಡಿಯಲ್ಲಿ ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಬದಲಾಯಿಸಿದ್ದು ನಿಜವಾದ ಫಲಾನುಭವಿಗಳು ಇದ್ದರೆ ಅವರಿಗೆ 45 ದಿನ ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳಲು ಅವಕಾಶವಿದೆ. ಕೂಡಲೇ ಕಾರ್ಡ್ ರದ್ದಾಗಿರುವ ಕುಟುಂಬಗಳು ಅಧಿಕಾರಿಗಳಿಂದ ಆದಾಯ ದೃಢಪಡಿಸಿ ಮತ್ತೆ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಬಹುದು. ವಿರೋಧ ಪಕ್ಷದವರು ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದು ರದ್ದು ಮಾಡುವ ನಿಯಮಗಳನ್ನು ಜಾರಿಗೊಳಿಸಿರುವುದು ಕೇಂದ್ರ ಸರ್ಕಾರ ಎಂಬುದನ್ನು ಜನಗಳು ಅರಿಯಬೇಕು ಎಂದು ಹೇಳಿದರು.
20 ದಿನ ಪಡಿತರ ನೀಡಬೇಕು: ಪಡಿತರಾದಾರರು ತಿಂಗಳ 20 ದಿನ ಪಡಿತರ ವಿತರಿಸಬೇಕು. ಎರಡು ದಿನಕ್ಕೆ ಪಡಿತರ ಖಾಲಿಯಾದರೆ 20 ದಿನ ತೆಗೆಯುವ ಅವಶ್ಯಕತೆ ಇರುವುದಿಲ್ಲ. ತಾವು ಕೇವಲ ಎರಡು, ಮೂರು ದಿನಕ್ಕೆ ಮಾತ್ರ ನಿಲ್ಲಿಸಬಾರದು. ನ್ಯಾಯಬೆಲೆ ಅಂಗಡಿ ವ್ಯಾಪ್ತಿಯ ಎಲ್ಲಾ ಕಾರ್ಡ್‌ದಾರರಿಗೂ ಪ್ರತಿ ತಿಂಗಳು ಪಡಿತರ ಆಹಾರ ಸಿಗುವಂತಾಗಬೇಕು. ತಮಗೆ ನಿಗದಿ ಮಾಡಿರುವ ಸಮಯದಲ್ಲಿ ನ್ಯಾಯಬೆಲೆ ಅಂಗಡಿ ತೆಗೆದು ಪಡಿತರ ಕೊಡಬೇಕು. ಇಲ್ಲವಾದರೆ ನಿಮ್ಮ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಗ್ಯಾರಂಟಿ ಸಮಿತಿ ಸದಸ್ಯರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತರಬೇಕು ಎಂದು ತಿಳಿಸಿದರು.ಟಿಸಿ ವರ್ಗಾವಣೆ ಮಾಡಿ:
ಸರ್ಕಾರಿ ಬಸ್ ನಿಲ್ದಾಣದ ಟಿಸಿ ಬಸವರಾಜು ಸಾರ್ವಜನಿಕರ ಜತೆ ಮತ್ತು ಸಮಿತಿ ಸದಸ್ಯರ ಜತೆ ಅನುಚಿತ ವರ್ತನೆ ತೋರುತ್ತಿದ್ದು, ಸಮಸ್ಯೆಗಳನ್ನು ಕೇಳಿದರೆ ಸಿದ್ದರಾಮಯ್ಯನವರಿಗೆ ಹೇಳಿ ಎಂಬ ಉಡಾಫೆ ಉತ್ತರ ಕೊಡುತ್ತಿದ್ದು ಕೂಡಲೇ ಇವರನ್ನು ವರ್ಗಾವಣೆ ಮಾಡಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ನೀಡಿದ ದೂರಿನ ಮೇರೆಗೆ ಸಮಿತಿ ಜಿಲ್ಲಾಧ್ಯಕ್ಷ ರಾಜು, ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಅವರನ್ನು ವರ್ಗಾವಣೆ ಮಾಡುವಂತೆ ತಿಳಿಸಿದರು.ಗೃಹಲಕ್ಷ್ಮಿ ಯೋಜನೆಯಿಂದ ಬದುಕು ಕಟ್ಟಿಕೊಂಡ ತಾಲೂಕಿನ ಕೆ.ವಿ.ತಾಂಡ್ಯದ ಮಮತಾ ಹಾಗೂ ವೃದ್ಧೆ ಲಿಂಗಮ್ಮನವನ್ನು ತಾಲೂಕು ಗ್ಯಾರಂಟಿ ಅನುಷ್ಠಾನ ಯೋಜನಾ ಸಮಿತಿಯಿಂದ ಸನ್ಮಾನಿಸಲಾಯಿತು.
ಸಭೆಯಲ್ಲಿ ತಾಪಂ ಇಒ ಜೈಪಾಲ್, ಸಮಿತಿ ಜಿಲ್ಲಾ ಉಪಾಧ್ಯಕ್ಷ ಶಿವಪ್ರಸಾದ್, ತಾಲೂಕು ಅಧ್ಯಕ್ಷ ಕಲ್ಕೆರೆ ಶಿವಣ್ಣ, ರಾಮನಗರ ತಾಲೂಕು ಅಧ್ಯಕ್ಷ ರಾಜು, ಜಿಲ್ಲಾ ಸದಸ್ಯರಾದ ಜಗಣ್ಣ, ವನಜ, ಚನ್ನಪಟ್ಟಣ ತಾಲೂಕಿನ ಚಂದನ, ತಾಲೂಕು ಸದಸ್ಯರಾದ ರಾಮಯ್ಯ, ತೇಜು, ಕೆಂಪೇಗೌಡ, ಲಿಂಗೇಶ್, ಶಾಂತಾಬಾಯಿ, ಯಾಸಿನ್, ರಂಗಸ್ವಾಮಿ, ಡಿಪೋ ಮ್ಯಾನೇಜರ್ ಮಂಜುನಾಥ್, ಸಿಡಿಪಿಒ ಸುರೇಂದ್ರ, ಆಹಾರ ಶಿರಸ್ತೆದಾರ ಗಣೇಶ್ ಇತರರು ಭಾಗವಹಿಸಿದ್ದರು.(ಫೋಟೋ ಕ್ಯಾಫ್ಷನ್)
ಮಾಗಡಿ ತಾಪಂ ಆವರಣದಲ್ಲಿ ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆಯಿಂದ ಬದುಕು ಕಟ್ಟಿಕೊಂಡ ಇಬ್ಬರು ಮಹಿಳೆರಯನ್ನು ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು ಸನ್ಮಾಸಿದರು. ತಾಲೂಕು ಅಧ್ಯಕ್ಷ ಕಲ್ಕೆರೆ ಶಿವಣ್ಣ ಹಾಗೂ ಅಧಿಕಾರಿಗಳು ಹಾಜರಿದ್ದರು.