125 ದೇಶಗಳಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿವಿ ಸೇವೆ: ಪ್ರಮೀಳಾ

KannadaprabhaNewsNetwork |  
Published : Mar 09, 2024, 01:35 AM IST
ನರಸಿಂಹರಾಜಪುರ ರಾಘವೇಂದ್ರ ಬಡಾವಣೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ನಡೆದ ಶಿವರಾತ್ರಿ ಹಾಗೂ ಅಂತರಾಷ್ಟೀಯ ಮಹಿಳಾ ದಿನಾಚರಣೆ ಸಮಾರಂಭವನ್ನು ನಾಗಲಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಉದ್ಘಾಟಿಸಿದರು.  | Kannada Prabha

ಸಾರಾಂಶ

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಪ್ರಪಂಚದ 125 ರಾಷ್ಟಗಳ 10,500 ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಬ್ರಹ್ಮಕುಮಾರಿ ವಿವಿ ನರಸಿಂಹರಾಜಪುರ ಸಂಚಾಲಕಿ ಪ್ರಮೀಳಾ ತಿಳಿಸಿದರು.

ರಾಘವೇಂದ್ರ ಬಡಾವಣೆಯಲ್ಲಿ ಶಿವರಾತ್ರಿ ಮಹೋತ್ಸವ । ಅಂತಾರಾಷ್ಟೀಯ ಮಹಿಳಾ ದಿನಾಚರಣೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಪ್ರಪಂಚದ 125 ರಾಷ್ಟಗಳ 10,500 ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಬ್ರಹ್ಮಕುಮಾರಿ ವಿವಿ ನರಸಿಂಹರಾಜಪುರ ಸಂಚಾಲಕಿ ಪ್ರಮೀಳಾ ತಿಳಿಸಿದರು.

ನರಸಿಂಹರಾಜಪುರದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾನಿಲಯದ ಶಾಖೆ ಪ್ರಾರಂಭಗೊಂಡು 32 ವರ್ಷ ಕಳೆದಿದೆ. ಪ್ರಸ್ತುತ ಜನರಲ್ಲಿ ಕಾಮ, ಕ್ರೋಧ, ಮದ, ಮತ್ಸರ ಸೇರಿದಂತೆ ಪಂಚ ವಿಕಾರಗಳು ಜಾಸ್ತಿಯಾಗುತ್ತಿದ್ದು ಅವರಲ್ಲಿರುವ ದುರ್ಗಣ ತೆಗೆದು ಹಾಕಿ ಸುಜ್ಞಾನದ ಕಡೆಗೆ ಕರೆದುಕೊಂಡು ಹೋಗಲು 7 ದಿನದ ಉಚಿತ ಸಾತ್ವಿಕ ಶಿಕ್ಷಣ ನೀಡುತ್ತಿದ್ದೇವೆ. ದೇಶ, ವಿದೇಶದ ನಮ್ಮ ಸಂಸ್ಥೆ ಎಲ್ಲಾ ಪದಾಧಿಕಾರಿಗಳು ಮಹಿಳೆಯರೇ ಆಗಿದ್ದಾರೆ. ಇಂದು ಮಹಿಳೆಯರು ಅಬಲೆಯರಲ್ಲ, ಸಬಲೆಯರು ಎಂದು ಜಗತ್ತಿಗೇ ತೋರಿಸಿಕೊಟ್ಟಿದ್ದಾರೆ ಎಂದರು. ಮುಖ್ಯ ಅತಿಥಿಯಾಗಿದ್ದ ರೋಟರಿ ಸಂಸ್ಥೆ ಕಾರ್ಯದರ್ಶಿ ಪಿ.ಎಸ್.ವಿದ್ಯಾನಂದಕುಮಾರ್ ಮಾತನಾಡಿ, ಭಾರತ ದೇಶದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನ ಮಾನ ನೀಡಲಾಗಿದೆ. ಕಲ್ಪನ ಚಾವ್ಲಾ, ಇಂದಿರಾ ಗಾಂಧಿ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಹಲವಾರು ದೀರ ಮಹಿಳೆಯರು ವಿಶೇಷ ಸಾಧನೆ ಮಾಡಿ ಆದರ್ಶವಾಗಿದ್ದಾರೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಕೇಂದ್ರ ಕಚೇರಿ ರಾಜಸ್ತಾನದ ಮೌಂಟು ಅಬುದಲ್ಲಿದೆ. ನಾವು ಸಮಾಜದ ಋಣ ತೀರಿಸಲು ನಮ್ಮ ದುಡಿಮೆಯಲ್ಲಿ ಸ್ವಲ್ಪ ಭಾಗವನ್ನು ದೀನ ದಲಿತರಿಗೆ ದಾನ ಮಾಡಬೇಕು. ಪ್ರತಿ ನಿತ್ಯ ಭಗವಂತನ ಧ್ಯಾನ ಮಾಡಬೇಕು ಎಂದರು. ಸಭೆ ಅಧ್ಯಕ್ಷತೆ ವಹಿಸಿದ್ದ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ ಮಾತನಾಡಿ, ಭಾರತ ದೇಶದಲ್ಲೇ ಹುಟ್ಟಿದ ಯೋಗ, ಧ್ಯಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಂದು ವಿದೇಶಗಳಲ್ಲೂ ಕೂಡಾ ಭಾರತದ ಯೋಗ, ಧ್ಯಾನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ನಮ್ಮ ದೇಶದ ಸಂಸ್ಕೃತಿ,ಸಂಪ್ರದಾಯ ವಿದೇಶಗಳಲ್ಲೂ ವ್ಯಾಪಿಸಿದೆ ಎಂದರು. ನಾಗಲಾಪುರ ಗ್ರಾಪಂ ಉಪಾಧ್ಯಕ್ಷೆ ಶೋಭಾ ಉದ್ಘಾಟಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಕಿರಣ್ ದ್ವಜಾರೋಹಣ ನೆರವೇರಿಸಿದರು. ಸಾವಿತ್ರಿ, ಕೆ.ಎಸ್‌.ರಾಜಕುಮಾರ್‌, ಅನುಪಮ ಇದ್ದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ