ಕುಟುಂಬಕ್ಕೆ ಸಾಂತ್ವನ, ಧನ ಸಹಾಯ । ಸಂತ್ರಸ್ತರಿಗೆ ಸಹಾಯ ಮಾಡಲು ಸಮಾಜದವರಿಗೆ ಸೂಚನೆ
ಇತ್ತೀಚೆಗೆ ಕಪ್ಪೆಚಿಪ್ಪು ತೆಗೆಯಲು ಹೋಗಿ ನೀರಿನಲ್ಲಿ ಮುಳಿಗಿ ಮೃತಪಟ್ಟ ೧೧ ಜನರ ಮನೆಗೆ ಸೋಮವಾರ ಶ್ರೀರಾಮ ಕ್ಷೇತ್ರದ ಮಠಾಧೀಶ ಹಾಗೂ ನಾಮಧಾರಿ ಸಮಾಜದ ಕುಲಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭ ಅವರು ಮಾತನಾಡಿ, ಇದೊಂದು ಘೋರ ದುರಂತವಾಗಿದೆ. ಯಾವ ಕುಟುಂಬದವರಿಗೂ ಇಂತಹ ಪರಿಸ್ಥಿತಿ ಬರಬಾರದು, ಬಂದಾಗ ನೊಂದವರೊಂದಿಗೆ ಸಮಾಜದವರು ಇರಬೇಕು ಎಂದರಲ್ಲದೇ, ದುರಂತದ ದಿನ ನಾನು ಅಯೋಧ್ಯೆಯಲಿದ್ದ ಕಾರಣ ತಕ್ಷಣ ಬರಲು ಆಗಲಿಲ್ಲ. ಸಚಿವ ಮಂಕಾಳ ವೈದ್ಯರು ಸರಕಾರದಿಂದ ಇನ್ನೂ ಹೆಚ್ಚಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಕುಟುಂಬದವರನ್ನು ಪೋಷಣೆ ಮಾಡುವ ಕೆಲಸ ಮಠ ಹಾಗೂ ಸಮಾಜ ಮಾಡುತ್ತದೆ ಎಂದರು.ಸಮಾಜದ ಪ್ರತಿಯೊಬ್ಬರು ಸಂತಸ್ತರ ಕುಟುಂಬದವರಿಗೆ ಸಹಾಯ ಮಾಡಬೇಕು. ಆ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ನಮ್ಮ ಮಠವು ಅನುಕೂಲ ಮಾಡಿಕೊಡಲಿದೆ ಎಂದರು.
ಮೃತ ಕುಟುಂಬದವರ ಮಕ್ಕಳಿಗೆ ಉದ್ಯೋಗ ನೀಡಲು ಸ್ಥಳೀಯ ಬ್ಯಾಂಕುಗಳ ಆಡಳಿತ ಮಂಡಳಿಯವರೊಂದಿಗೆ ಮಾತನಾಡಿ ಉದ್ಯೋಗ ನೀಡುವಂತೆ ತಿಳಿಸಿದರು.