ಜಿಲ್ಲಾಡಳಿತದಿಂದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ

KannadaprabhaNewsNetwork |  
Published : Aug 21, 2024, 12:30 AM IST
20ಕೆಪಿಎಲ್22 ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಬ್ರಹ್ಮಶ್ರೀ ನಾರಾಯಣಗುರು ಅವರ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಬ್ರಹ್ಮಶ್ರೀ ನಾರಾಯಣಗುರು ಅವರ ಜಯಂತಿ ಆಚರಿಸಲಾಯಿತು.

ಕೊಪ್ಪಳ:

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಬ್ರಹ್ಮಶ್ರೀ ನಾರಾಯಣಗುರು ಅವರ ಜಯಂತಿ ಆಚರಿಸಲಾಯಿತು.

ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಬ್ರಹ್ಮಶ್ರೀ ನಾರಾಯಣಗುರು ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಅರ್ಪಿಸಿ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ಸಮಾಜದ ಮುಖಂಡರಾದ ಈರಣ್ಣ ಹುಲಿಗಿ, ರವಿ ಗಿಣಿಗೇರ, ವೆಂಕಟೇಶ್ ಗಂಗಾವತಿ, ಹನುಮಂತಪ್ಪ ಕಂಪಸಾಗರ, ಚಂದ್ರು ಈಳಿಗೇರ್, ಮಂಜುನಾಥ ಈಳಿಗೇರ್, ಅಶೋಕ, ಬಸವರಾಜ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತಿತರರು ಇದ್ದರು.

ಅರಿವಿನ ಬೆಳಕು ತೋರಿಸಿದ ನಾರಾಯಣಗುರು:

ಅಂಧಾಕಾರದ ಮಂಕಿನಲ್ಲಿದ್ದ ಈ ನಾಡಿಗೆ ಬ್ರಹ್ಮಶ್ರೀ ನಾರಾಯಣಗುರು ತಮ್ಮ ಚಿಂತನೆ ಮತ್ತು ಕೆಲಸಗಳ ಮೂಲಕ ಅರಿವಿನ ಬೆಳಕು ತೋರಿಸಿದ್ದಾರೆ ಎಂದು ಆರ್ಯ ಈಡಿಗ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀಕಾಂತ ಈಡಿಗೇರ್ ಮರ್ಲಾನಹಳ್ಳಿ ಹೇಳಿದರು.ಕಾರಟಗಿಯ ಪುರಸಭೆ, ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ೧೭೦ನೇ ಜಯಂತಿ ಆಚರಣೆ ವೇಳೆ ಮಾತನಾಡಿದರು.ಭರತ ಖಂಡವು ಕಂಡ ಮಹಾನ್ ದಾರ್ಶನಿಕರಾಗಿದ್ದ ಶ್ರೀನಾರಾಯಣಗುರುಗಳ ಜಯಂತಿಯನ್ನು ರಾಜ್ಯ ಸರ್ಕಾರ ಆಚರಿಸುತ್ತಿರುವುದಕ್ಕೆ ಸಮಾಜ ಕೃತಜ್ಞತೆ ಸಲ್ಲಿಸುತ್ತದೆ. ಇಂದಿನ ವೇಗದ ಕಾಲದಲ್ಲಿ ನಾವೆಲ್ಲ ನಮ್ಮ ಸಮಾಜ ಸುಧಾರಕರನ್ನು ಸ್ಮರಿಸಬೇಕಾದ ಅಗತ್ಯತೆ ಇದೆ. ದೌರ್ಜನ್ಯಗಳು ತಾಂಡವವಾಡುತ್ತಿದ್ದಾಗ ಈ ಸಮುದಾಯಗಳ ಪಾಲಿಗೆ ಆಶಾಕಿರಣವಾಗಿ ಮೂಡಿ ಬಂದವರೆ ನಾರಾಯಣ ಗುರುಗಳು. ೧೯ನೇ ಶತಮಾನದ ಆ ಕಾಲದಲ್ಲಿ ಕುಸಿದು ಕುಳಿತಿದ್ದ ಜನತೆಯಲ್ಲಿ ಸ್ವಾಭಿಮಾನ ತುಂಬಿದರು. ಅವರಿಗೆಲ್ಲ ಅರಿವಿನ ಬೆಳಕು ತೋರಿದರು. ಮನುಷ್ಯನಾದವನಿಗೆ ಇರುವುದೊಂದೆ ಧರ್ಮ ಎಂದು ಅಂದೇ ಪ್ರತಿಪಾದಿಸಿದರು ಎಂದು ಶ್ರೀಕಾಂತ ಹೇಳಿದರು.

ತಹಸೀಲ್ದಾರ್ ಎಂ. ಕುಮಾರಸ್ವಾಮಿ ಮಾತನಾಡಿದರು.ಗ್ರೇಡ್-೨ ತಹಸೀಲ್ದಾರ್ ವಿಶ್ವೇಶ್ವರಯ್ಯ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟರ್, ತಾಲೂಕು ಅಧ್ಯಕ್ಷ ವೀರೇಶ ಮರ್ಲಾನಹಳ್ಳಿ, ಶ್ರಿಹರಿ, ಶರಣಪ್ಪ ಮೈಲಾಪುರ, ಉದಯಕುಮಾರ್ ಈಡಿಗೇರ್, ವೆಂಕಟೇಶ ಸೋಮನಾಳಕ್ಯಾಂಪ್, ವೆಂಕಟೇಶ ಈಡಿಗೇರ್, ನಾಗರಾಜ ಹಳೆಕೋಟೆ ಸೇರಿದಂತೆ ಇತರರು ಇದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌