ಭಕ್ತಿ ಇದ್ದಲ್ಲಿ ಮುಕ್ತಿ ಪ್ರಾಪ್ತಿ: ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ

KannadaprabhaNewsNetwork |  
Published : Mar 06, 2026, 03:15 AM IST
ನಾರವಿ | Kannada Prabha

ಸಾರಾಂಶ

ನಾರಾವಿ ಶ್ರೀ ಸೂರ್ಯನಾರಾಯಣ ದೇವರ ಬ್ರಹ್ಮಕಲಶೋತ್ಸವದ ಮೂರನೇ ದಿನವಾದ ಮಂಗಳವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವದಿಸಿದರು.

ಬೆಳ್ತಂಗಡಿ: ಭಕ್ತಿ ಇದ್ದಲ್ಲಿ ಮುಕ್ತಿ ಪ್ರಾಪ್ತವಾಗುತ್ತದೆ. ಸೂರ್ಯ ದೇವರ ಶಕ್ತಿ ಪ್ರತ್ಯಕ್ಷವಾಗಿರುವುದರಿಂದ ಅದು ಶ್ರೇಷ್ಠ ಮಾತ್ರವಲ್ಲದೆ ಚೈತನ್ಯಕರವೂ ಆಗಿದೆ ಎಂದು ಮೂಡಬಿದರೆಯ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ನುಡಿದರು.

ಅವರು ನಾರಾವಿ ಶ್ರೀ ಸೂರ್ಯನಾರಾಯಣ ದೇವರ ಬ್ರಹ್ಮಕಲಶೋತ್ಸವದ ಮೂರನೇ ದಿನವಾದ ಮಂಗಳವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವದಿಸಿದರು.

ಸೂರ್ಯದೇವ ನಮ್ಮೆಲ್ಲರ ಆರೋಗ್ಯ ಕಾಂತಿಗೆ, ಕೀರ್ತಿಗೆ ಕಾರಣ. ನಮ್ಮ ಸಮಾಜದ 16 ಸಮುದಾಯಗಳಿಗೆ ಸೇವೆ ಮಾಡಲು ಅವಕಾಶವಿರುವುದು ಜಾತ್ರೆಯಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಾತ್ರ. ಶಾಲೆಗಳು ಇರದ ಕಾಲದಲ್ಲಿ ದೇವಸ್ಥಾನಗಳು ಸಂಸ್ಕಾರ ಕೇಂದ್ರಗಳಾಗಿದ್ದವು ಎಂದರು.

ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ವಿನಯ ಹೆಗ್ಡೆ ವಹಿಸಿದ್ದರು.

ಮಾಜಿ ಸಚಿವರಾದ ವಿನಯಕುಮಾರ ಸೊರಕೆ, ಅಭಯಚಂದ್ರ ಜೈನ್, ವಕೀಲೆ ಶ್ವೇತಾ ಜೈನ್, ರಘುರಾಮ ಶೆಟ್ಟಿ ಮಾಳ, ನಿವೃತ್ತ ಅಧ್ಯಾಪಕ ಎಮ್.ಕೆ.ಅರಿಗ, ಪೆರಾಡಿ ಸಿ.ಎ.ಬ್ಯಾಂಕ್ ಅಧ್ಯಕ್ಷ ಸತೀಶ್ ಕೆ.ಕಾಶಿಪಟ್ಣ, ಪ್ರವೀಣ ಕುಮಾರ್ ಜೈನ್, ಪ್ರವೀಣ ಪಿಂಟೋ, ಸಂಜೀವ ಶೆಟ್ಟಿ, ನಿವೃತ್ತ ಪೋಲಿಸ್ ಅಧಿಕಾರಿ ಪೀತಾಂಬರ ಹೆರಾಜೆ, ಪೆರಾಡಿ ಸಿ.ಎ.ಬ್ಯಾಂಕ್ ನಿರ್ದೇಶಕ ರಾಜೇಶ್ ಶೆಟ್ಟಿ, ಸದಾನಂದ ಪೂಜಾರಿ, ದಿನೇಶ್ ಶೆಟ್ಟಿ, ಚಂದ್ರಶೇಖರ್ ಜಾರೋಡಿ, ನಾರಾವಿ ಭಾ.ಜೈನ್ ಮಿಲನ್ ಅಧ್ಯಕ್ಷ ಕಿಶೋರ್ ಕುಮಾರ್ ಕಂಠಾವು, ದಿನೇಶ್ ಶೆಟ್ಟಿ ಮಾಳ, ದೇವಳದ ಆಡಳಿತ ಮೊಕ್ತೇಸರ ರವೀಂದ್ರ ಪೂಜಾರಿ ಬಾಂದೊಟ್ಟು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ ಇದ್ದರು.

ಧರಣೇಂದ್ರ ಜೈನ್ ಸ್ವಾಗತಿಸಿದರು. ಸತೀಶ್ ಹೊಸ್ಮಾರ್ ಸ್ವಾಗತಿಸಿದರು.ಆನೆಗುಂದಿ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಬೆಳಿಗ್ಗೆ ದೇವಳಕ್ಕೆ ಭೇಟಿ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಯೋಗಾಸನ ನೃತ್ಯ, ಮಹಿಳಾ ಕುಣಿತ ಭಜನೆ ನಡೆದವು.

ಕೊಲ್ಲಿ ರಾಷ್ಟ್ರಗಳಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಲಕ್ಷಾಂತರ ನಮ್ಮ ಬಂಧುಗಳು ಅಲ್ಲಿದ್ದಾರೆ. ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಅಲ್ಲಿನವರ ಸುರಕ್ಷತೆಗೆ ನಾವೆಲ್ಲ ಸೂರ್ಯದೇವರಲ್ಲಿ ಪ್ರಾರ್ಥಿಸೋಣ. ಶಾಂತಿಯ ವಾತಾವರಣ ನಿರ್ಮಾಣವಾಗಿ ಸಾತ್ವಿಕ ಶಕ್ತಿ ವಿಜೃಂಭಿಸಲಿ.

। ಚಾರುಕೀರ್ತಿ ಭಟ್ಟಾರಕ ಶ್ರೀ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸನಾತನ ಪರೀಕ್ಷೆಗೊಳಗಾದ್ರೂ ಅಳಿಸಲಸಾಧ್ಯ: ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್
ಕೆನರಾ ಕಾಲೇಜಿಗೆ 2025-26ನೇ ಸಾಲಿನಿಂದ ಸ್ವಾಯತ್ತ ಸ್ಥಾನಮಾನ