ಚನ್ನಬಸವಸ್ವಾಮಿ ಸೌಹಾರ್ದ ಸಹಕಾರಿ ಬ್ಯಾಂಕ್‌ನ ಶಾಖೆ ಉದ್ಘಾಟನೆ

KannadaprabhaNewsNetwork | Published : Mar 13, 2025 12:49 AM

ಸಾರಾಂಶ

ಪಟ್ಟಣದ ಕೊಟ್ಟಾಲ್ ರಸ್ತೆಯ ಬಳಿ ಶ್ರೀ ಚನ್ನಬಸವಸ್ವಾಮಿ ಸೌಹಾರ್ದ ಸಹಕಾರಿ ಬ್ಯಾಂಕ್ ದ್ವೀತಿಯ ಶಾಖೆಯನ್ನು ಮಾಜಿ ಸಂಸದ ಶಿವರಾಮಗೌಡ ಹಾಗೂ ಮಾಜಿ ಶಾಸಕ ಪರಣ್ಣ ಮನವಳ್ಳಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಕಂಪ್ಲಿ

ಪಟ್ಟಣದ ಕೊಟ್ಟಾಲ್ ರಸ್ತೆಯ ಬಳಿ ಶ್ರೀ ಚನ್ನಬಸವಸ್ವಾಮಿ ಸೌಹಾರ್ದ ಸಹಕಾರಿ ಬ್ಯಾಂಕ್ ದ್ವೀತಿಯ ಶಾಖೆಯನ್ನು ಮಾಜಿ ಸಂಸದ ಶಿವರಾಮಗೌಡ ಹಾಗೂ ಮಾಜಿ ಶಾಸಕ ಪರಣ್ಣ ಮನವಳ್ಳಿ ಉದ್ಘಾಟಿಸಿದರು.

ಬ್ಯಾಂಕ್ ಅಧ್ಯಕ್ಷ ಗಿರಿಯಪ್ಪ ಹೊಸ್ಕೇರಿ ಮಾತನಾಡಿ, ₹99 ಕೋಟಿ ದುಡಿಯುವ ಬಂಡವಾಳ ಹೊಂದಿರುವ ಬ್ಯಾಂಕ್ ಗಂಗಾವತಿ ನಗರದಲ್ಲಿ 30 ವರ್ಷಗಳ ಅತ್ಯುತ್ತಮ ಸಾರ್ಥಕ ಸೇವೆ ನೀಡುತ್ತಿರುವ ಸಹಕಾರಿ ಠೇವಣಿ ವಿಮೆಗೊಳಪಟ್ಟ ಬ್ಯಾಂಕ್ ಆಗಿದೆ. ಗಂಗಾವತಿಯಲ್ಲಿ ಪ್ರಧಾನ ಕಚೇರಿ ಜೊತೆಗೆ ಕಾರಟಗಿ ಹಾಗೂ ಕಂಪ್ಲಿ ಒಟ್ಟಾರೆ 2 ಶಾಖೆಗಳನ್ನು ಹೊಂದಿದೆ. ಆರ್.ಬಿ.ಐ ಗೈಡ್ ಲೈನ್ಸ್ ಪ್ರಕಾರ ಸಾಲ ಅಲ್ಲದೇ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುವಲ್ಲಿ ಸಿ.ಬಿ.ಎಸ್. ಬ್ಯಾಂಕ್ ಮುಂಚೂಣಿಯಲ್ಲಿದೆ. ನಗರ ಪ್ರದೇಶಗಳಲ್ಲಿ ಸಿಗತಕ್ಕ ಸೇವೆಗಳನ್ನು ಜನರಿಗೆ ಒದಗಿಸುವ ಉದ್ದೇಶದಿಂದ ಮತ್ತು ಅವರ ಬೇಡಿಕೆಗಳಿಗೆ ಅನುಗುಣವಾಗಿ ನಮ್ಮ ಬ್ಯಾಂಕಿನ ಮುಖಾಂತರ ಒಂದೇ ಸೂರಿನಡಿ ವಿವಿಧ ಆರ್ಥಿಕ ಸೇವೆಗಳನ್ನು ಒದಗಿಸಲಾಗಿದೆ. ಈ ನಿಟ್ಟಿನಲ್ಲಿ ಸಾಲಗಳ ಮೇಲೆ ಸ್ಪರ್ಧಾತ್ಮಕ ಬಡ್ಡಿದರಗಳ ಬಂಗಾರ ಆಭರಣದ ಸಾಲ, ವಾಹನ ಸಾಲ, ಆಸ್ತಿ ಅಡಮಾನ ಸಾಲ, ಗೋದಾಮು ಸಾಲ, ವೈಯಕ್ತಿಕ ವೇತನ ಆಧಾರಿತ ಸಾಲ ಸೌಲಭ್ಯಗಳ ಜೊತೆಗೆ ಇತ್ಯಾದಿ ಸೇವೆಗಳನ್ನು ಬ್ಯಾಂಕ್ ಒದಗಿಸುತ್ತಿದೆ ಎಂದರು.

ಈ ಸಂದರ್ಭ ಬ್ಯಾಂಕಿನ ಉಪಾಧ್ಯಕ್ಷ ಪನ್ನಲಾಲ್ ಸುರಾನಾ, ನಿರ್ದೇಶಕರಾದ ಕೆ.ಕಾಳಪ್ಪ, ರಾಚಪ್ಪ ಸಿದ್ದಾಪುರ, ರಮೇಶ ಗೌಳಿ, ಬಸವರಾಜ ವೀರಶೆಟ್ಟಿ, ವೃತ್ತಿಪರ ನಿರ್ದೇಶಕ ಸಿಎ ಕೆ.ವಿನಯಕುಮಾರ, ಪ್ರಧಾನ ಕಚೇರಿ ಗಂಗಾವತಿ ಶಾಖೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಾಗೇಶ ಗೌಳಿ, ಕಂಪ್ಲಿ ಶಾಖೆಯ ವ್ಯವಸ್ಥಾಪಕ ಶ್ಯಾಮ್ ಸಿಂಗ್, ಪಟ್ಟಣದ ಮುಖಂಡರಾದ ಕೆ.ಎಂ. ಹೇಮಯ್ಯ ಸ್ವಾಮಿ, ಶ್ರೀಧರ ಶ್ರೇಷ್ಠಿ, ಬಿ.ಬಿ. ರವೀಂದ್ರ, ಪ್ರಸಾದ ಗಡಾದ ಸೇರಿದಂತೆ ಶಾಖೆಯ ಸಿಬ್ಬಂದಿ ವರ್ಗದವರಿದ್ದರು.

Share this article