ಕನ್ನಡಪ್ರಭ ವಾರ್ತೆ ಹಲಗೂರು
ಹಲಗೂರಿನ ಅಂಬೇಡ್ಕರ್ ಭವನದಲ್ಲಿ ಚುಟುಕು ಸಾಹಿತ್ಯ ಪರಿಷತ್ ಮಳವಳ್ಳಿ ಘಟಕದಿಂದ 71ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ ಮಾತನಾಡಿದರು.
ಸಾಹಿತಿ ಮ.ಸಿ.ನಾರಾಯಣ ಮಾತನಾಡಿ, ಚುಟುಕು ಎಂದರೆ ಕಡಿಮೆ ಪದಗಳಲ್ಲಿ ದೊಡ್ಡ ಅರ್ಥ ಕಟ್ಟಿಕೊಡುವ ಅದ್ಭುತ ಸಾಹಿತ್ಯ ಪ್ರಕಾರ. ನಾಲ್ಕು ಸಾಲುಗಳಲ್ಲಿ ಸಮಾಜದ ಸಮಸ್ಯೆ, ಮಾನವೀಯ ಮೌಲ್ಯ, ಬದುಕಿನ ಅನುಭವ, ರಾಜಕೀಯ ವಿಡಂಬನೆ ಹಾಗೂ ಜೀವನದ ಸತ್ಯಗಳನ್ನು ಪರಿಣಾಮಕಾರಿಯಾಗಿ ಹೇಳುವ ಶಕ್ತಿ ಚುಟುಕು ಸಾಹಿತ್ಯಕ್ಕಿದೆ ಎಂದರು.ಸಾಹಿತಿ ಮಾತನಾಡಿ, ಸುಂದ್ರಪ್ಪ ಚುಟುಕು ಸಾಹಿತ್ಯ ಉಳಿಯಬೇಕಾದರೆ ಕೇವಲ ಹಿರಿಯ ಸಾಹಿತಿಗಳ ಪ್ರಯತ್ನ ಸಾಲದು. ಯುವ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಶಾಲಾ-ಕಾಲೇಜುಗಳಲ್ಲಿ ಚುಟುಕು ರಚನಾ ಸ್ಪರ್ಧೆ ಆಯೋಜಿಸಬೇಕು. ಗ್ರಾಮೀಣ ಪ್ರದೇಶಗಳ ಪ್ರತಿಭಾವಂತ ಕವಿಗಳಿಗೆ ವೇದಿಕೆ ಕಲ್ಪಿಸಬೇಕು. ಸಾಹಿತ್ಯ ಸಮ್ಮೇಳನಗಳು, ಕವಿಗೋಷ್ಠಿಗಳು ಮತ್ತು ಚುಟುಕು ಕವಿಗೋಷ್ಠಿಗಳ ಮೂಲಕ ಹೊಸ ಪ್ರತಿಭೆಗಳನ್ನು ಬೆಳೆಸಬೇಕು ಎಂದರು.
ಈ ವೇಳೆ ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಲ್.ಚೇತನ್ ಕುಮಾರ್, ಸಾಹಿತಿಗಳಾದ ಪಿ.ಸುಂದ್ರಪ್ಪ, ಬಸಪ್ಪ ನೆಲಮಾಕನಹಳ್ಳಿ, ಮ.ಸಿ.ನಾರಾಯಣ, ನಾಗವೇಣಿ ರುದ್ರಸ್ವಾಮಿ, ಸಾಹಿತ್ಯಶಕ್ತರಾದ ಎಚ್.ಕೆ.ಮೂರ್ತಿ, ವೀರಣ್ಣಗೌಡ, ಎಚ್.ಆರ್.ಪದ್ಮನಾಭ್ ಸಿದ್ದಪ್ಪಾಜಿ, ಅಭಿಜಿತ್ ಬಸವರಾಜು, ನಂದೀಪುರ ಕುಮಾರ್, ಶಿಕ್ಷಕರಾದ ಜಿ.ಎಸ್.ಕೃಷ್ಣ, ಉಷಾ ಸೇರಿದಂತೆ ಹಲವರು ಭಾಗವಹಿಸಿದ್ದರು.