ಧರ್ಮ ಶಿಕ್ಷಣದಿಂದ ಮಕ್ಕಳ ಭವಿಷ್ಯ ಉಜ್ವಲ: ಪುಣ್ಯಸಾಗರ ಮಹಾರಾಜರು

KannadaprabhaNewsNetwork |  
Published : May 23, 2026, 02:30 AM IST
ಹುಬ್ಬಳ್ಳಿ ತಾಲೂಕಿನ ವರೂರು ನವಗ್ರಹ ತೀರ್ಥ ಕ್ಷೇತ್ರದಲ್ಲಿ ಗುರುವಾರ ಜೈನ ಸಂಸ್ಕಾರ ಶಿಬಿರ ಸಮಾರೋಪ ಸಮಾರಂಭ ನೆರವೇರಿತು. | Kannada Prabha

ಸಾರಾಂಶ

ಭಾರತದಲ್ಲಿ ಧರ್ಮವಿದೆ. ಕ್ಷಮಾಗುಣ, ನಯ, ವಿನಯವಿದೆ. ಬೇರೆ ದೇಶದಲ್ಲಿ ಧರ್ಮವಿಲ್ಲ ಎಂದ ಅವರು, ಮಕ್ಕಳಿಗೆ ಧರ್ಮದ ಸಂಸ್ಕಾರ ನೀಡಿದಾಗ ಮಾತ್ರ ಉತ್ತಮ ಮಾರ್ಗದಲ್ಲಿ ನಡೆಯಲಿದ್ದಾರೆ. ಸಂಸ್ಕಾರ ಅಜ್ಞಾನದಿಂದ ದೂರ ಮಾಡಿ ಜ್ಞಾನಕ್ಕೆ ಕಾರಣ ಆಗುತ್ತದೆ.

ಹುಬ್ಬಳ್ಳಿ:

ಆಧುನಿಕ ಯುಗದಲ್ಲಿ ಸಂಸ್ಕಾರದಿಂದ ಮಕ್ಕಳು ದೂರ ಉಳಿದಿದ್ದು ಅವರಿಗೆ ಸಂಸ್ಕಾರ ನೀಡುವ ಕಾರ್ಯವಾಗಬೇಕಿದೆ ಎಂದು ಆಚಾರ್ಯ ಸರಳ ಸ್ಫೂರ್ತಿ ಸಿದ್ಧಾಂತಯೋಗಿ ಪುಣ್ಯಸಾಗರ ಮಹಾರಾಜರು ಹೇಳಿದರು.

ತಾಲೂಕಿನ ವರೂರು ಗ್ರಾಮದ ನವಗ್ರಹ ತೀರ್ಥ ಕ್ಷೇತ್ರದ ವತಿಯಿಂದ 9 ದಿನ ವರೂರು ನವಗ್ರಹ ತೀರ್ಥ ಕ್ಷೇತ್ರದಲ್ಲಿ ಗುರುವಾರ ನಡೆದ ಜೈನ ಸಂಸ್ಕಾರ ಶಿಬಿರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಭಾರತದಲ್ಲಿ ಧರ್ಮವಿದೆ. ಕ್ಷಮಾಗುಣ, ನಯ, ವಿನಯವಿದೆ. ಬೇರೆ ದೇಶದಲ್ಲಿ ಧರ್ಮವಿಲ್ಲ ಎಂದ ಅವರು, ಮಕ್ಕಳಿಗೆ ಧರ್ಮದ ಸಂಸ್ಕಾರ ನೀಡಿದಾಗ ಮಾತ್ರ ಉತ್ತಮ ಮಾರ್ಗದಲ್ಲಿ ನಡೆಯಲಿದ್ದಾರೆ. ಸಂಸ್ಕಾರ ಅಜ್ಞಾನದಿಂದ ದೂರ ಮಾಡಿ ಜ್ಞಾನಕ್ಕೆ ಕಾರಣ ಆಗುತ್ತದೆ. ಶಿಬಿರದಲ್ಲಿ ಧರ್ಮ, ಆಚಾರ, ಯಾವ ಆಹಾರ ಸೇವಿಸಬೇಕು, ಅಹಿಂಸೆ, ಪಾಪದ ಬಗ್ಗೆ ಕಲಿಸಿಕೊಡಲಾಗುತ್ತಿದೆ ಎಂದರು.

ಮಕ್ಕಳಿಗೆ ಜೀವನ ಶೈಲಿ ಮುಖ್ಯ. ಮಕ್ಕಳು ಎಷ್ಟೇ ದಡ್ಡರಿದ್ದರೂ ಧಾರ್ಮಿಕ ಶಿಕ್ಷಣ ನೀಡಿದರೆ ಉತ್ತಮ ಅಂಕ ಗಳಿಸಲು ಸಾಧ್ಯ. ಧರ್ಮ ಶಿಕ್ಷಣದಿಂದ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದರು.

ಸೋಂದಾ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಉತ್ತಮ ದೇಶ ನಿರ್ಮಾಣಕ್ಕೆ ಸಂಸ್ಕಾರ ಅವಶ್ಯಕವಾಗಿದೆ. ಉತ್ತಮ ಸಂಸ್ಕಾರವಿಲ್ಲದೇ ದೇಶ ಅಭಿವೃದ್ಧಿ ಅಸಾಧ್ಯ. ಉತ್ತಮ ಸಂಸ್ಕಾರದಿಂದ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿ ರೂಪಗೊಳ್ಳಲಿದೆ. ನಾವು ಸರಿಯಾದ ಮಾರ್ಗದಲ್ಲಿ ನಡೆಯಬೇಕಾದರೆ ಸಂಸ್ಕಾರ ಮುಖ್ಯ. ದೇಶ ಸದೃಢವಾಗಿ ನಿರ್ಮಿಸಲು ವಿದ್ಯೆಪ್ರಾಪ್ತಿ ವಿಧಾನ ಕ್ಷೇತ್ರದಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದರು.

ಸ್ವಸ್ತಿ ಶ್ರೀಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಮಾತನಾಡಿ, ಬೇಸಿಗೆ ಸಮಯದಲ್ಲಿ ಮೊಬೈಲ್‌ನಲ್ಲಿ ಕಳೆಯುವ ಮಕ್ಕಳಿಗೆ ಇಲ್ಲಿ ಶಿಬಿರ ಆಯೋಜಿಸುವ ಮೂಲಕ 9 ದಿನ ಧರ್ಮ, ಪೂಜೆ, ಪುನಸ್ಕಾರ, ಶಿಕ್ಷಣ, ಸಂಸ್ಕಾರ ನೀಡುವ ಕೆಲಸ ಮಾಡಲಾಗಿದೆ. ವಿದ್ಯಾರ್ಥಿಗಳು ಯಶಸ್ಸು ಕಾಣಲು ಗುರುಗಳ ಆಶೀರ್ವಾದ ಬೇಕು. ಮಕ್ಕಳಿಗೆ ಸಂಸ್ಕಾರ ನೀಡುವ ಅವಶ್ಯಕತೆ ಇದೆ. ಗುರುಕುಲ ಪದ್ಧತಿ ಮಹತ್ವದ್ದಾಗಿದೆ ಎಂದರು.

ಮೇ 13ರಿಂದ 21ರ ವರೆಗೆ (9 ದಿನ) ಕಾಲ ನಡೆದ ಬೇಸಿಗೆ ಜೈನ ಸಂಸ್ಕಾರ ಶಿಬಿರದಲ್ಲಿ 500 ಮಕ್ಕಳು ಭಾಗವಹಿಸಿ ಸದುಪಯೋಗ ಪಡೆದುಕೊಂಡರು. ಶ್ರೀಮಂತ ಉಪಾಧ್ಯೆ, ಎಸ್.ಪಿ. ನವಲಗುಂದ, ದೇವೆಂದ್ರಪ್ಪ ಕಾಗೇನವರ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಸ್ವಾಸ್ಥ್ಯಕ್ಕೆ ತತ್ವಜ್ಞಾನ ಚಿಂತನೆ ಅಗತ್ಯ: ಡಾ. ಶರತ್‌ ರಾವ್‌
ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಪನ್ನ