ತೇಜಸ್ವಿ ಕಾದಂಬರಿಗಳು ಆಸಕ್ತಿ ಹುಟ್ಟಿಸುತ್ತವೆ: ಪ್ರಸಾದ್ ಕುಂದೂರು

KannadaprabhaNewsNetwork |  
Published : Apr 19, 2024, 01:01 AM IST
25 | Kannada Prabha

ಸಾರಾಂಶ

ಮನುಷ್ಯ ಹೆಚ್ಚು ನೈತಿಕವಾಗಿ ಬಾಳಲು ನೆಲ, ಕಾಡು, ಹಸಿರು, ಕೆಸರು ಕೊಡುವಷ್ಟು ಪಾಲು ನಗರ, ಮಹಾನಗರಗಳು ಇವತ್ತು ಕೊಡಲಾರವು. ಮೋಸ, ವಂಚನೆ, ಹುಸಿ ನಗುಗಳಿಗೆ ಹೆಚ್ಚು ಅವಕಾಶ ಮಾಡಿ ಕೊಡುತ್ತದೆ. ಅಲ್ಲಿ ಮನುಷ್ಯ ಹೆಚ್ಚು ಮಾತನಾಡಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಪೂರ್ಣಚಂದ್ರ ತೇಜಸ್ವಿ ಅವರು ಪ್ರತಿ ಕಾದಂಬರಿಯೂ ಬಹಳ ನಿಗೂಢವಾಗಿದೆ. ಅವು ಓದುಗರಿಗೆ ಆಸಕ್ತಿ ಹುಟ್ಟಿಸುವ ಜೊತೆಗೆ ಸುಲಭವಾಗಿ ಅರ್ಥವಾಗುವುದರಿಂದ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಓದಬೇಕು ಎಂದು ರಂಗಕರ್ಮಿ ಪ್ರಸಾದ್ ಕುಂದೂರು ಹೇಳಿದರು.

ನಗರದ ಒಡನಾಡಿ ಸೇವಾ ಸಂಸ್ಥೆಯು ಗುರುವಾರ ಆಯೋಜಿಸಿದ್ದ ಪ್ರಚಲಿತ ವಿದ್ಯಮಾನದಲ್ಲಿ ತೇಜಸ್ವಿ ಚಿಂತನೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯನ ದುರಾಸೆಯ ಕುರಿತು ತೇಜಸ್ವಿ ಅವರು ಆಡಿದ್ದ ಮಾತು ಇಂದಿಗೂ ಪ್ರಸ್ತುತವಾಗಿದೆ. ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ತೇಜಸ್ವಿ ಅವರು ಬದುಕಿದ್ದು ದಟ್ಟ ಕಾಡಿನ ನಡುವೆಯೇ ಎಂಬುದನ್ನು ಮರೆಯಬಾರದು ಎಂದರು.

ಮನುಷ್ಯ ಹೆಚ್ಚು ನೈತಿಕವಾಗಿ ಬಾಳಲು ನೆಲ, ಕಾಡು, ಹಸಿರು, ಕೆಸರು ಕೊಡುವಷ್ಟು ಪಾಲು ನಗರ, ಮಹಾನಗರಗಳು ಇವತ್ತು ಕೊಡಲಾರವು. ಮೋಸ, ವಂಚನೆ, ಹುಸಿ ನಗುಗಳಿಗೆ ಹೆಚ್ಚು ಅವಕಾಶ ಮಾಡಿ ಕೊಡುತ್ತದೆ. ಅಲ್ಲಿ ಮನುಷ್ಯ ಹೆಚ್ಚು ಮಾತನಾಡಬೇಕಾಗುತ್ತದೆ. ತೇಜಸ್ವಿ ಹಾಗಲ್ಲ, ಅವರು ಹೆಚ್ಚು ಮಾತನಾಡಿದ್ದು, ಬಾಳಿದ್ದು ಕೀಟ, ಪತಂಗ, ನಾಯಿ, ಮೀನು, ಹಕ್ಕಿ, ಉಡ, ಇರುವೆಗಳೊಂದಿಗೆ. ಇವರು ತನ್ನದೇ ಆದ ಪ್ರಪಂಚವನ್ನು ಪರಿಸರಕ್ಕೆ ಮೈಗೂಡಿಸಿಕೊಂಡು ಜೀವಜಾಲದ ಬಗ್ಗೆ ಚಿಂತನೆ ಮಾಡಿದ್ದಾಗಿ ಅವರು ಹೇಳಿದರು.

ಎಂ.ಎ ಪದವಿ ವ್ಯಾಸಂಗ ಮಾಡಿದ್ದರೂ, ತಂದೆಯ ಹಿನ್ನೆಲೆ ಇದ್ದರೂ ಯಾವುದೇ ಸರ್ಕಾರಿ ಹುದ್ದೆಗೆ ಆಸಕ್ತಿ ತೋರದೆ ಮೂಡಿಗೆರೆ ತಾಲೂಕಿನ ಕಾಫಿ ಎಸ್ಟೇಟ್ ಮಾಲೀಕರಾಗಿ ಸ್ವತಂತ್ರ ಜೀವನ ಸಾಗಿಸಿದ್ದರು. ವ್ಯವಸಾಯ. ಛಾಯಾಗ್ರಹಣ ಮತ್ತು ಬೇಟೆಯಲ್ಲಿ ಅವರಿಗೆ ಆಸಕ್ತ ಇತ್ತು. ತೇಜಶ್ವಿ ಅವರಿಗೆ ಬಹಳ ಉತ್ತಮವಾದ ತಿಳುವಳಿಕೆುಂನ್ನು ಹೊಂದಿರುವುದರ ಜೊತೆಗೆ ಅವರ ಕಣ್ಣಿಗೆ ಬಿದ್ದಂತಹ ಹಕ್ಕಿಗಳ ಬಗ್ಗೆ ತಿಳಿದು ಅದರ ಬಗ್ಗೆಯೂ ಹೆಚ್ಚಾಗಿ ಬರೆಯುತ್ತಿದ್ದಾಗಿ ಅವರು ತಿಳಿಸಿದರು.

ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮಾತನಾಡಿ, ಮಕ್ಕಳಿಗೆ ವಿಜ್ಞಾನ ಗಣಿತ ಇಂತಹ ವಿಷಯ ಮಕ್ಕಳ ಮುಂದೆ ಪಾಂಡಿತ್ಯ ಪ್ರದರ್ಶಿಸದೆ ಮಕ್ಕಳಿಗೆ ಕಥೆಹೇಳುವ ಮೂಲಕ ತಿಳಿಸುವ ಕೆಲಸ ಮಾಡಿದರೆ ಅದು ವಿದ್ಯಾರ್ಥಿಗಳಿಗೆ ಅರ್ಥ ಆಗುತ್ತದೆ ಎಂದರು.

ಭಾಷೆ ವಿಚಾರದಲ್ಲಿ ಯಾರೇ ಮಾತಾನಾಡಿದರೂ ಸಹಿಸುತ್ತಿರಲಿಲ್ಲ. ಕರ್ನಾಟಕ ದಲ್ಲಿ ನೇರವಾದ ಮುಗ್ಧವಾದ ಸರಳತೆಯಿ ವ್ಯಕ್ತಿತ್ವ. ಹಾಗೂ ವಿದ್ವತ್ತ ವ್ಯಕ್ತಿತ್ವ ಹೊಂದಿದ್ದರು. ಪ್ರಕೃತಿಗೆ ಮನುಷ್ಯ ಮುಖ್ಯವಲ್ಲ ಮನುಷ್ಯನಿಗೆ ಪ್ರಕೃತಿ ತುಂಬಾ ಮುಖ್ಯ ಆಗಿತ್ತು ಎಂದರು.

ಕಾರ್ಯಕ್ರಮದಲ್ಲಿ ಪರಶುರಾಮ್ ಹಾಗೂ ಒಡನಾಡಿ ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ