ಕನ್ನಡಪ್ರಭ ವಾರ್ತೆ ಪರಶುರಾಂಪುರ
ಇಂದಿನ ಸಮೂಹ ಮಾಧ್ಯಮಗಳ ಸೆಳೆತ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಪ್ರಭಾವದಿಂದ ನಮ್ಮ ಮಕ್ಕಳು ನಮ್ಮ ದೇಶ ಸಂಸ್ಕೃತಿಯ ಸಂಪ್ರದಾಯದ ಪರಂಪರೆಯ ಕುರಿತು ತಾತ್ಸರ ಮನೋಭಾವನೆ ಹೊಂದಿದ್ದಾರೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಜನಪದ ಕಲಾವಿದರು ಮೌಕಿಕ ಹಾಡುತ್ತಾ ಬಂದ ಗೀತೆಗಳನ್ನು ನವ ಸಾಹಿತಿಗಳು ಬರವಣಿಗೆಯ ರೂಪದಲ್ಲಿ ದಾಖಲಿಸುವ ಕೆಲಸ ಮಾಡಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. ಚಳ್ಳಕೆರೆ ತಾಲೂಕು ಎಲಗಟ್ಟೆ ಗೊಲ್ಲರಟ್ಟಿಯ ದಿವಂಗತ ನಾಡೋಜೆ ಜನಪದ ಸಿರಿ ಸಿರಿಯಜ್ಜಿ ಅವರ ಜನಪದ ಹಾಡುಗಳನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬೆಳಗೆರೆ ಕೃಷ್ಣ ಶಾಸ್ತ್ರಿಗಳು, ಸಾಹಿತಿ ಹನೂರು ಕೃಷ್ಣಮೂರ್ತಿ, ಅಂದಿನ ಮುಖ್ಯಮಂತ್ರಿ ಗುಂಡೂರಾಯರು, ರಾಮಕೃಷ್ಣ ಹೆಗಡೆ ಅವರ ಸಮ್ಮುಖದಲ್ಲಿ ಹಾಡಿಸಿದ್ದರು ಎಂದು ತಿಳಿಸಿದರು.
ಈಚೆಗೆ ಪ್ರಾಧ್ಯಾಪರಕರಾದ ಮೀರಾಸಾಬಿಹಳ್ಳಿ ಶಿವಣ್ಣ, ಮೈಸೂರು ಹಾವನೂರು ಕೃಷ್ಣಮೂರ್ತಿ, ಕಲಮರಹಳ್ಳಿ ಮತ್ತು ಮಲ್ಲಿಕಾರ್ಜುನ ಅವರು ಕೂಡ ಜಾನಪದ ಸಿರಿ ಸಿರಿಯಜ್ಜಿ ಹಾಡುವ ಜನಪದ ಗೀತೆಗಳು, ಸಾವಿರದ ಸಿರಿ ಬೆಳಗು, ಜುಂಜಪ್ಪನ ಪದಗಳು, ಹಾಗೂ ಕಾಡುಗೊಲ್ಲರ ಸಾಂಸ್ಕೃತಿಕ ವೀರರ ಪದಗಳು ದಾಖಲಿಸಿಕೊಂಡು ಪುಸ್ತಕಗಳ ರೂಪದಲ್ಲಿ ಹೊರತಂದಿದ್ದಾರೆ.ಸರ್ಕಾರ ಆಯಾ ಪ್ರದೇಶದ ಜನಪದ ಕಲಾವಿದರು ಹಾಡುವ ಜನಪದ ಗೀತೆಗಳು ಜನಪದ ಕಲೆಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಿಕೊಂಡು ಮಕ್ಕಳಿಗೆ ಮಾರ್ಗದರ್ಶನ ಮಾಡಿ ಶಾಲೆಗಳಲ್ಲೂ ಜನಪದ ಕಲಾವಿದರನ್ನು ಕರೆಸಿ ಶಾಲೆಯ ಮಕ್ಕಳಿಗೆ ಜನಪದ ಕಲಿಸಿ, ತಿಳಿಸಿ, ಉಳಿಸಿ ಬೆಳೆಸಬೇಕು. ಪರಶುರಾಮಪುರ ಗ್ರಾಮದ ಚಿತ್ತಯ್ಯ, ತಿಮ್ಮಯ್ಯ, ಪಿಲ್ಲಹಳ್ಳಿ ಸಿ. ಚಿತ್ರ ಲಿಂಗಪ್ಪ, ಹೇಮದಳ ರಾಜಣ್ಣ, ಕೊರ್ಲಕುಂಟೆ ತಿಪ್ಪೇಸ್ವಾಮಿ, ದಯಾನಂದಮೂರ್ತಿ ಮತ್ತು ವಿವಿಧ ಜನಪದ ಕಲಾತಂಡಗಳ ಕಲಾವಿದರು ಸರ್ಕಾರಕ್ಕೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.