ಮಾನವೀಯ ಮೌಲ್ಯ ತುಂಬುವ ಕಥಾ ಸಂಕಲನ ಹೊರತನ್ನಿ

KannadaprabhaNewsNetwork |  
Published : Mar 23, 2026, 02:30 AM IST
ಪೋಟೊ22ಕೆಎಸಟಿ1: ಕುಷ್ಟಗಿ ಪಟ್ಟಣದ ಹೊಳಿಯಮ್ಮ ಮಹಿಳಾ ಪದವಿ ಕಲಾ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತು, ಸಹಯೋಗದಲ್ಲಿ ಸಾಹಿತಿ ಬೀರಪ್ಪ ಕಡ್ಲಿಮಟ್ಟಿ ಅವರ ಬೆಳಗಿನ ಬುತ್ತಿ ಎಂಬ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮವನ್ನು ಶಾಸಕ ದೊಡ್ಡನಗೌಡ ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಾಹಿತಿಗಳ ಪುಸ್ತಕಗಳು ಕೇವಲ ಬಿಡುಗಡೆಗೆ ಮಾತ್ರ ಸೀಮಿತಗೊಳ್ಳದೆ ಅವುಗಳನ್ನು ಓದುವ ಆಸಕ್ತಿ ಬೆಳೆಸಿಕೊಳ್ಳಬೇಕಿದೆ

ಕುಷ್ಟಗಿ: ಸಾಹಿತಿಗಳು ಕೇವಲ ಕವಿ ಹೃದಯಿಯಾಗಿರದೇ ಮಾನವೀಯತೆಯ ಹೃದಯ ಹೊಂದಬೇಕು, ಜನಸಾಮಾನ್ಯರಲ್ಲಿ ಮಾನವೀಯ ಮೌಲ್ಯ ತುಂಬುವಂತಹ ಕಥಾ ಸಂಕಲನ ಹೊರಗಡೆ ತರಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಪಟ್ಟಣದ ಮಾತೋಶ್ರೀ ಹೊಳಿಯಮ್ಮ ಮಹಿಳಾ ಪದವಿ ಕಲಾ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತು, ಸಹಯೋಗದಲ್ಲಿ ನಡೆದ ಸಾಹಿತಿ ಬೀರಪ್ಪ ಕಡ್ಲಿಮಟ್ಟಿ ಅವರ ಬೆಳಗಿನ ಬುತ್ತಿ ಎಂಬ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಹಿತಿಗಳು ಕವನ ಸಂಕಲನಕ್ಕೆ ಸೀಮಿತಗೊಳ್ಳದೆ ಕಥಾ ಸಂಕಲನ ಪ್ರಕಟಿಸಲು ಮುಂದಾಗಬೇಕು ಎಂದರು.

ಸಾಹಿತಿಗಳ ಪುಸ್ತಕಗಳು ಕೇವಲ ಬಿಡುಗಡೆಗೆ ಮಾತ್ರ ಸೀಮಿತಗೊಳ್ಳದೆ ಅವುಗಳನ್ನು ಓದುವ ಆಸಕ್ತಿ ಬೆಳೆಸಿಕೊಳ್ಳಬೇಕಿದೆ, ಇಂದಿನ ಆಧುನಿಕ ದಿನಗಳಲ್ಲಿ ಮೊಬೈಲ್ ಬಳಕೆ ಅತಿಯಾಗುತ್ತಿದ್ದು ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂದರು.

ಜಿಪಂ ಮುಖ್ಯ ಲೆಕ್ಕಾಧಿಕಾರಿ ಅಮೀನಸಾಬ್‌ ಅತ್ತಾರ ಮಾತನಾಡಿ, ಶಿಕ್ಷಕ ಬೀರಪ್ಪ ಕಡ್ಲಿಮಟ್ಟಿ ಬರೆದಿರುವ ಬೆಳಗಿನ ಬುತ್ತಿ ಎಂಬ ಕವನ ಸಂಕಲನ ಎಲ್ಲ ಜಾತಿ ಮತ ಪಂಥ ಮೀರಿ ನಿಂತಿದೆ.ಈ ಪುಸ್ತಕದಲ್ಲಿ ಎಲ್ಲರನ್ನು ಒಳಗೊಂಡಂತೆ ಕವಿತೆ ರಚಿಸಿಕೊಟ್ಟಿದ್ದಾರೆ. ಇನ್ನೂ ಹೆಚ್ಚೆಚ್ಚು ಸಾಹಿತ್ಯ ಬರೆಯಲು ಮುಂದಾಗಬೇಕು, ಸಾಹಿತ್ಯದಿಂದ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಿದೆ ಜೀವನದಲ್ಲಿ ಹೊಸ ಉತ್ಸಾಹ ಮೂಡಲಿದೆ ಎಂದು ತಿಳಿಸಿದರು.

ಹಿರಿಯ ಸಾಹಿತಿ ನಾಗರಾಜ ನಾಡಗೌಡರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಹಿತ್ಯಗಳು ಬಹಳಷ್ಟು ಜನ ಹೊರ ತರುತ್ತಿರುವುದು ಸಂತಸವಾದರೆ ಕನ್ನಡ ಶಾಲೆಗಳು ಮುಚ್ಚುತ್ತಿರುವುದು ದುರಂತದ ಸಂಗತಿಯಾಗಿದೆ. ಲಕ್ಷಾಂತರ ಸಾಲ ಸೋಲ ಮಾಡುವ ಮೂಲಕ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಾತಿ ಮಾಡುತ್ತಿರುವುದು ವಿಪರ್ಯಾಸವಾಗಿದೆ. ನಾವು ಕನ್ನಡಿಗರಾಗಿ ಮಾತೃ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಕಲಿಸಬೇಕು ನಮ್ಮ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳಿಗೆ ಜೀವ ಕಳೆ ತುಂಬಬೇಕಿದೆ ಎಂದರು.

ಈ ಸಂದರ್ಭದಲ್ಲಿ ಬಿಇಓ ಉಮಾದೇವಿ ಬಸಾಪುರ, ಹಕ್ಕಬುಕ್ಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹನಮಂತಪ್ಪ ಚೌಡ್ಕಿ, ಕಸಾಪ ಅಧ್ಯಕ್ಷ ಲೆಂಕಪ್ಪ ವಾಲಿಕಾರ, ಚುಸಾಪ ಅಧ್ಯಕ್ಷ ಮಹೇಶ ಹಡಪದ, ಚಂದಪ್ಪ ಹಕ್ಕಿ, ಡಾ.ನಿಂಗಪ್ಪ ಕಂಬಳಿ, ವೆಂಕಟೇಶ ಗೌಡರ, ನಾಗಪ್ಪ ಬಿಳಿಯಪ್ಪನವರು, ಶರಣಪ್ಪ ಗುಳೇದ, ಚಂದಪ್ಪ ಗುಡಿಮನಿ, ಮಲ್ಲಪ್ಪ ಕುದರಿ, ಶಾಂತಮ್ಮ ಕಡ್ಲಿಮಟ್ಟಿ, ನಿಂಗಪ್ಪ ಗುನ್ನಾಳ, ಪತ್ರಕರ್ತ ಸಂಘದ ಅಧ್ಯಕ್ಷ ಪವಾಡೆಪ್ಪ ಚೌಡ್ಕಿ, ನಟರಾಜ ಸೋನಾರ, ಜೀವನಸಾಬ್‌ ಬಿನ್ನಾಳ, ನೀಲನಗೌಡ ಹೊಸಗೌಡ್ರ, ಎಸ್.ಜಿ.ಕಡೆಮನಿ, ಬೀರಪ್ಪ ಕುರಿ, ಮಲ್ಲಿಕಾರ್ಜುನ ಲಕ್ಕಲಕಟ್ಟಿ, ಮಲ್ಲಪ್ಪ ಹೆಬ್ಬಾಳ, ಮಲ್ಲಮ್ಮ ಚನ್ನಪ್ಪನವರು, ಗೌರಮ್ಮ ತಳವಾರ, ಧರ್ಮಣ್ಣ ಬಿಂಗಿ, ಬಸವರಾಜ ಗುರಿಕಾರ, ಮಂಜುನಾಥ ಮಹಾಲಿಂಗಪುರ, ಜಯದೇವಿ ಉಪ್ಪಿನ್, ಬಸವರಾಜ ಶಿರೂರ, ಮಂಜುನಾಥ ಗುಳೇದಗುಡ್ಡ, ಯಮನಪ್ಪ ಹೂಗಾರ, ಹನಮಂತಪ್ಪ ಹೂಗಾರ, ಶಕುಂತಲಾ ಕಡ್ಲಿಮಟ್ಟಿ, ನಾಗೇಶ, ಬಸವರಾಜ ದ್ಯಾವಣ್ಣವರ, ರುದ್ರಮ್ಮ ಗುತ್ತೂರು ಸೇರಿದಂತೆ ಅನೇಕರು ಇದ್ದರು. ಚಂದ್ರಶೇಖರ ಗುಳೇದ ನಿರೂಪಿಸಿದರು, ಅಮರೇಶ ತಮ್ಮಣ್ಣವರ ಸ್ವಾಗತಿಸಿದರು, ಶಂಕ್ರಪ್ಪ ತಳವಾರ ವಂದಿಸಿದರು. ಬೀರಪ್ಪ ಕಡ್ಲಿಮಟ್ಟಿಗೆ ಶಿಕ್ಷಕ ವೃಂದ, ಆಪ್ತ ವಲಯದವರು ಸನ್ಮಾನಿಸಿ ಗೌರವಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತದ ಗುರು-ಶಿಷ್ಯ ಪರಂಪರೆ ಜಗತ್ತಿನಲ್ಲಿಯೇ ಶ್ರೇಷ್ಠ: ಚಕ್ರವರ್ತಿ ಸೂಲಿಬೆಲೆ
ನೀತಿ, ನಿಯಮ ಇಲ್ಲದೆ ಸಮಾಜ, ನಾಡು ಬೆಳೆಯದು: ರಂಭಾಪುರಿ ಶ್ರೀ