ನಷ್ಟದಿಂದ ಚಿಮೂಲ್‌ ಹೊರತರುವುದೇ ಮೊದಲ ಗುರಿ: ಹುಜುಗೂರು ರಾಮಣ್ಣ

KannadaprabhaNewsNetwork |  
Published : Sep 13, 2026, 02:15 AM IST
ಸುದ್ದಿ ಚಿತ್ರ ೧ತಾಲ್ಲೂಕಿನ ಹುಜುಗೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಚಿಮೂಲ್ ನಿರ್ದೇಶಕ ಹುಜುಗೂರು ರಾಮಣ್ಣ ಮಾತನಾಡಿದರು | Kannada Prabha

ಸಾರಾಂಶ

ಮುಂದುವರಿದು ಚಿಮೂಲ್ ಹೊಸದಾಗಿ ರೂಪುಗೊಂಡಿರುವ ಹಿನ್ನೆಲೆಯಲ್ಲಿ ಆರ್ಥಿಕ ಸವಾಲುಗಳಿದ್ದು, ಪ್ರತಿದಿನ ಸುಮಾರು 5.50 ಲಕ್ಷ ಲೀಟರ್ ಹಾಲು ಉತ್ಪಾದನೆಯಾದರೂ ಪ್ರಸ್ತುತ ಸುಮಾರು ೨ ಲಕ್ಷ ಲೀಟರ್‌ನ್ನು ಮಾತ್ರ ಪ್ಯಾಕ್ ಮಾಡಿ ವಿತರಿಸಲು ಸಾಧ್ಯವಾಗುತ್ತಿದೆ. ಉಳಿದ ಹಾಲನ್ನು ಬೇರೆ ಒಕ್ಕೂಟಗಳಿಗೆ ಕಳುಹಿಸಿ ಪ್ಯಾಕ್ ಮಾಡಿಸಬೇಕಾಗಿರುವುದರಿಂದ ಹೆಚ್ಚುವರಿ ವೆಚ್ಚವಾಗುತ್ತಿದೆ. ಇದರಿಂದ ಒಕ್ಕೂಟ ನಷ್ಟದಲ್ಲಿದ್ದು, ಯಾವುದೇ ಹಣ ದುರುಪಯೋಗ ಅಥವಾ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ಹಾಲು ಉತ್ಪಾದಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಬಲಪಡಿಸಲು ಚಿಕ್ಕಬಳ್ಳಾಪುರ- ಕೋಲಾರ ಹಾಲು ಒಕ್ಕೂಟ ಆರ್ಥಿಕವಾಗಿ ಸದೃಢಗೊಳಿಸುವ ಅಗತ್ಯವಿದೆ ಎಂದು ಚಿಮೂಲ್ ನಿರ್ದೇಶಕ ಹುಜುಗೂರು ರಾಮಣ್ಣ ಹೇಳಿದರು.

ತಾಲೂಕಿನ ಹುಜುಗೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ಬಿಎಂಸಿ ಕೇಂದ್ರ ಸ್ಥಾಪಿಸುವ ಉದ್ದೇಶವಿದ್ದು, ಸುತ್ತಮುತ್ತಲಿನ ಗ್ರಾಮಗಳ ಹಾಲು ಸಂಗ್ರಹಕ್ಕೆ ತೊಂದರೆಯಾಗದಂತೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಮುಂದುವರಿದು ಚಿಮೂಲ್ ಹೊಸದಾಗಿ ರೂಪುಗೊಂಡಿರುವ ಹಿನ್ನೆಲೆಯಲ್ಲಿ ಆರ್ಥಿಕ ಸವಾಲುಗಳಿದ್ದು, ಪ್ರತಿದಿನ ಸುಮಾರು 5.50 ಲಕ್ಷ ಲೀಟರ್ ಹಾಲು ಉತ್ಪಾದನೆಯಾದರೂ ಪ್ರಸ್ತುತ ಸುಮಾರು ೨ ಲಕ್ಷ ಲೀಟರ್‌ನ್ನು ಮಾತ್ರ ಪ್ಯಾಕ್ ಮಾಡಿ ವಿತರಿಸಲು ಸಾಧ್ಯವಾಗುತ್ತಿದೆ. ಉಳಿದ ಹಾಲನ್ನು ಬೇರೆ ಒಕ್ಕೂಟಗಳಿಗೆ ಕಳುಹಿಸಿ ಪ್ಯಾಕ್ ಮಾಡಿಸಬೇಕಾಗಿರುವುದರಿಂದ ಹೆಚ್ಚುವರಿ ವೆಚ್ಚವಾಗುತ್ತಿದೆ. ಇದರಿಂದ ಒಕ್ಕೂಟ ನಷ್ಟದಲ್ಲಿದ್ದು, ಯಾವುದೇ ಹಣ ದುರುಪಯೋಗ ಅಥವಾ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ರೈತರ ಹಿತದೃಷ್ಟಿಯಿಂದ ಜಾನುವಾರು ವಿಮೆ ಯೋಜನೆಗೂ ಒಕ್ಕೂಟದಿಂದ ಸುಮಾರು ₹6 ರಿಂದ ₹7 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ವಿಮಾ ಮೊತ್ತದ ಶೇ. 50ರಷ್ಟು ಹಣವನ್ನು ರೈತರು ಹಾಗೂ ಉಳಿದ ಶೇ.50ರಷ್ಟನ್ನು ಒಕ್ಕೂಟ ಭರಿಸುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಂಘದ ವಾರ್ಷಿಕ ಲೆಕ್ಕಪತ್ರ ಹಾಗೂ ಲೆಕ್ಕ ಪರಿಶೋಧನಾ ವರದಿ ಮಂಡಿಸಲಾಯಿತು. ಸಂಘವು 2025-26ನೇ ಸಾಲಿನಲ್ಲಿ ಸುಮಾರು ₹9.57 ಲಕ್ಷ ಒಟ್ಟು ಲಾಭ ಗಳಿಸಿದ್ದು, ವೆಚ್ಚಗಳನ್ನು ಕಳೆದು ಸುಮಾರು ₹5.05 ಲಕ್ಷ ನಿವ್ವಳ ಲಾಭ ಉಳಿದಿದೆ ಎಂದು ತಿಳಿಸಲಾಯಿತು. ನಿವ್ವಳ ಲಾಭವನ್ನು ವಿವಿಧ ನಿಧಿಗಳು, ಸದಸ್ಯರ ಲಾಭಾಂಶ ಹಾಗೂ ಬೋನಸ್‌ಗೆ ನಿಯಮಾನುಸಾರ ಹಂಚಿಕೆ ಮಾಡುವುದಕ್ಕೆ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. 2026-27ನೇ ಸಾಲಿನ ಅಂದಾಜು ಬಜೆಟ್‌ನ್ನೂ ಮಂಡಿಸಲಾಯಿತು.

ಈ ಸಂದರ್ಭದಲ್ಲಿ ಚಿಮೂಲ್ ನಿರ್ದೇಶಕ ಬಂಕ್ ಮುನಿಯಪ್ಪ, ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಟಿ.ಎಲ್. ಅಂಬರೀಶ್, ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಶಿಡ್ಲಘಟ್ಟ ಶಿಬಿರ ಕಚೇರಿಯ ಉಪವ್ಯವಸ್ಥಾಪಕ ರವಿಕಿರಣ್, ವಿಸ್ತರಣಾಧಿಕಾರಿಗಳಾದ ಜಯಚಂದ್ರ, ಸತ್ಯನಾರಾಯಣ ಮತ್ತು ಮಂಜುನಾಥ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಹೆಚ್. ವೆಂಕಟರಾಯಪ್ಪ, ಎಂ.ಪಿ.ಸಿ.ಎಸ್. ಮಾಜಿ ನಿರ್ದೇಶಕ ಕೊಂಡೂರಪ್ಪ, ಚೊಕ್ಕಪ್ಪ, ಗ್ರಾಮದ ಮುಖಂಡರಾದ ಹೆಚ್.ಎಂ. ಶ್ರೀನಿವಾಸಮೂರ್ತಿ, ಕಾರ್ಯಕಾರಿ ಮಂಡಳಿ ಸದಸ್ಯ ಎಚ್.ಕೆ. ಆಂಜಿನಪ್ಪ, ಹಿರಿಯ ಮುಖಂಡ ನರಸಿಂಹಯ್ಯ, ನಿರ್ದೇಶಕ ಎಚ್.ಸಿ. ನರಸಿಂಹಯ್ಯ, ವೆಂಕಟೇಶಪ್ಪ, ಎಚ್.ಎಂ. ಕೃಷ್ಣಾರೆಡ್ಡಿ, ವಿ. ನಾರಾಯಣಸ್ವಾಮಿ, ಮುನಿಸೊಣ್ಣಪ್ಪ, ಕೃಷ್ಣಪ್ಪ, ರಾಮಪ್ಪ, ಸಾವಿತ್ರಮ್ಮ, ಕೋನಮ್ಮ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಗ್ಗಟ್ಟಿದ್ದರೆ ವಕ್ಫ್ ಸಂಸ್ಥೆಗಳ ಅಭಿವೃದ್ಧಿ ಸಾಧ್ಯ!
ವ್ಯಕ್ತಿ ಜೀವಂತವಾಗಿದ್ದರೂ 5 ವರ್ಷಗಳಿಂದ ಸರ್ಕಾರಿ ದಾಖಲೆಗಳಲ್ಲಿ ಮೃತ!