ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಪ್ರಕಟಿಸಿರುವ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ವೀಕೃತವಾಗಿರುವ ಹಕ್ಕು ಮತ್ತು ಆಕ್ಷೇಪಣೆಗಳ ಬಗ್ಗೆ ರಾಜಕೀಯ ಪಕ್ಷಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹನೂರು ವಿಧಾನಸಭಾ ಕ್ಷೇತ್ರದಲ್ಲಿ 679, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ 65, ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 2503, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 3056 ಮತದಾರರು ಸೇರಿದಂತೆ 6303 ಮಂದಿಗೆ ನೋಟಿಸ್ ತಲುಪಿಸಲಾಗಿದೆ. ಈಗಾಗಲೇ 2736 ಮತದಾರರ ವಿಚಾರಣೆ ನಡೆಸಲಾಗಿದೆ. ಇನ್ನು 4744 ಮಂದಿಯ ವಿಚಾರಣೆ ಬಾಕಿ ಇದೆ ಎಂದು ಮಾಹಿತಿ ನೀಡಿದರು.ಸೆ.1ರಿಂದ 7ರವರೆಗೆ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಒಟ್ಟು 1644 ಹಕ್ಕು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ನಮೂನೆ 6ರಲ್ಲಿ (ನಮೂನೆ-9) 608 ಅರ್ಜಿಗಳು, ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು ಕೋರಿ ನಮೂನೆ 7ರಲ್ಲಿ (ನಮೂನೆ-10) 27 ಅರ್ಜಿಗಳು, ಎಪಿಕ್ ಕಾರ್ಡ್ ಬದಲಾವಣೆ, ತಿದ್ದುಪಡಿ, ಅಂಗವಿಕಲರ ಗುರುತಿಸುವಿಕೆಗಾಗಿ ನಮೂನೆ 8ರಲ್ಲಿ (ನಮೂನೆ-11) 895 ಅರ್ಜಿಗಳು, ಸ್ಥಳಾಂತರ, ವಿಧಾನಸಭಾ ಕ್ಷೇತ್ರದೊಳಗೆ ವಿಳಾಸ ಬದಲಾವಣೆಗಾಗಿ ನಮೂನೆ 8ರಲ್ಲಿ (ನಮೂನೆ-11ಎ) 98 ಅರ್ಜಿಗಳು, ಸ್ಥಳಾಂತರ ವಿಧಾನಸಭಾ ಕ್ಷೇತ್ರದ ಹೊರಗೆ ವಿಳಾಸ ಬದಲಾವಣೆಗಾಗಿ ನಮೂನೆ 8ರಲ್ಲಿ (ನಮೂನೆ-11ಬಿ) 16 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ವಿವರ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಚುನಾವಣಾ ಶಿರಸ್ತೇದಾರ್ ನಿತ್ಯ, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎನ್. ನಾಗಯ್ಯ, ಎಸ್.ಬಾಲಸುಬ್ರಹ್ಮಣ್ಯ, ಬಿ.ಎಂ.ಮಹೇಶ್, ಎಸ್.ರಾಮಚಂದ್ರ, ಇತರರು ಹಾಜರಿದ್ದರು.