ಇಳಕಲ್ಲ: ಅವಳಿ ತಾಲೂಕಿನ (ಇಳಕಲ್ಲ, ಹುನಗುಂದ) ಹಾಲುಮತ ಸಮಾಜದ ಆಶ್ರಯದಲ್ಲಿ ಗುಡೂರ ಜಿಪಂ, ಸರ್ವ ಸಮುದಾಯಗಳ ಸಹಯೋಗದಲ್ಲಿ ತಾಲೂಕಿನ ಚಿಲ್ಲಾಪುರ ಗ್ರಾಮದಲ್ಲಿ ದಾಸ ಶ್ರೇಷ್ಠ ಕನಕದಾಸರ ೫೩೭ನೇ ಜನ್ಮದಿನೋತ್ಸವ ಹಾಗೂ ಕನಕದಾಸರ ಕಂಚಿನ ಪುತ್ಥಳಿ ಲೋಕಾರ್ಪಣೆ ಸಮಾರಂಭ ನ.22ರಂದು ನಡೆಯಲಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ನಗರದ ತಮ್ಮ ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಸಮಾರಂಭ ನಮ್ಮ ಭಾಗದ ಪೂಜ್ಯರು ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿದೆ. ಕಾರ್ಯಕ್ರಮ ಉದ್ಘಾಟನೆ ಶಾಸಕ ಎಚ್.ವೈ.ಮೇಟಿ, ಅಧ್ಯಕ್ಷತೆ ಶಾಸಕ ವಿಜಯಾನಂದ ಕಾಶಪ್ಪನವರ ವಹಿಸಿಕೊಳ್ಳಲಿದ್ದಾರೆ. ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಪಣೆಯನ್ನು ಶಾಸಕ ದೊಡ್ಡನಗೌಡ ಪಾಟೀಲ ನೇರವೆರಿಸಲಿದ್ದಾರೆ. ಸಂಚಾಲನೆ ವಿಜಯ ಮಹಾಂತೇಶ ಗದ್ದನಕೇರಿ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ವಿಜಯಮಾಂತೇಶ ಗದ್ದನಕೇರಿ ಮಾತನಾಡಿ, ಶಾಸಕ ವಿಜಯಾನಂದ ಕಾಶಪ್ಪನವರ ತಮ್ಮ ಎಸ್.ಆರ್.ಕೆ ಪ್ರತಿಷ್ಠಾನದಿಂದ ಶ್ರೀ ಕನಕದಾಸರ ಕಂಚಿನ ಮೂರ್ತಿ ಕೊಡುಗೆಯಾಗಿ ನೀಡಿದ್ದಾರೆ. ಅವಳಿ ತಾಲೂಕಿನ ಹಾಲುಮತ ಸಮಾಜದವರು, ಸರ್ವ ಸಮಾಜದವರ ಉಪಸ್ಥಿತಿಯಲ್ಲಿ ಕಂಚಿನ ಮೂರ್ತಿ ಲೋಕಾರ್ಪಣೆ ಹಾಗೂ ತಾಲೂಕು ಆಡಳಿತದಿಂದ ಕನಕದಾಸರ ಜಯಂತ್ಯುತ್ಸವ ಸಮಾರಂಭ ನಡೆಯಲಿದೆ ಎಲ್ಲರೂ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.